Price Hike: ವಿದ್ಯುತ್ ದರ ಏರಿಕೆ, ಎಷ್ಟು ಯುನಿಟ್‌ಗೆ ಎಷ್ಟು ರೇಟ್?

Published : Apr 04, 2022, 10:29 PM IST
Price Hike: ವಿದ್ಯುತ್ ದರ ಏರಿಕೆ, ಎಷ್ಟು ಯುನಿಟ್‌ಗೆ ಎಷ್ಟು ರೇಟ್?

ಸಾರಾಂಶ

* ಪ್ರತಿ ಯೂನಿಟ್‌ಗೆ 35 ಪೈಸೆ ಹೆಚ್ಚಳ * ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಅನುಮೋದನೆ * ಎಲೆಕ್ಟ್ರಿಕಲ್ ವೆಹಿಕಲ್‌ ಚಾರ್ಜಿಂಗ್‌ಗೆ ದರ ಏರಿಕೆ ಇಲ್ಲ

ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು

ಬೆಂಗಳೂರು (ಏ.04): ಬೆಲೆ ಏರಿಕೆ ಬಿಸಿ ನಡುವೆಯೂ ರಾಜ್ಯದ (Karnataka) ಜನರಿಗೆ ಸರ್ಕಾರ (Government) ಮತ್ತೊಂದು ಶಾಕ್ ನೀಡಿದೆ. ಪೆಟ್ರೋಲ್, ಡೀಸೆಲ್,‌ ಗ್ಯಾಸ್ ಆಯಿತು. ಇದೀಗ ವಿದ್ಯುತ್ ದರ (Electricity Bill) ಏರಿಕೆ ಸರದಿ. ಈ ತಿಂಗಳಿನಿಂದಲೇ ವಿದ್ಯುತ್ ದರ ಪ್ರತಿ ಯೂನಿಟ್‌ಗೆ ಬರೋಬ್ಬರಿ 35 ಪೈಸೆ ಏರಿಕೆ ಮಾಡಿದೆ. ಬೆಲೆ ಏರಿಕೆ. ಬೆಲೆ ಏರಿಕೆ. ಬೆಲೆ ಏರಿಕೆ. ಏನು ಖರೀದಿಸಿದರೂ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದೆ. ಕಳೆದೊಂದು ವಾರದಿಂದ ಪೆಟ್ರೋಲ್, ಡೀಸೆಲ್ ದರ ಏರುತ್ತಲೇ ಇದೆ. ಯುದ್ಧದ ಪರಿಣಾಮ ಎಣ್ಣೆ ಬೆಲೆ ಏರಿಕೆಯಾಗ್ತಿದೆ. ಹೋಟೆಲ್‌ನಲ್ಲಿ ದರ ಏರಿಸಲು ಮುಂದಾಗಿದೆ. 

ಇದೀಗ ವಿದ್ಯುತ್ ದರವನ್ನೂ ಸರ್ಕಾರ ಪ್ರತಿ ಯೂನಿಟ್‌ಗೆ  35 ಪೈಸೆ ಹೆಚ್ಚಳ ಮಾಡಿದೆ. ಅಂದ್ರೆ ಈಗ ಕಟ್ಟುವ ಬಿಲ್‌ಗಿಂತ ಇನ್ಮುಂದೆ ಶೇ.4.33ರಷ್ಟು ಹೆಚ್ಚು ದುಡ್ಡು ತೆರಬೇಕಾಗಿದೆ. ಈ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ದರ ಪರಿಷ್ಕರಣೆ ಮಾಡಿ ಅನುಮೋದಿಸಿ ಸುದ್ದಿಗೋಷ್ಟಿಯಲ್ಲಿ ಪ್ರಕಟಣೆ ಮಾಡಿದರು. ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಎಲ್ಲಾ ನಿಗಮಗಳಲ್ಲೂ ಸರಾಸರಿ 35 ಪೈಸೆ ಹೆಚ್ಚಳ ಮಾಡಲಾಗಿದೆ. ಕೇವಲ ವಿದ್ಯುತ್ ದರ ಏರಿಕೆ ಮಾತ್ರವಲ್ಲ, ವಿದ್ಯುತ್ ನಿಗದಿತ ಶುಲ್ಕವೂ ಹೆಚ್ಚಿಸಿದ್ದಾರೆ. ಫಿಕ್ಸೆಡ್‌ ದರವನ್ನು ಪ್ರತಿ ಹೆಚ್ ಪಿ/ಕಿ.ವ್ಯಾ/ಕೆ.ವಿ.ಎಗೆ 10 ರಿಂದ 30 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ಇದು ಜಾರಿಯಾಗಲಿದೆ.

ಯಾವ್ಯಾವುದಕ್ಕೆ ದರ ಹೆಚ್ಚಳ, ಇಳಿಕೆ?
* ಎಲೆಕ್ಟ್ರಿಕ್ ವೆಹಿಕಲ್‌ ಚಾರ್ಜಿಂಗ್ ಹೆಚ್ಚಳ ಮಾಡಿಲ್ಲ

* ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವರುಷದವರೆಗೆ ಪ್ರತಿ ಯೂನಿಟ್‌ಗೆ 50 ಪೈಸೆ ರಿಯಾಯಿತಿ

* ಮಳೆಗಾಲದಲ್ಲಿ ಸಂಜೆ 4ರಿಂದ ರಾತ್ರಿ 10ರವರೆಗೆ ವಿದ್ಯುತ್ ದರ ಸಡಲಿಕೆ ಮುಂದುವರಿಕೆ

* ಹೈಟೆನ್ಶನ್ ವಿದ್ಯುತ್ ಗ್ರಾಹಕರಿಗೆ ರಾತ್ರಿ 10 ಬೆಳಗಿನವರೆಗೆ ಪ್ರತಿ ಯೂನಿಟ್‌ಗೆ 2 ರೂ. ಪ್ರೋತ್ಸಾಹಧನ

* ಪೀಕ್ ಅವಧಿಯಲ್ಲಿ ಸಂಜೆ 4ರಿಂದ ರಾತ್ರಿ 10ರವರೆಗೆ ಹೈಟೆನ್ಶನ್ ವಿದ್ಯುತ್ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 1. ರೂ. ದಂಡ

* ಸೀಸನಲ್‌ ಇಂಡಸ್ಟ್ರೀಸ್ - ಪ್ರತಿ ಯೂನಿಟ್ ರೂ.1 ರಿಯಾಯಿತಿ

ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು 11320 ಕೋಟಿ ಕಂದಾಯ ಕೊರತೆ ನೀಗಿಸಲು ಪ್ರತಿ ಯೂನಿಟ್‌ಗೆ ಸರಾಸರಿ 1.85 ಪೈಸೆ ಹೆಚ್ಚಳ ಮಾಡಲು ಅಂದ್ರೆ ಶೇ.23.83ರಷ್ಟು ದರ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದವು. 2023 ವರ್ಷ 2159 ಕೋಟಿ ಕಂದಾಯ ಕೊರತೆ ನೀಗಿಸಲು ಪ್ರತಿ ಯೂನಿಟ್‌ಗೆ  5 ಪೈಸೆ ಇಂಧನ ಶುಲ್ಕ‌ ಹೆಚ್ಚಳ ಮಾಡಿದೆ. ಈ ಮಧ್ಯೆ ಎಲೆಕ್ಟ್ರಿಕ್ ವಾಹನ ಬಳಕೆ ಪ್ರೋತ್ಸಾಹಿಸಲಿ ಬ್ಯಾಟರಿ ಚಾರ್ಜಿಂಗ್ ಸ್ಟೇಷನ್ ವಿದ್ಯುತ್ ಬಳಕೆ ದರ ಹೆಚ್ಚಳ ಮಾಡಿಲ್ಲ. ಈ ಮೊದಲಿದ್ದಂತೆ ಯೂನಿಟ್‌ಗೆ 5 ರೂ. ಇರಲಿದೆ. 26.39 ಲಕ್ಷ ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಸಂಪರ್ಕಕ್ಕೆ ಉಚಿತ ವಿದ್ಯುತ್ ಸರಬರಾಜು ಮಾಡಲು 618 ಕೋಟಿ ರೂ‌.ಗಳನ್ನು ಸರ್ಕಾರ ಸಹಾಯಧನ ನೀಡಬೇಕಿದೆ.

ಯಾವ ಯಾವ ವರ್ಷದಲ್ಲಿ ಎಷ್ಟು ಹೆಚ್ಚಳ?
* 2009ರಲ್ಲಿ ಪ್ರತಿ ಯೂನಿಟ್‌ಗೆ 34 ಪೈಸೆ ಹೆಚ್ಚಳವಾಗಿತ್ತು
* 2010ರಲ್ಲಿ ಪ್ರತಿ ಯೂನಿಟ್‌ಗೆ 30 ಪೈಸೆ ಏರಿಕೆ
* 2011ರಲ್ಲಿ ಪ್ರತಿ ಯೂನಿಟ್‌ಗೆ 28 ಪೈಸೆ
* 2012ರಲ್ಲಿ ಪ್ರತಿ ಯೂನಿಟ್‌ಗೆ 13 ಪೈಸೆ
* 2013ರಲ್ಲಿ ಪ್ರತಿ ಯೂನಿಟ್‌ಗೆ 13 ಪೈಸೆ
* 2017ರಲ್ಲಿ ಪ್ರತಿ ಯೂನಿಟ್‌ಗೆ 48 ಪೈಸೆ
* 2019ರಲ್ಲಿ ಪ್ರತಿ ಯೂನಿಟ್‌ಗೆ 35 ಪೈಸೆ
* 2020ರಲ್ಲಿ ಪ್ರತಿ ಯೂನಿಟ್‌ಗೆ 30 ಪೈಸೆ ಹೆಚ್ಚಳ 
* 2021ರಲ್ಲಿ ಪ್ರತಿ ಯೂನಿಟ್‌ಗೆ 30 ಪೈಸೆ ಹೆಚ್ಚಳ

ಪ್ರತಿ ಯೂನಿಟ್ ಖರೀದಿಗೆ 6.43 ಪೈಸೆ ಆಗುತ್ತೆ. ಸರಬರಾಜು ಮಾಡಲು 8.43 ಪೈಸೆ ಖರ್ಚಾಗುತ್ತೆ. ಸರ್ಕಾರ ಹೆಚ್ಚುವರಿ ಹಣವನ್ನು ಭರಿಸಬೇಕಾಗುತ್ತದೆ. ಒಟ್ಟು ಶೇ. 13ರಷ್ಟು ವಿದ್ಯುತ್ ಸೋರಿಕೆಯಿಂದ ನಷ್ಟ ಅನುಭವಿಸುತ್ತಿದೆ. ಎಲ್ಲ ದರ ಏರಿಕೆ ಮಧ್ಯೆ ವಿದ್ಯುತ್ ದರವೂ ಏರಿಕೆ ಜನಸಾಮಾನ್ಯರ ಜೀವನ ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌