* ಮೈಸೂರಿನಲ್ಲಿ ಯುಗಾದಿಯ ಮುನ್ನಾದಿನ ಉತ್ತರಾದಿ ಮಠದಲ್ಲಿ ನಡೆದ ಸಮಾರಂಭ
* ಸಮಾರಂಭದಲ್ಲಿ ಶ್ರೀ ಸತ್ಯಾತ್ಮತೀರ್ಥರಿಗೆ ಸಮಾನವಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಒಪ್ಪದೆ ರಾಜವಂಶಸ್ಥ
* ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನಡವಳಿಕೆ ಭಾರಿ ಮೆಚ್ಚುಗೆ
ಮೈಸೂರು(ಏ.04): ಮೈಸೂರಿನಲ್ಲಿ ಯುಗಾದಿಯ ಮುನ್ನಾದಿನ ಉತ್ತರಾದಿ ಮಠದಲ್ಲಿ ನಡೆದ ಸಮಾರಂಭವೊಂದರಲ್ಲಿ ಶ್ರೀ ಸತ್ಯಾತ್ಮತೀರ್ಥರಿಗೆ ಸಮಾನವಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಒಪ್ಪದೆ ನೆಲದ ಮೇಲೆ ಕುಳಿತ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನಡವಳಿಕೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗುರುವಿಗೆ ಸಮಾನವಾಗಿ ಕುರ್ಚಿಯಲು ಕುಳಿತುಕೊಳ್ಳಲು ಒಪ್ಪದೇ ಕೆಳಗೆ ಕುಳಿತುಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಯುಗಾದಿ ಹಬ್ಬದ ಹಿಂದಿನ ದಿನ ಮೈಸೂರಿನ ಅಗ್ರಹಾರದಲ್ಲಿರುವ ಉತ್ತರಾದಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಜೊತೆ ಯದುವೀರ ಭಾಗಿಯಾಗಿದ್ದರು. ವೇದಿಕೆಯಲ್ಲಿ ಶ್ರೀಗಳ ಪಕ್ಕದಲ್ಲೇ ಯದುವೀರ ಅವರಿಗೆ ಆಸನ ನೀಡಲಾಗಿತ್ತು. ಆದರೆ, ಅಲ್ಲಿ ಕುಳಿತುಕೊಳ್ಳದೆ ಪದ್ಮಾಸನ ಹಾಕಿಕೊಂಡು ಕೆಳಗೆ ಕುಳಿತರು. ಇದು ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಈ ಬಗ್ಗೆ ಫೇಸ್‌ಬುಕ್ ಪೋಸ್ಟ್ ಮಾಡಿರುವ ಯದುವೀರ್ 'ಮೈಸೂರಿನ ಶ್ರೀಮದುತ್ತರಾದಿ ಮಠದಲ್ಲಿ ನಡೆದ ಶ್ರೀ ಶ್ರೀ 1008 ಶ್ರೀ ಸತ್ಯಸಂತುಷ್ಟ ತೀರ್ಥರ ಆರಾಧನಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಎಲ್ಲರಿಗೂ ಒಳ್ಳೆಯ ಆರೋಗ್ಯ, ಐಶ್ವರ್ಯ ಅಭಿವೃದ್ಧಿಯಾಗಲೆಂದು ಶ್ರೀ ಸ್ವಾಮಿಗಳವರಲ್ಲಿ ಪ್ರಾರ್ಥಿಸಲಾಯಿತು' ಎಂದಿದ್ದಾರೆ,
'