ಬಿಜೆಪಿ ಆಪರೇಷನ್ : ನನ್ನನ್ನೇ ಸಿಎಂ ಮಾಡಿ ಎಂದಿದ್ದ ಡಿಕೆಶಿ

Published : Feb 11, 2019, 10:59 AM ISTUpdated : Feb 11, 2019, 11:32 AM IST
ಬಿಜೆಪಿ ಆಪರೇಷನ್ : ನನ್ನನ್ನೇ ಸಿಎಂ ಮಾಡಿ ಎಂದಿದ್ದ  ಡಿಕೆಶಿ

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸ್ಥಿತಿ ನಿರ್ಮಾಣವಾಗುತ್ತಿದೆ. ಇದೇ ಸಂದರ್ಭದಲ್ಲಿ ಸಚಿವ ಡಿಕೆ ಶಿವಕುಮಾರ್ ಆಪರೆಷನ್ ಕಮಲ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. 

ಬೆಂಗಳೂರು :  ಹಿಂದೊಮ್ಮೆ ಜನಾರ್ದನರೆಡ್ಡಿ ನಮ್ಮ ಶಾಸಕರಿಗೆ ಕರೆ ಮಾಡಿ ಬಿಜೆಪಿಗೆ ಆಹ್ವಾನ ಕೊಟ್ಟಿದ್ದಾಗ ನಾನು ಮಾತನಾಡಿ ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದೆ ಎಂದು ಇದೇ ವೇಳೆ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಮೊದಲು, ತಮಗೇ ಜನಾರ್ದನರೆಡ್ಡಿ ಕರೆ ಮಾಡಿದ್ದರು ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು. 

ಆಡಿಯೋ ನನ್ನದೇ ಎಂದ ಬಿಎಸ್‌ವೈಗೆ ಸಿದ್ದರಾಮಯ್ಯ ಟಾಂಗ್!

ನಂತರ ತಿದ್ದಿಕೊಂಡು, ನಮ್ಮ ಶಾಸಕರಿಗೆ ಜನಾರ್ದನ ರೆಡ್ಡಿ ಕರೆ ಮಾಡಿದ್ದರು. ಆಗ ನಾನು ಶಾಸಕರ ಫೋನ್‌ನಲ್ಲಿ ಮಾತನಾಡಿ ಸುಮ್ಮನೆ ಯಾಕಪ್ಪ ನಮ್ಮ ಶಾಸಕರಿಗೆ ತೊಂದರೆ ಕೊಡುತ್ತೀರಿ? ಹೊಸದಾಗಿ ಗೆದ್ದಿದ್ದಾರೆ, ಅವರನ್ನು ಯಾಕೆ ಹಾಳು ಮಾಡ್ತಿದೀರ, ಅದರ ಬದಲು ನನ್ನನ್ನೇ ಮುಖ್ಯಮಂತ್ರಿ ಮಾಡಿ ಅಂತ ಕೇಳಿದ್ದೆ ಎಂದು ಹೇಳಿದರು. ಯಾವಾಗ ಕರೆ ಮಾಡಿದ್ದರು, ಆ ಬಗ್ಗೆ ಆಡಿಯೋ ಏನಾದರೂ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸದೇ ನಗುತ್ತಾ ತೆರಳಿದರು.

ಸಿಎಂ ವಿರುದ್ಧ ಬಿಜೆಪಿ ಹೊಸ ಬಾಂಬ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!