ಶೂನ್ಯ ಉಳಿತಾಯ ಖಾತೆಗೂ ಕನಿಷ್ಠ ಬ್ಯಾಲೆನ್ಸ್‌ ಕಟ್ಟಪ್ಪಣೆ; ಬ್ಯಾಂಕ್‌ಗಳ ಧೋರಣೆಗೆ ವಿದ್ಯಾರ್ಥಿಗಳು ಹೈರಾಣು!

By Kannadaprabha News  |  First Published Aug 19, 2023, 12:56 PM IST

ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಉಳಿತಾಯ ಖಾತೆ ತೆರೆದರೆ ಅಂತಹ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಮೊತ್ತ ಇರಬೇಕು ಎಂಬ ನಿಯಮ ಇಲ್ಲ ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌(ಆರ್‌ಬಿಐ) ನಿಯಮವೇ ಹೇಳುತ್ತದೆ. ಆದರೆ ಮಂಗಳೂರಿನ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಇದು ತಮಗೆ ಅನ್ವಯವಾಗುತ್ತಿಲ್ಲ ಎಂಬಂತೆ ವರ್ತಿಸುತ್ತಿರುವ ಬಗ್ಗೆ ಆರೋಪ ಕೇಳಿಬರುತ್ತಿದೆ.


-ಆತ್ಮಭೂಷಣ್‌

 ಮಂಗಳೂರು (ಆ.19) :  ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಉಳಿತಾಯ ಖಾತೆ ತೆರೆದರೆ ಅಂತಹ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಮೊತ್ತ ಇರಬೇಕು ಎಂಬ ನಿಯಮ ಇಲ್ಲ ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌(ಆರ್‌ಬಿಐ) ನಿಯಮವೇ ಹೇಳುತ್ತದೆ. ಆದರೆ ಮಂಗಳೂರಿನ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಇದು ತಮಗೆ ಅನ್ವಯವಾಗುತ್ತಿಲ್ಲ ಎಂಬಂತೆ ವರ್ತಿಸುತ್ತಿರುವ ಬಗ್ಗೆ ಆರೋಪ ಕೇಳಿಬರುತ್ತಿದೆ. ಅದರಲ್ಲೂ ಶೈಕ್ಷಣಿಕ ಉದ್ದೇಶಕ್ಕಾಗಿ ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆದ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ವಿಧಿಸುತ್ತಿರುವ ಕನಿಷ್ಠ ಬ್ಯಾಲೆನ್ಸ್‌ ಕಟ್ಟಪ್ಪಣೆ ಹೊರೆಯಾಗಿ ಪರಿಣಮಿಸಿದೆ.

Tap to resize

Latest Videos

undefined

ಬ್ಯಾಂಕಿನಲ್ಲಿ ಶೂನ್ಯ ಖಾತೆ ಹೊಂದಿದ್ದರೂ ಅಂತಹವರ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲ ಎಂಬ ಕಾರಣಕ್ಕೆ ದಂಡ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಕೇಳಿಬರುತ್ತಿವೆ.

ಮಹಿಳಾ ಸಮ್ಮಾನ್ ಉಳಿತಾಯ ಖಾತೆ ತೆರೆದ ಒಂದೇ ಕುಟುಂಬದ 5 ತಲೆಮಾರಿನ ಮಹಿಳೆಯರು;ಅಪೂರ್ವ ಕ್ಷಣಕ್ಕೆ ಅಂಚೆ ಇಲಾಖೆ ಸಾಕ್ಷಿ

ಬ್ಯಾಂಕ್‌ಗಳ ಈ ಧೋರಣೆ ಶೈಕ್ಷಣಿಕ ಉದ್ದೇಶಕ್ಕೆ ಖಾತೆ ತೆರೆದ ವಿದ್ಯಾರ್ಥಿಗಳ ಮೇಲಾಗುತ್ತಿದೆ. ನಗರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್‌ ಪಾವತಿ ಸಲುವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶೂನ್ಯ ಬ್ಯಾಲೆನ್ಸ್‌ನಡಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆಯುತ್ತಿವೆ. ಸ್ಕಾಲರ್‌ಶಿಪ್‌ ಖಾತೆಗೆ ಪಾವತಿಗೊಂಡ ಒಂದು ತಿಂಗಳೊಳಗೆ ಅದನ್ನು ಸ್ವೀಕರಿಸದಿದ್ದರೆ ಬ್ಯಾಂಕ್‌ಗಳು ವಿದ್ಯಾರ್ಥಿ ಖಾತೆಯಿಂದ ಸ್ವಯಂ ಆಗಿ 500 ರು. ವರೆಗೆ ಮೊತ್ತ ಕಡಿತಗೊಳಿಸುತ್ತಾರೆ. ವಿದ್ಯಾರ್ಥಿಯ ಅಥವಾ ಪೋಷಕರ ಮೊಬೈಲ್‌ಗೆ ಎಸ್‌ಎಂಎಸ್‌ ಸಂದೇಶ ಬಂದಾಗ ಇಲ್ಲವೇ ವಿಳಂಬವಾಗಿ ಬ್ಯಾಂಕ್‌ಗೆ ತೆರಳಿದಾಗಲೇ ಮೊತ್ತ ಕಡಿತಗೊಂಡಿರುವ ವಿಚಾರ ಅರಿವಿಗೆ ಬರುತ್ತದೆ. ಈ ಬಗ್ಗೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದರೆ, ಸರಿಯಾದ ಉತ್ತರ ಸಿಗುತ್ತಿಲ್ಲ. ಮಾತ್ರವಲ್ಲ ವಿದ್ಯಾರ್ಥಿಗಳು ವಿಚಾರಿಸಿದರೆ ಬ್ಯಾಂಕ್‌ ಸಿಬ್ಬಂದಿ ಉಡಾಫೆಯಿಂದ ವರ್ತಿಸುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.

ಶೂನ್ಯ ಬ್ಯಾಲೆನ್ಸ್‌ಗೂ ದಂಡ: ಶೂನ್ಯ ಬ್ಯಾಲೆನ್ಸ್‌ ಖಾತೆಯಲ್ಲಿ ಕನಿಷ್ಠ ಮೊತ್ತ ಇರಬೇಕು ಎಂದೇನಿಲ್ಲ, ಆದರೆ ಬ್ಯಾಂಕ್‌ನಿಂದ ಖಾತೆದಾರರ ಮೊಬೈಲ್‌ಗೆ ಎಸ್‌ಎಂಎಸ್‌ ಕಳುಹಿಸಿ, ಕನಿಷ್ಠ ಮೊತ್ತ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಾರೆ. ಅದರಲ್ಲಿ ದಂಡ ಶುಲ್ಕ ವಿಧಿಸುವ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಬ್ಯಾಂಕ್‌ಗೆ ಹೋದಾಗಲೇ ಖಾತೆದಾರರಿಗೆ ದಂಡ ವಿಧಿಸಿರುವುದು ಗೊತ್ತಾಗುತ್ತದೆ.

ಹೈಸ್ಕೂಲ್‌ನಲ್ಲಿ ಶೂನ್ಯ ಬ್ಯಾಲೆನ್ಸ್‌ನಡಿ ಖಾತೆ ತೆರೆದಿದ್ದ ನಗರದ ಬಡ ವಿದ್ಯಾರ್ಥಿಯೊಬ್ಬರಿಗೆ ಪ್ರತಿ ವರ್ಷ ಸ್ಕಾಲರ್‌ಶಿಪ್‌ ಪಾವತಿಯಾಗುತ್ತಿತ್ತು. ಅದನ್ನು ಅಗತ್ಯ ಖರ್ಚಿಗಾಗಿ ಕೂಡಲೇ ವಿತ್‌ಡ್ರಾ ಮಾಡಿಕೊಳ್ಳುತ್ತಿದ್ದರು. ಹೀಗೆ ವಿತ್‌ಡ್ರಾ ಮಾಡುತ್ತಾ 10 ರು. ವರೆಗೆ ಬಂದಿತ್ತು. ಆದರೆ ಏಕಾಏಕಿ ಅವರ ಶೂನ್ಯ ಬ್ಯಾಲೆನ್ಸ್‌ನ ಖಾತೆಗೆ ಬ್ಯಾಂಕ್‌ನಿಂದ ದಂಡ ಶುಲ್ಕ ವಿಧಿಸಲಾಗಿತ್ತು. ಅವರ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇಲ್ಲದೇ ಇದ್ದುದರಿಂದ ದಂಡ ಶುಲ್ಕ 571 ರು. ವಿಧಿಸಲಾಗಿದೆ ಎಂದು ಬ್ಯಾಂಕಿನಲ್ಲಿ ವಿಚಾರಿಸಿದಾಗ ತಿಳಿಸಿದ್ದರು. ಇದರಿಂದ ಕಕ್ಕಾಬಿಕ್ಕಿಯಾದ ವಿದ್ಯಾರ್ಥಿ ಇತ್ತ ದಂಡ ಶುಲ್ಕವನ್ನೂ ಪಾವತಿಸಲಾಗದೆ, ಅತ್ತ ಖಾತೆಯನ್ನೂ ರದ್ದುಪಡಿಸಲಾಗದೆ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಖಾತೆ ರದ್ದುಪಡಿಸಬೇಕಾದರೂ ದಂಡ ಶುಲ್ಕ ಪಾವತಿಸಿ, ಮತ್ತೆ ರದ್ದತಿ ಮೊತ್ತವನ್ನೂ ಪ್ರತ್ಯೇಕವಾಗಿ ತೆರಬೇಕು. 

ಸಣ್ಣ ಉಳಿತಾಯ ಖಾತೆದಾರರಿಗೆ ಗುಡ್‌ ನ್ಯೂಸ್‌: ಬಡ್ಡಿ ದರದಲ್ಲಿ ಭಾರಿ ಹೆಚ್ಚಳ


ಸ್ಕಾಲರ್‌ಶಿಪ್‌ ಮೊತ್ತವನ್ನು ನಂಬಿಕೊಂಡು ವಿದ್ಯಾಭ್ಯಾಸ ನಡೆಸುತ್ತಿರುವ ನನ್ನ ಸಹಪಾಠಿಗಳಿಗೂ ಇದೇ ಪರಿಸ್ಥಿತಿ ಉಂಟಾಗಿದೆ. ಶೂನ್ಯ ಬ್ಯಾಲೆನ್ಸ್‌ ಖಾತೆ ಇದ್ದರೂ ಕನಿಷ್ಠ ಬ್ಯಾಲೆನ್ಸ್‌ ಹೊಂದಿರಬೇಕಾದ್ದು ಕಡ್ಡಾಯ ಎಂದು ಬ್ಯಾಂಕ್‌ಗಳು ದಂಡ ವಿಧಿಸಿವೆ. ಬ್ಯಾಂಕ್‌ಗಳ ಈ ಧೋರಣೆ ವಿರುದ್ಧ ಬ್ಯಾಂಕಿಂಗ್‌ ಒಂಬಡ್‌್ಸಮನ್‌ಗೆ ದೂರು ನೀಡಲು ನಿರ್ಧರಿಸಿದ್ದೇನೆ.

-ನೊಂದ ವಿದ್ಯಾರ್ಥಿ, ಮಂಗಳೂರು

ಶೂನ್ಯ ಬ್ಯಾಲೆನ್ಸ್‌ನಡಿ ಖಾತೆ ತೆರೆದರೆ ಯಾರೂ ಕನಿಷ್ಠ ಬ್ಯಾಲೆನ್ಸ್‌ ಉಳಿಸಿಕೊಳ್ಳಬೇಕು ಎಂದು ಬ್ಯಾಂಕ್‌ಗಳು ಕಡ್ಡಾಯ ಮಾಡುವಂತಿಲ್ಲ. ಸಾಮಾನ್ಯ ಉಳಿತಾಯ ಖಾತೆಗೆ ಮಾತ್ರ ಕನಿಷ್ಠ ಬ್ಯಾಲೆನ್ಸ್‌ ಹೊಂದಿರಬೇಕು ಎಂಬ ನಿಯಮ ಇದೆ. ಬ್ಯಾಂಕ್‌ಗಳು ನಿಯಮ ಮೀರಿ ವರ್ತಿಸಿದ ಪ್ರಕರಣಗಳಿದ್ದರೆ ಲಿಖಿತವಾಗಿ ನಮಗೆ ದೂರು ನೀಡಬಹುದು.

-ಕವಿತಾ ಶೆಟ್ಟಿ, ಮೆನೇಜರ್‌, ಲೀಡ್‌ ಬ್ಯಾಂಕ್‌, ಮಂಗಳೂರು

click me!