Liquor Sale Target : ಮದ್ಯ ಮಾರಾಟಕ್ಕೆ ಇಲಾಖೆಗೆ ಗುರಿ ನಿಗದಿಗೆ ಸ್ಪೀಕರ್‌ ಗರಂ

By Kannadaprabha NewsFirst Published Dec 22, 2021, 9:00 AM IST
Highlights
  •  ಮದ್ಯ ಮಾರಾಟಕ್ಕೆ ಇಲಾಖೆಗೆ ಗುರಿ ನಿಗದಿಗೆ ಸ್ಪೀಕರ್‌ ಗರಂ
  • ಅಬಕಾರಿಯಿಂದ ಹೆಚ್ಚಿನ ಆದಾಯ ಇದೆಯಾದರೂ ಅದಕ್ಕಿಂತ ಜನರ ಜೀವನ ಮುಖ್ಯ
  • ಹಣಕಾಸು ಇಲಾಖೆ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿದರೆ ಅನಾಹುತ ಗೊತ್ತಾದೀತು

ವಿಧಾನಸಭೆ (ಡಿ.22):  ಗ್ರಾಮೀಣ ಭಾಗದಲ್ಲಿ (Rural Area ) ಹಣಕಾಸು ಇಲಾಖೆ ಅಧಿಕಾರಿಗಳಿಗೆ ಪ್ರವಾಸ ಕಳುಹಿಸಿದರೆ ಅಕ್ರಮ ಮದ್ಯ (Liquor) ಮಾರಾಟದಿಂದ ಜನರ ಮೇಲಾಗುವ ವ್ಯತಿರಿಕ್ತ ಪರಿಣಾಮಗಳ ಅರಿವಾಗತ್ತದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಪ್ರಸಂಗ ಜರುಗಿತು. ಮಂಗಳವಾರ ಕಾಂಗ್ರೆಸ್‌ ಸದಸ್ಯ ತುಕಾರಾಂ ಕೇಳಿದ ಪ್ರಶ್ನೆಗೆ ಅಬಕಾರಿ ಸಚಿವ ಗೋಪಾಲಯ್ಯ ನೀಡಿದ ಉತ್ತರಕ್ಕೆ ಸಮಾಧಾನಗೊಳ್ಳದ ಸಭಾಧ್ಯಕ್ಷರು, ಆದಾಯ ಹೆಚ್ಚಿಸಿಕೊಳ್ಳುವ ಒಂದೇ ಉದ್ದೇಶ ಇಟ್ಟುಕೊಂಡು ಹಣಕಾಸು ಇಲಾಖೆ ಅಧಿಕಾರಿಗಳು ಗುರಿ ನೀಡಿದರೆ ಅಕ್ರಮ ಮದ್ಯ (Liquor) ಮಾರಾಟಕ್ಕೆ ಅವಕಾಶ ನೀಡಿದಂತಾಗುತ್ತದೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು, ಕುಟುಂಬಗಳು ಹಾಳಾಗುತ್ತಿವೆ

. ಅಬಕಾರಿ ಇಲಾಖೆಗೆ ಇಂತಿಷ್ಟೇ ಮದ್ಯ (Liqour) ಮಾರಾಟ ಮಾಡಬೇಕು ಎಂಬ ಗುರಿಯನ್ನು ಯಾವುದೇ ಕಾರಣಕ್ಕೂ ನೀಡಬಾರದು. ಸರ್ಕಾರಕ್ಕೆ  ಅಬಕಾರಿಯಿಂದ ಹೆಚ್ಚಿನ ಆದಾಯ ಬರಲಿದೆ ಎಂಬುದು ಗೊತ್ತಿದೆ. ಅದಕ್ಕಿಂತ ಮುಖ್ಯವಾದುದು ಜನರ ಜೀವನ ಎಂದು ಅಭಿಪ್ರಾಯಪಟ್ಟರು.

ಇಂದು ಸಭೆ :  ಅಬಕಾರಿ ಸಚಿವ ಗೋಪಾಲಯ್ಯ (Gopalaiah) ಮಾತನಾಡಿ, ಅಕ್ರಮ ಮದ್ಯ ಮಾರಾಟ ತಡೆ ನಿಟ್ಟಿನಲ್ಲಿ ಬುಧವಾರ ಉತ್ತರ ಕರ್ನಾಟಕದ (Karnataka) ಎಲ್ಲ ಜಿಲ್ಲಾಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ವಲಯ ವ್ಯಾಪ್ತಿಯ ಮಾರ್ಗಗಳಲ್ಲಿ ನಿರಂತರವಾಗಿ ಗಸ್ತು ನಡೆಸಲಾಗುತ್ತಿದೆ. 2018-19ನೇ ಸಾಲಿನಲ್ಲಿ 302, 2019-20ನೇ ಸಾಲಿನಲ್ಲಿ 235, 20-21ರಲ್ಲಿ 255 ಮತ್ತು 2021-22ರ ನವಂಬರ್‌ವರೆಗೆ 82 ಕಡೆ ದಾಳಿ ನಡೆಸಲಾಗಿದೆ ಎಂದು ಹೇಳಿದರು.

ಈ ಊರಲ್ಲಿ ಮದ್ಯ ನಿಷೇಧ :   ಸಿದ್ದಾಪುರ ಹೋಬಳಿಯ ಜಮಾಪುರ ಗ್ರಾಮದಲ್ಲಿ (Jamapur Village) ಕಳೆದ ನಾಲ್ಕು ದಶಕಗಳಿಂದ ಮದ್ಯಪಾನ ಮಾರಾಟ ಮತ್ತು ಮದ್ಯ ಸೇವನೆಯನ್ನು (Alcohol) ಪೂರ್ತಿಯಾಗಿ ನಿಷೇಧಿಸಲಾಗಿದೆ. ಸರ್ಕಾರದ ಯಾವುದೇ ಆದೇಶವಿಲ್ಲದಾಗ್ಯೂ, ಗ್ರಾಮಸ್ಥರೇ ಸ್ವತಃ ಜಾರಿಗೆ ತಂದು ಪಾಲಿಸುತ್ತಿರುವ ಈ ಕ್ರಮವು ಇತರ ಗ್ರಾಮಗಳಿಗೂ ಅನುಕರಣೀಯವಾಗಿದೆ. ಸಿದ್ದಾಪುರ ಹೋಬಳಿಯ ಉಳೇನೂರು ಗ್ರಾ.ಪಂ ವ್ಯಾಪ್ತಿಗೆ ಬರುವ ಪೂರ್ತಿ ನೀರಾವರಿ ಪ್ರದೇಶವಾದ ಜಮಾಪುರದಲ್ಲಿ ಭತ್ತ ಪ್ರಮುಖ ಕೃಷಿ ಕಾಯಕ. ಈ ಗ್ರಾಮದಲ್ಲಿ ಸುಮಾರು 450-480 ಮನೆಗಳಿದ್ದು, 2500 ಜನರಿದ್ದಾರೆ. ಗ್ರಾಮ ಶೇ.75ರಷ್ಟುಸಾಕ್ಷರತೆ ಹೊಂದಿದೆ. ಈ ಗ್ರಾಮದವರು ವೈದ್ಯ, ಎಂಜಿನಿಯರ್‌ ಆಗಿದ್ದಾರೆ. ಪೊಲೀಸ್‌, ಶಿಕ್ಷಣ, ಆರೋಗ್ಯ, ನ್ಯಾಯಾಂಗ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮದ 3 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸೇವನೆ ಮಾಡುವಂತಿಲ್ಲ. ಅಲ್ಲದೆ ಗ್ರಾಮಸ್ಥರು ಮದ್ಯ ಸೇವನೆ ಮಾಡುವ ದುಸ್ಸಾಹಸ ಮಾಡಲ್ಲ. ಜತೆಗೆ ಹೊರಗಿನಿಂದ ಬರುವ ಯಾರೂ ಮದ್ಯದ ಬಾಟಲಿ ತರುವ ಧೈರ್ಯ ಮಾಡಿಲ್ಲ. ಆದರೆ ಗ್ರಾಮದ 4 ಕಿ.ಮೀ. ಆಚೆಗೆ ಮದ್ಯ ಲಭ್ಯವಿದೆ. ಕೆಲ ಗ್ರಾಮಸ್ಥರು ಅಲ್ಲಿಗೆ ಹೋಗಿ ಮದ್ಯಪಾನ ಮಾಡುತ್ತಾರೆ. ಆದರೆ ಮದ್ಯಪಾನ ಮಾಡಿದ ದಿನ ಅವರಾರ‍ಯರೂ ಗ್ರಾಮಕ್ಕೆ ಬರುವಂತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ರಾಜಕಾರಣಿಗಳೂ ಚುನಾವಣೆ ವೇಳೆ ಮದ್ಯ ಹಂಚುವಂತಿಲ್ಲ!

ಮತದಾರರ ಓಲೈಕೆಗಾಗಿ ಚುನಾವಣೆ ವೇಳೆ ರಾಜಕಾರಣಿಗಳು ಗ್ರಾಮಸ್ಥರಿಗೆ ಮದ್ಯದ ಬಾಟಲಿಗಳನ್ನು ನೀಡುತ್ತಾರೆ ಎಂಬ ಮಾತಿದೆ. ಆದರೆ ಈ ಗ್ರಾಮದಲ್ಲಿ ರಾಜಕಾರಣಿಗಳ ಮದ್ಯ ಹಂಚಿಕೆಗೂ ಅಲಿಖಿತ ನಿರ್ಬಂಧವಿದೆ. ಹೀಗಾಗಿ ಚುನಾವಣೆಗಳು ಬಂದರೂ ಈ ಗ್ರಾಮಕ್ಕೆ ಮದ್ಯದ ಬಾಟಲಿಗಳಿಗೆ ಮಾತ್ರ ಪ್ರವೇಶವಿರಲ್ಲ. ದಿನಗೂಲಿಗಳು, ಹಮಾಲರು ಸೇರಿದಂತೆ ಯಾರೊಬ್ಬರೂ ಮದ್ಯ ಸೇವನೆ ಮಾಡಲ್ಲ.

12 ವರ್ಷಗಳ ಹಿಂದೆ ಗ್ರಾಮದೇವತೆ ಉಡುಚಲಮ್ಮದೇವಿ ಜಾತ್ರೆ ವೇಳೆ ಗ್ರಾಮದಲ್ಲಿ ದಿಢೀರ್‌ ಮದ್ಯದಂಗಡಿಯೊಂದು ತಲೆ ಎತ್ತಿತ್ತು. ಇದರ ಬೆನ್ನಲ್ಲೆ ಮದ್ಯದಂಗಡಿಗಳ ಸಂಖ್ಯೆ ನಾಲ್ಕಕ್ಕೇರಿದವು. ಈ ವೇಳೆ ಊರಿನ ಹಿರಿಯರು ಒಕ್ಕೊರಲಿನಿಂದ ಮದ್ಯದ ಅಂಗಡಿಗಳಿಗೆ ನುಗ್ಗಿ ಬಾಟಲಿಗಳನ್ನು ದೇವಸ್ಥಾನದ ಮುಂದೆ ತಂದು ಹಾಕಿ ಪುಡಿ ಪುಡಿ ಮಾಡಿದ್ದರು. ಅದೇ ಕೊನೆ ಗ್ರಾಮಕ್ಕೆ ಇಲ್ಲಿಯವರೆಗೂ ಒಂದೇ ಒಂದು ಬಾಟಲಿ ಮದ್ಯ ಬಂದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಚಾಲಕ ಮದ್ಯಪಾನ ಮಾಡಿದ್ರೆ ಅಮೆರಿಕ ಕಾರು ಚಲಿಸೋಲ್ಲ, ಹೊಸ ವ್ಯವಸ್ಥೆ!

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಂದ ಪ್ರತಿ ವರ್ಷ 10 ಸಾವಿರ ಮಂದಿ ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ಹುಡುಕಲು ಅಮೆರಿಕ ಮುಂದಾಗಿದೆ. ಮದ್ಯ ಸೇವಿಸಿದವರು ಕಾರು ಚಾಲನೆಯನ್ನೇ ಮಾಡದಂತೆ ತಡೆಯುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹುಡುಕುವಂತೆ ಆಟೋಮೊಬೈಲ್‌ ಕಂಪನಿಗಳಿಗೆ ತಾಕೀತು ಮಾಡಿದೆ. ಅಮೆರಿಕದ ಸಾರಿಗೆ ಇಲಾಖೆ ಅತ್ಯುತ್ತಮ ತಂತ್ರಜ್ಞಾನಗಳನ್ನು ಅವಲೋಕಿಸಿದ ಬಳಿಕ 2026ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಫಲವಾಗಿ ಲಕ್ಷಾಂತರ ವಾಹನಗಳಲ್ಲಿ ಹೊಸದಾಗಿ ಉಪಕರಣ ಅಳವಡಿಸಬೇಕಾಗುತ್ತದೆ. ಭವಿಷ್ಯದಲ್ಲಿ ಉತ್ಪಾದನೆಯಾಗಬೇಕಾದ ವಾಹನಗಳಲ್ಲಿ ಈ ಉಪಕರಣ ಇರಬೇಕಾಗುತ್ತದೆ.

ಸಂಚಾರ ಸುರಕ್ಷತೆ ಹಾಗೂ ರಸ್ತೆ ಅಪಘಾತ ತಡೆಯುವ ಉದ್ದೇಶದಿಂದ 74 ಲಕ್ಷ ಕೋಟಿ ರು. ಮೊತ್ತದ ಮೂಲಸೌಕರ್ಯ ಪ್ಯಾಕೇಜ್‌ ಅನ್ನು ಅಮೆರಿಕ ಅಂತಿಮಗೊಳಿಸುತ್ತಿದೆ. ಅಧ್ಯಕ್ಷ ಜೋ ಬೈಡೆನ್‌ ಅವರು ಶೀಘ್ರದಲ್ಲೇ ಇದಕ್ಕೆ ಅಂಕಿತ ಹಾಕುವ ನಿರೀಕ್ಷೆ ಇದೆ.

click me!