Covid Crisis: ಕರ್ನಾಟಕದಲ್ಲೂ ಮಾಸ್ಕ್‌ ಕಡ್ಡಾಯ ನಿಯಮ ರದ್ದು?

Published : Apr 05, 2022, 05:59 AM IST
Covid Crisis: ಕರ್ನಾಟಕದಲ್ಲೂ ಮಾಸ್ಕ್‌ ಕಡ್ಡಾಯ ನಿಯಮ ರದ್ದು?

ಸಾರಾಂಶ

*  ತಜ್ಞರ ಜತೆ ಚರ್ಚಿಸಿ ನಿರ್ಧಾರ: ಸಚಿವ ಸುಧಾಕರ್‌ *  ರಾಜ್ಯ​ದ​ಲ್ಲಿ ಶೇ.90ರಷ್ಟು ಜನ ಮಾಸ್ಕ್‌ ಧರಿ​ಸು​ತ್ತಿ​ಲ್ಲ *  ಈಗಾಗಲೇ ಈಗಾಗಲೇ ದೇಶದ ಮೂರ್ನಾಲ್ಕು ರಾಜ್ಯಗಳಲ್ಲಿ ಮಾಸ್ಕ್‌  ಧಾರಣೆ ಕಡ್ಡಾಯ ನಿಯ​ಮಕ್ಕೆ ವಿನಾಯ್ತಿ   

ಬೆಂಗಳೂರು(ಏ.05): ಕೆಲ ದೇಶಗಳಲ್ಲಿ ಕೋವಿಡ್‌-19ರ(Covid-19) ನಾಲ್ಕನೇ ಅಲೆ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಮಾಸ್ಕ್‌(Mask) ಧಾರಣೆ ಕಡ್ಡಾಯ ನೀತಿಯನ್ನು ಸಡಿಲಿಸಬೇಕೇ ಅಥವಾ ಮುಂದುವರಿಸಬೇಕೇ ಎಂಬ ಬಗ್ಗೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಸಮಾಲೋಚಿಸಿ ತೀರ್ಮಾನಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌(K Sudhakar) ಹೇಳಿದ್ದಾರೆ.

ಸೋಮ​ವಾರ ಸುದ್ದಿ​ಗಾ​ರರ ಜತೆ​ಗೆ ಮಾತ​ನಾಡಿ, ಈಗಾಗಲೇ ದೇಶದ(India) ಮೂರ್ನಾಲ್ಕು ರಾಜ್ಯಗಳಲ್ಲಿ ಮಾಸ್ಕ್‌  ಧಾರಣೆ ಕಡ್ಡಾಯ ನಿಯ​ಮಕ್ಕೆ ವಿನಾಯ್ತಿ ನೀಡಲಾ​ಗಿ​ದೆ. ರಾಜ್ಯ​ದಲ್ಲಿ(Karnataka) ಈವ​ರೆಗೆ ಮಾಸ್ಕ್‌ ನಿಯಮವನ್ನು ಸಡಿಲಗೊಳಿಸಿ ಸರ್ಕಾರ ಆದೇಶ ಹೊರಡಿಸಿಲ್ಲ. ಆದರೆ ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವ ಶೇ.90 ಮಂದಿ ಮಾಸ್‌್ಕ ಧರಿಸುತ್ತಿಲ್ಲ. ಅವರಿಗೆ ದಂಡವನ್ನೂ ಸಹ ವಿಧಿಸುತ್ತಿಲ್ಲ. ಇದರಿಂದ ಅಘೋಷಿತವಾಗಿ ಮಾಸ್‌್ಕ ಕಡ್ಡಾಯ ನೀತಿಯನ್ನು ಕೈಬಿಟ್ಟಂತೆ ಆಗಿದೆ. ಆದರೂ ತಜ್ಞರ ಜೊತೆ ಚರ್ಚಿಸಿ ಬಳಿಕ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಮಹಾರಾಷ್ಟ್ರ, ದಿಲ್ಲಿಯಲ್ಲಿ ಇನ್ನು ಮಾಸ್ಕ್‌ ಕಡ್ಡಾಯವಲ್ಲ: ಎರಡು ವರ್ಷಗಳ ಬಳಿಕ ನಿಯಮ ರದ್ದು

ಚೀನಾ(China) ಮತ್ತು ಕೆಲ ದೇಶದಲ್ಲಿ ಹೊಸ ತಳಿ ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ(WHO) ಅಭಿಪ್ರಾಯವನ್ನು ನಾವು ಗಮನಿಸುತ್ತಿದ್ದೇವೆ. ಜಿನೋಮಿಕ್‌ ಸೀಕ್ವೆನ್ಸಿಂಗ್‌ ಈಗಲೂ ನಡೆಯುತ್ತಿದೆ ಎಂದು ತಿಳಿಸಿದರು.

ಹರ್ಯಾಣದಲ್ಲೂ ಮಾಸ್ಕ್‌ ಕಡ್ಡಾಯ ನಿಯಮ ರದ್ದು

ಚಂಡೀಗಢ: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ (Covid Cases) ಸಂಖ್ಯೆ ಸಾಕಷ್ಟುಇಳಿಕೆಯಾಗಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ (Mask) ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ಹರ್ಯಾಣ ಸರ್ಕಾರ (Haryana Government) ತೆಗೆದುಹಾಕಿದೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದಿದ್ದರೆ ದಂಡ ವಿಧಿಸಲಾಗುವುದಿಲ್ಲ. ಆದರೆ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದೆ. ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳ ನಿರ್ಧಾರದ ಬೆನ್ನಲ್ಲೇ ಹರ್ಯಾಣದಲ್ಲೂ ಅಂಥದ್ದೇ ನಿಯಮ ಜಾರಿಗೊಳಿಸಲಾಗಿದೆ.

Bengaluru: ಕೊರೋನಾ ಭಯವಿಲ್ಲ; ಮಾಸ್ಕ್‌ ಮಾಯ..!

ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ. ಮಾಸ್ಕ್‌ ಧರಿಸದೇ ಇದ್ದರೆ, ಈ ಹಿಂದೆ ವಿಧಿಸಲಾಗುತ್ತಿದ್ದ 500ರು. ದಂಡವನ್ನು ಇನ್ನು ವಿಧಿಸಲಾಗುವುದಿಲ್ಲ. ಆದರೆ ಈ ಆದೇಶದ ಹೊರತಾಗಿಯೂ ಜನರಿಗೆ ಮಾಸ್ಕ್‌ ಧರಿಸುವುದು, ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳುವುದು, ಆಗಾಗ್ಗೆ ಸ್ಯಾನಿಟೈಸರ್‌ ಬಳಕೆ ಮಾಡುವುದು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಸರ್ಕಾರ ಸಲಹೆ ನೀಡಲಿದೆ ಎಂದು ಹೇಳಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದರಿಂದ 2020ರ ಮೇ 27ರಿಂದ ಮಾಸ್ಕ್‌ ಧರಿಸುವುದನ್ನು ಹರ್ಯಾಣ ಸರ್ಕಾರ ಕಡ್ಡಾಯ ಮಾಡಿತ್ತು.

'ಮಾಸ್ಕ್ ಧಾರಣೆ ನಿಯಮ ರದ್ದು ಆತುರದ ನಿರ್ಧಾರ: 

ರಾಜ್ಯಗಳು ಕಡ್ಡಾಯ ಮಾಸ್ಕ್ ಧಾರಣೆ ನಿರ್ಬಂಧವನ್ನು ರದ್ದುಗೊಳಿಸಿದ್ದು ಆತುರದ ನಿರ್ಣಯವಾಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ದಾಖಲಾದ ಹಿನ್ನೆಲೆಯಲ್ಲಿ ಗುರುವಾರ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಮಾಸ್‌್ಕ ಏ.2 ರಿಂದ ಕಡ್ಡಾಯವಲ್ಲ ಎಂದು ಘೋಷಿಸಿತ್ತು. ಅದೇ ರೀತಿ ದೆಹಲಿ ಸರ್ಕಾರ ಮಾಸ್ಕ್ ಧರಿಸದೇ ಇರುವವರ ಮೇಲಿನ ದಂಡವನ್ನು ತೆಗೆದುಹಾಕಿತ್ತು.

ಈ ಹಿನ್ನೆಲೆಯಲ್ಲಿ ಫೋರ್ಟೀಸ್‌ ಅಸ್ಪತ್ರೆಯ ಜಂಟಿ ನಿರ್ದೇಶಕರಾದ ಡಾ. ರವಿ ಶೇಖರ್‌ ಝಾ ‘ಮಾಸ್ಕ್‌ ಧಾರಣೆ ಕಡ್ಡಾಯವೆಂಬ ನಿರ್ಬಂಧ ತೆಗೆದುಹಾಕುವುದು ಆತುರದ ನಿರ್ಧಾರವಾಗಿದೆ. ದೇಶ ಇನ್ನೂ ಸಂಪೂರ್ಣವಾಗಿ ಕೋವಿಡ್‌ ಮುಕ್ತವಾಗಿಲ್ಲ. ಎಲ್ಲ ನಾಗರಿಕರಿಗೂ ಇನ್ನೂ ಕೋವಿಡ್‌ ಲಸಿಕೆಯ ಎರಡೂ ಡೋಸುಗಳು ಲಭ್ಯವಾಗಿಲ್ಲ. ಲಸಿಕೆ ನೀಡಿದರೂ ಅದು ಕೋವಿಡ್‌ ತಗುಲದಂತೇ ಜನರನ್ನು ರಕ್ಷಿಸುವುದಿಲ್ಲ. ಬದಲಾಗಿ ಮಾರಣಾಂತಿಕ ಮಟ್ಟಕ್ಕೆ ತಲುಪದಂತೇ ತಡೆಯುತ್ತದೆ. ಹೀಗಾಗಿ ಕೋವಿಡ್‌ ಹರಡುವಿಕೆ ತಡೆಗಟ್ಟಲು ಮಾಸ್‌್ಕ ಅತ್ಯುತ್ತಮ ವಿಧಾನವಾಗಿದೆ. ಮಾಸ್‌್ಕನಿಂದಾಗಿ ಕೋವಿಡ್‌ ಮಾತ್ರವಲ್ಲ, ಕೋವಿಡ್‌ಗಿಂತಲೂ ಹೆಚ್ಚು ಮಾರಣಾಂತಿಕವಾದ ಹಂದಿ ಜ್ವರ, ಫ್ಲೂ ಹಾಗೂ ಕೊರೋನಾ ಸಂಯೋಜನೆಯ ಫ್ಲೂರೋನಾದಿಂದಲೂ ರಕ್ಷಣೆ ಸಿಗುತ್ತದೆ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!