ರಾಜ್ಯದಲ್ಲಿ ನೆತ್ತಿ ಸುಡುವ ರಣ ಬಿಸಿಲು, ದಾಖಲೆ ಬರೆದ ಉಷ್ಣಾಂಶ, ಯಾವ್ಯಾವ ಜಿಲ್ಲೆಯಲ್ಲಿ ಎಷ್ಟಿದೆ ಗೊತ್ತಾ?

By Suvarna News  |  First Published Apr 10, 2024, 1:10 PM IST

ರಾಜ್ಯದಲ್ಲಿ ಬಿಸಿಲಿನ ಆರ್ಭಟ ಮುಂದುವರೆದಿದೆ ನೆತ್ತಿ ಸುಡುವ ರಣ ಬಿಸಿಲು ಒಂದೊಂದು ಸಮಸ್ಯೆ ಸೃಷ್ಟಿಸುತ್ತಿದೆ. ರಾತ್ರಿ  ಉಷ್ಣಾಂಶ ಏರಿಕೆಯ ಸಂಕಷ್ಟದಿಂದ ಇಡೀ ವಾತಾವರಣವೇ ವಿಚಿತ್ರವಾಗಿದೆ.


ಬೆಂಗಳೂರು (ಏ.10): ರಾಜ್ಯದಲ್ಲಿ ಬಿಸಿಲಿನ ಆರ್ಭಟ ಮುಂದುವರೆದಿದೆ ನೆತ್ತಿ ಸುಡುವ ರಣ ಬಿಸಿಲು ಒಂದೊಂದು ಸಮಸ್ಯೆ ಸೃಷ್ಟಿಸುತ್ತಿದೆ. ಕೂಲ್‌ ಬೆಂಗಳೂರಿನಲ್ಲೂ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಉಷ್ಣಾಂಶ ಏರಿಕೆಯ ಡಬಲ್ ಶಾಕ್ ಗೆ ಬೆಂಗಳೂರಿಗರು ಕಂಗಾಲಾಗಿದೆ. ಬೆಳಗ್ಗೆಯಷ್ಟೇ ಅಲ್ಲ ರಾತ್ರಿ  ಉಷ್ಣಾಂಶ ಏರಿಕೆಯ ಸಂಕಷ್ಟ ಮಲಗಿದ್ರು ತಪ್ಪುತ್ತಿಲ್ಲ. ರಾತ್ರಿ ಸೆಕೆಯಿಂದ ನಿದ್ದೆಯೂ ಹತ್ತುತ್ತಿಲ್ಲ.

ಇಂದು ಬೆಂಗಳೂರಿನ 35.2 ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ವಾಡಿಕೆಗಿಂತ 3.6 ಡಿಗ್ರಿ ಉಷ್ಣಾಂಶ ಏರಿಕೆ ಕಂಡದೆ. ರಾತ್ರಿ ವೇಳೆಯ ಕನಿಷ್ಠ ಉಷ್ಣಾಂಶ 22.5 ಡಿಗ್ರಿಗೆ ಏರಿಕೆ ಕಂಡಿದೆ. ಈ ಮೂಲಕ ಸಾಮಾನ್ಯಕ್ಕಿಂತ ಎರಡು ಮೂರು ಡಿಗ್ರಿ ಧಿಡೀರ್ ಏರಿಕೆ ಕಂಡಿದೆ.

Latest Videos

undefined

ಇನ್ನು ರಾಯಚೂರು ಕಲಬುರಗಿಯಲ್ಲೂ ಕನಿಷ್ಠ ಉಷ್ಣಾಂಶ ದಾಖಲೆ ಮಟ್ಟ ಮೀರಿದೆ. ಕನಿಷ್ಠ ಉಷ್ಣಾಂಶವೇ ಈ ಭಾಗದಲ್ಲಿ 26.1 ಡಿಗ್ರಿಗೆ ಏರಿಕೆ ಕಂಡಿದೆ. ಇನ್ನು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಬೆಂಗಳೂರು ಟಾಪ್ ಸ್ಥಾನದಲ್ಲಿದೆ.

ಉಸ್ಸಪ್ಪಾ..ಸಿಕ್ಕಾಪಟ್ಟೆ ಬಿಸಿಲು ಅಂತ ಫ್ರಿಡ್ಜ್ ವಾಟರ್ ಕುಡಿಯೋ ಮುನ್ನ ಇವಿಷ್ಟು ಗೊತ್ತಿರ್ಲಿ

ರಾಜ್ಯದ ಕೆಲವು ಜಿಲ್ಲೆಗಳಿಗೆ ಹಿಟ್ ವೆವ್ ಎಚ್ಚರಿಕೆ ನೀಡಲಾಗಿದೆ. ಶೇ.40 ಕ್ಕಿಂತಲೂ ಅಧಿಕ ಉಷ್ಣಾಂಶ ದಾಖಲು ಆಗುವ ಜಿಲ್ಲೆಗಳಲ್ಲಿ ಹಿಟ್ ವೇವ್ ಏರಿಕೆಯಾಗಿದ್ದು. ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗುವ ಎಚ್ಚರಿಕೆಯನ್ನು  ಹವಾಮಾನ ಇಲಾಖೆ ನೀಡಿದೆ.

ಬಿಸಿಲಿನ ತಾಪಕ್ಕೆ  ನಿರ್ಜಲೀಕರಣ, ಕಾಲರಾ, ಟೈಫಾಯ್ಡ್, ವಾಂತಿ-ಭೇದಿ, ಕಣ್ಣಿನ ಸಮಸ್ಯೆ, ತಲೆ ಸುತ್ತು, ಚರ್ಮದ ಸಮಸ್ಯೆ, ಮೂಗಿನಲ್ಲಿ ರಕ್ತಸ್ರಾವ, ಶ್ವಾಸಕೋಶ ತೊಂದರೆ, ಬೆವರಿನ ಗುಳ್ಳೆ, ಕೆಮ್ಮು, ಅಂಗೈ-ಅಂಗಾಲು ಉರಿ, ಉರಿ ಮೂತ್ರದಂತಹ ಸಮಸ್ಯೆಗಳು ಉಲ್ಬಣವಾಗುತ್ತಿವೆ. ರಾಜ್ಯದಲ್ಲಿ ಏಪ್ರಿಲ್ 10ರ ಗರಿಷ್ಠ ಮತ್ತು ಕನಿಷ್ಠ  ತಾಪಮಾನದ ವರದಿ ಇಂತಿದೆ.

ಕರ್ನಾಟಕದಲ್ಲಿ ಬಿಸಿಲಿನ ಝಳಕ್ಕೆ 2 ಸಾವು, 521 ಹೀಟ್‌ ಸ್ಟ್ರೋಕ್‌ ಪಕರಣ ದಾಖಲು!

ಕರಾವಳಿ ಕರ್ನಾಟಕ ಭಾಗ
ಹೊನ್ನಾವರ 
ಗರಿಷ್ಠ ತಾಪಮಾನ: 33.7 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 23.9 ಡಿಗ್ರಿ ಸೆಲ್ಸಿಯಸ್

ಕಾರವಾರ 
ಗರಿಷ್ಠ ತಾಪಮಾನ 36.2 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 26 ಡಿಗ್ರಿ ಸೆಲ್ಸಿಯಸ್

ಶಿರಾಲಿ 
ಗರಿಷ್ಠ ತಾಪಮಾನ: 37.2 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 22.2ಡಿಗ್ರಿ ಸೆಲ್ಸಿಯಸ್

ಮಂಗಳೂರು ವಿಮಾನ ನಿಲ್ದಾಣ 
ಗರಿಷ್ಠ ತಾಪಮಾನ: 34.8 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 26.5 ಡಿಗ್ರಿ ಸೆಲ್ಸಿಯಸ್

ಪಣಂಬೂರು 
ಗರಿಷ್ಠ ತಾಪಮಾನ: 35 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 26 ಡಿಗ್ರಿ ಸೆಲ್ಸಿಯಸ್

ಬೆಳಗಾವಿ ನಗರ 
ಗರಿಷ್ಠ ತಾಪಮಾನ: 36.5 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 22 ಡಿಗ್ರಿ ಸೆಲ್ಸಿಯಸ್

ಬೆಳಗಾವಿ ವಿಮಾನ ನಿಲ್ದಾಣ 
ಗರಿಷ್ಠ ತಾಪಮಾನ: 37.6 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 20.8 ಡಿಗ್ರಿ ಸೆಲ್ಸಿಯಸ್

ಬೀದರ್ 
ಗರಿಷ್ಠ ತಾಪಮಾನ: 36.6 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 24ಡಿಗ್ರಿ ಸೆಲ್ಸಿಯಸ್

ವಿಜಯಪುರ 
ಗರಿಷ್ಠ ತಾಪಮಾನ: 39 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 2.5 ಡಿಗ್ರಿ ಸೆಲ್ಸಿಯಸ್

ಬಾಗಲಕೋಟೆ 
ಗರಿಷ್ಠ  ತಾಪಮಾನ: 41.1 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 26.1ಡಿಗ್ರಿ ಸೆಲ್ಸಿಯಸ್

ಧಾರವಾಡ 
ಗರಿಷ್ಠಿ ತಾಪಮಾನ: 38.6 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 22 ಡಿಗ್ರಿ ಸೆಲ್ಸಿಯಸ್

ಗದಗ 
ಗರಿಷ್ಠ ತಾಪಮಾನ: 38.8 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 23.6ಡಿಗ್ರಿ ಸೆಲ್ಸಿಯಸ್

ಕಲಬುರ್ಗಿ 
ಗರಿಷ್ಠ ತಾಪಮಾನ: 39.6 ಡಿಗ್ರಿ ಸೆಲ್ಸಿಯಸ್ 
ಕನಿಷ್ಠ ತಾಪಮಾನ: 28 ಡಿಗ್ರಿ ಸೆಲ್ಸಿಯಸ್

ಹಾವೇರಿ 
ಗರಿಷ್ಠ ತಾಪಮಾನ: 39.1 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 23 ಡಿಗ್ರಿ ಸೆಲ್ಸಿಯಸ್

ಕೊಪ್ಪಳ 
ಗರಿಷ್ಠ ತಾಪಮಾನ: 39.6 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 27 ಡಿಗ್ರಿ ಸೆಲ್ಸಿಯಸ್

ರಾಯಚೂರು 
ಗರಿಷ್ಠ  ತಾಪಮಾನ: 38.2 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 26 ಡಿಗ್ರಿ ಸೆಲ್ಸಿಯಸ್

ದಕ್ಷಿಣ ಕರ್ನಾಟಕ
ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣ 
ಗರಿಷ್ಠಿ ತಾಪಮಾನ: 34.4 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 21 ಡಿಗ್ರಿ ಸೆಲ್ಸಿಯಸ್

ಬೆಂಗಳೂರು ನಗರ 
ಗರಿಷ್ಠ ತಾಪಮಾನ: 35.2 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 22.5  ಡಿಗ್ರಿ ಸೆಲ್ಸಿಯಸ್

ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣ  
ಗರಿಷ್ಠ ತಾಪಮಾನ: 35.7 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 21 ಡಿಗ್ರಿ ಸೆಲ್ಸಿಯಸ್

ಚಾಮರಾಜನಗರ 
ಗರಿಷ್ಠ ತಾಪಮಾನ: 37.6 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 19.9 ಡಿಗ್ರಿ ಸೆಲ್ಸಿಯಸ್

ಚಿಕ್ಕಮಗಳೂರು
ಗರಿಷ್ಠ ತಾಪಮಾನ: 34.2 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 16.4 ಡಿಗ್ರಿ ಸೆಲ್ಸಿಯಸ್

ಚಿತ್ರದುರ್ಗ 
ಗರಿಷ್ಠ ತಾಪಮಾನ: 37.9 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 23.7 ಡಿಗ್ರಿ ಸೆಲ್ಸಿಯಸ್

ಮಂಡ್ಯ 
ಗರಿಷ್ಠ ತಾಪಮಾನ: 38.1 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 20.2 ಡಿಗ್ರಿ ಸೆಲ್ಸಿಯಸ್

ಮಡಿಕೇರಿ 
ಗರಿಷ್ಠ ತಾಪಮಾನ: 35.1 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 20 ಡಿಗ್ರಿ ಸೆಲ್ಸಿಯಸ್

ಮೈಸೂರು 
ಗರಿಷ್ಠ ತಾಪಮಾನ: 37.2 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: (ವರದಿ ಬಂದಿಲ್ಲ)

ಚಿಕ್ಕನಹಳ್ಳಿ 
ಗರಿಷ್ಠ ತಾಪಮಾನ: 39.2 ಡಿಗ್ರಿ ಸೆಲ್ಸಿಯಸ್
ಕನಿಷ್ಠ ತಾಪಮಾನ: 22 ಡಿಗ್ರಿ ಸೆಲ್ಸಿಯಸ್

click me!