ಯಡಿಯೂರಪ್ಪ ನನಗೆ ನಗಣ್ಯ : ಎಚ್.ಡಿ ರೇವಣ್ಣ

By Web DeskFirst Published Feb 11, 2019, 11:27 AM IST
Highlights

ಈ ವ್ಯಕ್ತಿ ಬಗ್ಗೆ ನಾನು ಮಾತನಾಡಲು ಹೋದರೆ ಪೊಳ್ಳೆದ್ದು ಹೋಗುತ್ತೇನೆ. ಇದರ ವಿಚಾರ ಜನರಿಗೆ ಬಿಟ್ಟು ನಾನು ನೆಗ್ಲೆಕ್ಟ್ ಮಾಡುತ್ತೇನೆ ಎಂದು ಸಚಿವ ಎಚ್.ಡಿ.ರೇವಣ್ಣ  ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಹಾಸನ : ಯಡಿಯೂರಪ್ಪ ಆಪರೇಷನ್ ಕಮಲದ ಆಡಿಯೋ ವಿಚಾರದ ಬಗ್ಗೆ ನಾನು ಮಾತಾಡೋಕೆ ಹೋದ್ರೆ ಪೊಳ್ಳೆದ್ದು ಹೋಗ್ತೀನಿ. ಅವರ ಬಗ್ಗೆ ಜನರಿಗೆ ಬಿಟ್ಟು ನಾನು ನಿರ್ಲಕ್ಷ್ಯ ಮಾಡುತ್ತೇನೆ ಎಂದು ಎಂದು ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ. 

ಹಾಸನದಲ್ಲಿ ಮಾತನಾಡಿದ ರೇವಣ್ಣ, ಮೊದಲು ಧ್ವನಿ ತಮ್ಮದಲ್ಲ ಎಂದವರು ಈಗ ಒಪ್ಪಿಕೊಂಡಿದ್ದಾರೆ. ಯಾರು ಯಾರನ್ನೇ ಕಳುಹಿಸಲಿ ಇವರೇಕೆ ಆಪರೇಷನ್ ಕಮಲ ಮಾಡುವ ಬಗ್ಗೆ ಮಾತನಾಡಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಆಪರೇಷನ್ : ನನ್ನನ್ನೇ ಸಿಎಂ ಮಾಡಿ ಎಂದಿದ್ದ ಡಿಕೆಶಿ 

ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರ ಹೆಚ್ಚು ಸುಭದ್ರವಾಗಿದ್ದು, ಪತನವಾಗುವ ಸಾಧ್ಯತೆಯೇ ಇಲ್ಲ ಎಂದು ಸರ್ಕಾರದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ಹೆಚ್ಚಿನ ಬರಗಾಲದ ಸ್ಥಿತಿ ಇದ್ದು,  ಇದರ ಬಗ್ಗೆ ಚಿಂತೆ ಮಾಡುವುದು ಬಿಟ್ಟು  ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಡುಗಿದರು.

ಆಡಿಯೋ ನನ್ನದೇ ಎಂದ ಬಿಎಸ್‌ವೈಗೆ ಸಿದ್ದರಾಮಯ್ಯ ಟಾಂಗ್!

ರಾಜ್ಯದಲ್ಲಿ 156 ತಾಲೂಕಿನಲ್ಲಿ ಬರಗಾಲ‌ ಸ್ಥಿತಿ ಇದೆ. ಇದಕ್ಕೆ ನಾವು ಮೂರು ಸಾವಿರ ಕೋಟಿ ನೆರವು ಕೇಳಿದ್ದೆವು.  ಆದರೆ  ನಮಗೆ 900 ಕೋಟಿ ನೀಡಿ, ಪಕ್ಕದ ರಾಜ್ಯ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ಕೊಟ್ಟಿದ್ದಾರೆ.  ಬಿಜೆಪಿ ನಾಯಕರು ರಾಜ್ಯದಲ್ಲಿ ಯಾವ ನೈತಿಕತೆಯಿಂದ ಮತ ಕೇಳುತ್ತಾರೆ ಎಂದು ಬಿಜೆಪಿಗರ ವಿರುದ್ಧ ಹರಿಹಾಯ್ದರು. 

ಐದು ವರ್ಷ ರಾಜ್ಯಕ್ಕೆ ನಿಮ್ಮ‌ ಕೊಡುಗೆ ಏನು ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಉದ್ಯೋಗ ಖಾತ್ರಿ ಯೋಜನೆಯದ್ದೇ ಎರಡೂವರೆ ಕೋಟಿ ಬಾಕಿ ಬರಬೇಕಿದೆ. ಅದರ‌ ಬಗ್ಗೆ ಬಿಜೆಪಿ ನಾಯಕರಿಗೆ ಚಿಂತೆಯಿಲ್ಲ. ಅದು ಬಿಟ್ಟು ಆಪರೇಷನ್ ಕಮಲದ್ದೇ ಜಪ ಮಾಡುತ್ತಿದ್ದಾರೆ ಎಂದು ರೇವಣ್ಣ ಕಿಡಿ ಕಾರಿದರು.

click me!