ಮಣ್ಣು ಕುಸಿತದಿಂದ ಬೆಂಗಳೂರು-ಮಂಗಳೂರು ಟ್ರೈನ್ ಸಂಚಾರ ಬಂದ್‌, ಪರ್ಯಾಯ ರೈಲು ಮಾರ್ಗ ಸೂಚಿಸಿದ ಇಲಾಖೆ

By Gowthami K  |  First Published Jul 27, 2024, 9:01 AM IST

ಕಡಗರವಳ್ಳಿ-  ಶಿರಾಡಿ ಘಾಟ್‌ನ ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದ ಹಿನ್ನೆಲೆ ಬೆಂಗಳೂರು-ಹಾಸನ-ಮಂಗಳೂರು ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಸೂಚಿಸಲಾಗಿದೆ.


ಹಾಸನ (ಜು.27): ಜಿಲ್ಲೆಯ ಮಲೆನಾಡು ‌ಭಾಗದಲ್ಲಿ ಮುಂದುವರಿದ ಮಳೆಯ ಆರ್ಭಟದಿಂದಾಗಿ ಸಕಲೇಶಪುರ ತಾಲೂಕಿನ, ಕಡಗರವಳ್ಳಿ-  ಶಿರಾಡಿ ಘಾಟ್‌ನ ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದೆ. ಹೀಗಾಗಿ ಈ ಮಾರ್ಗದ ಎಲ್ಲಾ ರೈಲುಗಳ‌ ಸಂಚಾರ ಬಂದ್ ಮಾಡಲಾಗಿದೆ. ಕಿಲೋ ಮೀಟರ್ ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ‌ ಮಣ್ಣು ಕುಸಿತವಾಗಿದ್ದು, ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಣ್ಣು ಕುಸಿತಗೊಂಡಿರು ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ರೈಲು ಮಾರ್ಗ ಬದಲಿಸಿದ್ದಾರೆ.

ಅಮೃತ್‌ ಭಾರತ್‌ ಯೋಜನೆಯಡಿ ರಾಜ್ಯದ 59 ರೈಲು ನಿಲ್ದಾಣಗಳು ಮೇಲ್ದರ್ಜೆಗೆ, 7559 ಕೋಟಿ ರೂ ಮೀಸಲು

Latest Videos

undefined

ರೈಲು ಸಂಖ್ಯೆ 16595 ಕೆಎಸ್‌ಆರ್‌ ಬೆಂಗಳೂರು-ಕಾರವಾರ ಪಂಚಗಂಗಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌, ಅದೇ ರೀತಿ ಕಾರವಾರದಿಂದ ಬೆಂಗಳೂರಿಗೆ ತೆರಳುವ ಪಂಚಗಂಗಾ ಎಕ್ಸ್‌ಪ್ರೆಸ್‌, ರೈಲು ನಂಬರ್‌ 16586 ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು, ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಸಂಚಾರ ಪರ್ಯಾಯ ಮಾರ್ಗದ ಮೂಲಕ ಓಡಿಸಲಾಗುತ್ತಿದೆ. ರೈಲು ಹಳಿಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ರೈಲ್ವೆ ರಕ್ಷಣಾ ತಂಡ ತೆರಳಿದ್ದು ಕಾರ್ಯಾಚರಣೆ ಆರಂಭವಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಬಹುಮಾದರಿ ಸಾರಿಗೆಗಾಗಿ ರಾಜ್ಯ ಸರ್ಕಾರಕ್ಕೆ 45 ಎಕರೆ ಭೂಮಿ ಕೊಡಿ ಎಂದು ಕೇಳಿದ ಮೆಟ್ರೋ!

ಪರ್ಯಾಯ ಮಾರ್ಗದ ಮೂಲಕ ರೈಲು ಸಂಚಾರ: ರೈಲು ಸಂಚಾರ ಸ್ಥಗಿತವಾಗಿರುವ ಕಾರಣ ಮಂಗಳೂರು-ಬೆಂಗಳೂರು ರೈಲುಗಳಿಗೆ ತಮಿಳುನಾಡು- ಕೇರಳ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಮತ್ತು ನಾಳಿನ ರೈಲು ಸಂಚಾರದ ಮಾರ್ಗ ಬದಲಾವಣೆ ಮಾಡಿ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.

  • ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ರೈಲು(07378) ಕಾರವಾರ-ಮಡ್ಗಾಂವ್-ಕ್ಯಾಸೆಲ್ ರಾಕ್ ಮೂಲಕ ಹುಬ್ಬಳ್ಳಿ ಜಂಕ್ಷನ್
  • ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್‌ (16595) ರೈಲು ಯಶ್ವಂತ್ ಪುರ-ಬಾಣಸವಾಡಿ-ಪೊದನೂರ್- ಕೇರಳದ ಶೋರ್ನೂರ್ ಮೂಲಕ ಮಂಗಳೂರು
  • ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌(16586) ರೈಲು ಮಂಗಳೂರು ಜಂಕ್ಷನ್ ನಿಂದ ಕೇರಳದ ಶೋರ್ನೂರ್ ಮೂಲಕ ಬೆಂಗಳೂರು ಸಂಚಾರ
  • ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್‌ (16512) ರೈಲು ಮಂಗಳೂರು ಜಂಕ್ಷನ್- ಕೇರಳದ ಶೋರ್ನೂರ್ ಮೂಲಕ ಸಂಚಾರ
  • ಕಾರವಾರ-ಬೆಂಗಳೂರು ಎಕ್ಸ್‌ಪ್ರೆಸ್‌(16596) ರೈಲು ಮಂಗಳೂರು ಜಂಕ್ಷನ್- ಕೇರಳದ ಶೋರ್ನೂರ್ ಮೂಲಕ ಸಂಚಾರ
click me!