ಸೌಜನ್ಯ ಪರ ಹೋರಾಟಕ್ಕೆ ಸಜ್ಜಾದ ಕೆಆರ್‌ಎಸ್ ಪಕ್ಷ: 26ರಂದು ಬೆಳ್ತಂಗಡಿ-ಬೆಂಗಳೂರು ಪಾದಯಾತ್ರೆ

By Kannadaprabha News  |  First Published Aug 19, 2023, 12:32 PM IST

ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್‌) ಪಕ್ಷದಿಂದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆಗ್ರಹಿಸಿ ಆ.26ರಿಂದ ಸೆಪ್ಟೆಂಬರ್‌ 8ರ ವರೆಗೆ ಬೆಳ್ತಂಗಡಿಯಿಂದ ಬೆಂಗಳೂರಿಗೆ ‘ದೌರ್ಜನ್ಯ ವಿರುದ್ಧ ಸೌಜನ್ಯ’ ಪಾದಯಾತ್ರೆ ಹೋರಾಟ ನಡೆಯಲಿದೆ.


ಮಂಗಳೂರು (ಆ.19): ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್‌) ಪಕ್ಷದಿಂದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆಗ್ರಹಿಸಿ ಆ.26ರಿಂದ ಸೆಪ್ಟೆಂಬರ್‌ 8ರ ವರೆಗೆ ಬೆಳ್ತಂಗಡಿಯಿಂದ ಬೆಂಗಳೂರಿಗೆ ‘ದೌರ್ಜನ್ಯ ವಿರುದ್ಧ ಸೌಜನ್ಯ’ ಪಾದಯಾತ್ರೆ ಹೋರಾಟ ನಡೆಯಲಿದೆ.

ಕೆಆರ್‌ಎಸ್‌ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.26ರಂದು ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ(Ravikrishnareddy) ನೇತೃತ್ವದಲ್ಲಿ ಬೆಳ್ತಂಗಡಿಯಿಂದ ಪಾದಯಾತ್ರೆ ಹೊರಟು ರಾತ್ರಿ ಧರ್ಮಸ್ಥಳದಲ್ಲಿ ತಂಗಲಿದೆ. ಅಲ್ಲಿ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿ ಮರುದಿನ ಉಜಿರೆ, ಕಳಸ ಮೂಲಕ ಪಾದಯಾತ್ರೆ ಮುಂದುವರಿಯಲಿದೆ. ಸೆಪ್ಟಂಬರ್‌ 7ರಂದು ಬೆಂಗಳೂರು ತಲುಪಲಿದ್ದು, 8ರಂದು ವಿಧಾನಸೌಧಕ್ಕೆ ಪಾದಯಾತ್ರೆ ನಡೆಯಲಿದೆ. ಸೌಜನ್ಯ ಸಾವಿನ ನ್ಯಾಯಕ್ಕೆ ಆಗ್ರಹಿಸುವವರು ಯಾರು ಬೇಕಾದರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಸುಮಾರು 14 ದಿನಗಳ ಕಾಲ ನಡೆಯುವ ಸುಮಾರು 330 ಕಿ.ಮೀ.ಗಳ ಪಾದಯಾತ್ರೆಯಲ್ಲಿ ಸೌಜನ್ಯ ಸಾವು ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರ ಸಾವು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಹಕ್ಕೊತ್ತಾಯ ಮಂಡಿಸಲಿದೆ ಎಂದರು.

Tap to resize

Latest Videos

ಪಕ್ಷದ ಜಿಲ್ಲಾ ಉಸ್ತುವಾರಿ ರಘುಪತಿ ಭಟ್‌, ಜಿಲ್ಲಾಧ್ಯಕ್ಷ ಪ್ರವೀಣ್‌ ಜಾರ್ಜ್, ಪದಾಧಿಕಾರಿಗಳಾದ ಸವಿತಾ, ಯಶೋದ ಇದ್ದರು.

 

ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ: ಪ್ರಮೋದ್‌ ಮುತಾಲಿಕ್‌

click me!