Congress Padayatra: ಮೇಕೆದಾಟು ಜಾರಿ ಶತಸಿದ್ಧ: ಅಶ್ವತ್ಥನಾರಾಯಣ

By Kannadaprabha NewsFirst Published Jan 3, 2022, 5:25 AM IST
Highlights

*  ಮೇಕೆದಾಟು ಯೋಜನೆ ಕುಡಿಯುವ ನೀರಿನ ಪೂರೈಕೆ ಉದ್ದೇಶದ್ದಾಗಿದೆ
*  ಮೇಕೆದಾಟು ಯೋಜನೆಗೆ ಚಾಲನೆ ನೀಡಿದ್ದ ಯಡಿಯೂರಪ್ಪ
*  ಕಾಂಗ್ರೆಸ್‌ ಪಕ್ಷ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಕೈಬಿಡಬೇಕು 
 

ಮಾಗಡಿ(ಡಿ.03):  ರಾಮನಗರ(Ramanagara) ಜಿಲ್ಲೆಯೂ ಸೇರಿದಂತೆ ಬೆಂಗಳೂರು(Bengaluru) ಮಹಾನಗರಕ್ಕೂ ಉಪಯುಕ್ತವಾಗಲಿರುವ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ರಾಜ್ಯ ಸರ್ಕಾರವು ನೂರಕ್ಕೆ ನೂರರಷ್ಟು ಜಾರಿಗೆ ತರಲಿದೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ(CN Ashwathnarayan) ಸ್ಪಷ್ಟಪಡಿಸಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು(Basavaraj Bommai) ಈಗಾಗಲೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌(Gajendra Singh Shekhawat) ಅವರನ್ನು ಐದು ಬಾರಿ ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ತಿಳಿಸಿದರು.

Karnataka Politics: ಸಚಿವ ಕಾರಜೋಳ ‘ಬಾಂಬ್‌’: ಕಾಂಗ್ರೆಸ್‌ ವಿರುದ್ಧ ಶೀಘ್ರ ಸ್ಪೋಟಕ ಸುದ್ದಿ..!

‘ಮೇಕೆದಾಟು ಯೋಜನೆಯು(Mekedatu Project) ಕುಡಿಯುವ ನೀರಿನ ಪೂರೈಕೆ ಉದ್ದೇಶದ್ದಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಇದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ(NGT) ತಡೆಯಾಜ್ಞೆಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇದು ಕಾವೇರಿ ನೀರಿನಲ್ಲಿ(Kaveri Water) ರಾಜ್ಯದ(Karnataka) ಪಾಲನ್ನು ಸದ್ಬಳಕೆ ಮಾಡಿಕೊಳ್ಳುವಂತಹ ಯೋಜನೆಯಾಗಿದೆ’ ಎಂದು ಹೇಳಿದರು.

ಮೇಕೆದಾಟು ಯೋಜನೆಗೆ ಯಡಿಯೂರಪ್ಪನವರೇ(BS Yediyurappa) ಚಾಲನೆ ನೀಡಿದ್ದರು. ಈಗ ಬೊಮ್ಮಾಯಿಯವರು ಕೂಡ ಇದಕ್ಕೆ ಆದ್ಯ ಗಮನ ಕೊಟ್ಟಿದ್ದಾರೆ. ಆದ್ದರಿಂದ ಯೋಜನೆಯ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್‌(Congress) ಪಕ್ಷವು ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು(Padayatra) ಕೈಬಿಡಬೇಕು ಎಂದರು. ಅದರಲ್ಲೂ ಕೊರೋನಾ(Coronavirus) ಪ್ರಕರಣಗಳು ಪುನಃ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅನಗತ್ಯ ಎಂದು ಅವರು ನುಡಿದರು.

ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲವೆಂದ ಡಿ.ಕೆ.ಶಿವಕುಮಾರ್‌

ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಜನವರಿ 9 ರಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲ. ರೋಡ್ ನಲ್ಲಿ ನಾನು ನಡೆಯೋದಕ್ಕೆ ಇವರ ಅನುಮತಿ ಬೇಕಾ, ಇನ್ನೂ ಹೋಂ ಮಿನಿಸ್ಟರ್ ಎಳಸು, ಅವರು ವಯಸ್ಸಲ್ಲಿ ದೊಡ್ಡವರಿರಬಹದು, ಆದರೆ ರಾಜಕೀಯದಲ್ಲಿ ಇನ್ನೂ ಎಳಸು ಅವರು. ಹೋರಾಟ ಮಾಡೋದಕ್ಕೆ ಇವರ ಅನುಮತಿ ಕೇಳಬೇಕಾ. ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದ್ರೆ ತಾನೇ, ಆಫೀಸರ್‌ನ ಕೂರಿಸಿಕೊಂಡು ಕೇಳಲಿ. ಸಿದ್ದರಾಮಯ್ಯ (Siddaramaiah) ಇದ್ದಾಗ, ಎಂಬಿ ಪಾಟೀಲ್ ಇದ್ದಾಗ ಡಿಪಿಆರ್ ಮಾಡಿ ಕಳಿಸಿದ್ದು, ಪರಿಸರ ಕ್ಲಿಯರೆನ್ಸ್ ಕೊಡಬೇಕಾಗಿದ್ದು ಕೇಂದ್ರ ಸರ್ಕಾರವೇ ಹೊರತು ಸಿದ್ದರಾಮಯ್ಯ ಅಲ್ಲ ಎಂದು ಡಿಕೆಶಿ ಗುಡುಗಿದ್ದರು. 

Mekedatu Yojana : ಕಾಂಗ್ರೆಸ್ ಪಾದಯಾತ್ರೆಗೆ ಪೂರ್ವಭಾವಿ ಸಭೆ

ನನಗೆ ವೈಯಕ್ತಿಕ ಏನೂ ಇಲ್ಲ, ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ತಾನೇ ದೇವೇಗೌಡರ ಎದುರು ಅವತ್ತು ಚುನಾವಣೆಗೆ ನಿಲ್ಲಿಸಿದ್ರು.  ಸೋತಿರಬಹುದು, ಆದರೆ ಅಂಥ ಹೋರಾಟಗಾರರ ಮುಂದೆ ನನ್ನ ನಿಲ್ಲಿಸಬೇಕು ಅಂದರೆ ನನ್ನ ಹೋರಾಟದ ಗುಣ ಕೂಡ ಕಾರಣ ಅಲ್ವಾ. ಹೊಸ ವರ್ಷ ರಾಜ್ಯದ ಜನತೆಗೆ ಆರೋಗ್ಯ ಶಕ್ತಿ ಮಾನಸಿಕವಾಗಿ ಎಲ್ಲ ಜನ ಕುಗ್ಗಿ ಹೋಗಿದ್ದಾರೆ. ಸಾಮಾಜಿಕ ಮಕ್ಕಳ ವಿದ್ಯಭ್ಯಾಸ ಬಹಳ ಎಫೆಕ್ಟ್ ಆಗಿದೆ. ಹೊಸ ಕಾಯಿಲೆ ಕೂಡ ದೂರ ಹೋಗಬೇಕು.ಏರ್‌ಪೋರ್ಟ್‌ನಿಂದ ಬಂದವರಿಗೆ ದೊಡ್ಡ ದಂಧೆ ನಡೆಯುತ್ತಿದೆ. ನೆಗಡಿ ಬಂದವರಿಗೆ ಪಾಸಿಟಿವ್ ಕೊಡ್ತಿದ್ದಾರೆ. ಸಿಎಂ ಈ ಬಗ್ಗೆ ಗಮನ ಹರಿಸಬೇಕು.ಹೊರಗಡೆಯಿಂದ ಇಲ್ಲಿ ಬಂದವರಿಗೆಲ್ಲ ಪಾಸಿಟಿವ್ ರಿಪೋರ್ಟ್ ಕೊಟ್ಟು ಮೂರು ಮೂರು ಸಾವಿರ ವಸೂಲಿ ಮಾಡ್ತಿದ್ದಾರೆ ಎಂದು ಹೇಳಿದ್ದರು. 

ಸಿಎಂ ಇದನ್ನು ನಿಲ್ಲಿಸಬೇಕು: 

ಒಂದು ದಿನ ಬ್ಯುಸಿನೆಸ್ ಏಟಾದರೆ ತಿಂಗಳುಗಟ್ಟಲೆ ರಿಕವರಿ ಬೇಕಾಗುತ್ತದೆ. ಉದ್ಯೋಗ ನೀಡುವವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೋಡಿಕೊಳ್ಳಬೇಕು. ನಮ್ಮ ಪಾದಯಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ನಾಲ್ಕೈದು ಅಂಬ್ಯುಲೆನ್ಸ್ ಪಾದಯಾತ್ರೆಯಲ್ಲಿ ಜೊತೆಯಲ್ಲಿ ಇರುತ್ತದೆ. ಸಾವಿರಾರು ಎಳನೀರು ಕೊಡುವುದಕ್ಕೆ ಮಂಡ್ಯ ಮದ್ದೂರು ಜನ ರೆಡಿ ಇದ್ದಾರೆ. ನೂರು ಜನ ಬರ್ತಾರೋ ಐದು ನೂರು ಜನ ಬರ್ತಾರೋ ಐದುಸಾವಿರ ಜನ ಬರ್ತಾರೋ. ಎಲ್ಲರಿಗೂ ಕೂಡ ಆಹ್ವಾನ ಕೊಡ್ತಿದ್ದೇವೆ. ಯಾರಿಗೂ ಬಲವಂತ ಇಲ್ಲ ಎಂದು ಡಿಕೆಶಿ ತಿಳಿಸಿದರು.
 

click me!