ವಿಶ್ವದ ಟಾಪ್ 100 ಐಸ್ ಕ್ರೀಂಗಳ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ 5 ಐಸ್‌ಕ್ರೀಂಗಳು! ಇಲ್ಲಿದೆ ನೋಡಿ

By Ravi Janekal  |  First Published Jul 26, 2024, 8:31 PM IST

ಆನ್‌ಲೈನ್‌ ಟ್ರಾವೆಲ್‌ ಮತ್ತು ಫುಡ್‌ ಗೈಡ್‌ ʼಟೇಸ್ಟ್‌ ಅಟ್ಲಾಸ್‌ʼ ಸಂಸ್ಥೆ ವಿಶ್ವದ ಟಾಪ್‌ 100 ಐಕಾನಿಕ್‌ ಐಸ್‌ಕ್ರೀಮ್‌ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮಂಗಳೂರಿನ ಐಡಿಯಲ್‌ ಪಬ್ಬಾಸ್‌ನ ಫೇಮಸ್‌ ಗಡ್‌ಬಡ್‌ ಫ್ಲೇವರ್‌ ಐಸ್‌ಕ್ರೀಮ್‌ ಮತ್ತು ಬೆಂಗಳೂರಿನ ಕಾರ್ನರ್‌ ಹೌಸ್‌ನ ಡೆತ್‌ ಬೈ ಚಾಕೋಲೇಟ್‌ ಐಕಾನಿಕ್‌ ಐಸ್‌ಕ್ರೀಮ್‌ ಸ್ಥಾನ ಪಡೆದುಕೊಂಡಿವೆ. 


ಬೆಂಗಳೂರು (ಜು.26):  ಐಸ್‌ಕ್ರೀಂ ಎಂದರೆ ಮಕ್ಕಳಿಗಷ್ಟೇ ಅಲ್ಲ, ಎಲ್ಲರಿಗೂ ಇಷ್ಟವಾಗುತ್ತೆ. ಶಾಲಾ ದಿನಗಳಲ್ಲಿ ಐಸ್‌ಕ್ರೀಂಗಾಗಿ ಏನೆಲ್ಲ ಪಡಿಪಾಟಲು ಪಟ್ಟಿಲ್ಲ ಹೇಳಿ. ಐಸ್‌ಕ್ರೀಂ ಕೊಡಿಸುವಂತೆ ಅಪ್ಪ-ಅಮ್ಮನ ದುಂಬಾಲು ಬಿದ್ದು ರಚ್ಚೆ ಹಿಡಿದು ಉರುಳಾಡಿದ್ದಿದೆ, ಐಸ್‌ಕ್ರೀಂಗಾಗಿ ಪಿಕ್‌ಪಾಕೆಟ್ ಮಾಡಿದ್ದೂ ಇದೆ, ಈಗಲೂ ಐಸ್‌ಕ್ರೀಂ ಎಂದರೆ ನಾಲಗೆ ಮೇಲೆ ನೀರೂರುತ್ತೆ. 

ಹಿಂದಿನ ದಿನಗಳಲ್ಲಿ ಐಸ್‌ಕ್ರೀಮ ಎಂದರೆ ಹಾಲುಐಸ್ ಫೇವರಿಟ್ ಆಗಿತ್ತು. ಬಾಯಿ ಚಪ್ಪರಿಸಿ ಚೀಪುತ್ತಿದ್ದೆವು.  ಈಗಂತೂ ಬಗೆ ಬಗೆಯ ಐಸ್‌ಕ್ರೀಂ ಬಂದಿವೆ. ಅದರ ಸುವಾಸನೆ ರುಚಿ ಮತ್ತು ಬೆಲೆ, ಅದು ಕೊಡುವ ಫೀಲ್ ಸಹ ಬೇರೆ ಬೇರೆಯಾಗಿದೆ. ಐಸ್‌ಕ್ರೀಂನಲ್ಲಿ ನೂರಾರು ಬ್ರಾಂಡ್‌ಗಳು ಹುಟ್ಟಿಕೊಂಡಿವೆ ಆದರೆ ಅವೆಲ್ಲವುಗಳ ರುಚಿ ಸುವಾಸನೆ ಬೇರೆ ಬೇರೆ. ಈಗಂತೂ ಎಲ್ಲರ ಫೇವರಿಟ್ ಆಗಿರೋ ಐಸ್‌ಕ್ರೀಂ ಎಂದರೆ ಗಡ್‌ಬಡ್ ಐಸ್‌ಕ್ರೀಂ! ಹೂಂ ಇದೀಗ ಅದೇ ಗಡ್‌ಬಡ್ ಐಸ್‌ಕ್ರೀಂ ವಿಶ್ವದ ಟಾಪ್ 100 ಐಕಾನಿಕ್ ಐಸ್‌ಕ್ರೀಂಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದರೆ ನಂಬುತ್ತೀರಾ? 

Tap to resize

Latest Videos

undefined

ಐಸ್‌ಕ್ರೀಂನಲ್ಲಿ ಸಿಕ್ಕ ಬೆರಳು ಕಾರ್ಮಿಕನದ್ದು; ಪೊಲೀಸ್ ತನಿಖೆಯಲ್ಲಿ ಮಹತ್ವದ ವಿಷಯ ಬೆಳಕಿಗೆ

ಹೌದು, ಆನ್‌ಲೈನ್‌ ಟ್ರಾವೆಲ್‌ ಮತ್ತು ಫುಡ್‌ ಗೈಡ್‌ ʼಟೇಸ್ಟ್‌ ಅಟ್ಲಾಸ್‌ʼ ಸಂಸ್ಥೆ ವಿಶ್ವದ ಟಾಪ್‌ 100 ಐಕಾನಿಕ್‌ ಐಸ್‌ಕ್ರೀಮ್‌ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮಂಗಳೂರಿನ ಐಡಿಯಲ್‌ ಪಬ್ಬಾಸ್‌ನ ಫೇಮಸ್‌ ಗಡ್‌ಬಡ್‌ ಫ್ಲೇವರ್‌ ಐಸ್‌ಕ್ರೀಮ್‌ ಮತ್ತು ಬೆಂಗಳೂರಿನ ಕಾರ್ನರ್‌ ಹೌಸ್‌ನ ಡೆತ್‌ ಬೈ ಚಾಕೋಲೇಟ್‌ ಐಕಾನಿಕ್‌ ಐಸ್‌ಕ್ರೀಮ್‌ ಸ್ಥಾನ ಪಡೆದುಕೊಂಡಿವೆ. 

ಭಾರತದ ಟಾಪ್ 5 ಐಸ್‌ಕ್ರೀಂಗಳು ಇಲ್ಲಿವೆ

* ಬೆಂಗಳೂರು ಸೇಂಟ್ ಮಾರ್ಕ್ರ್ಸ್ ರಸ್ತೆಯಲ್ಲಿರುವ ಕಾರ್ನರ್ ಹೌಸ್ನ ಡೆತ್ ಬೈ ಚಾಕಲೇಟ್
* ಮಂಗಳೂರಿನ ಐಡಿಯಲ್ ಪಬ್ಬಾಸ್ ಶಾಪ್ ನ ಗಡ್ ಬಡ್
* ಮುಂಬೈನ ಅಪ್ಸರಾ ಶಾಪ್ ನ ಗ್ವಾವಾ
* ಮುಂಬೈನ ಕೆ.ರುಸ್ತುಂ ಆ್ಯಂಡ್ ಕಂಪನಿಯ ಐಸ್ ಕ್ರೀಂ ಸ್ಯಾಂಡ್ವಿಚ್
* ಮುಂಬೈ ನ್ಯಾಚುರಲ್ಸ್ನ ಟೆಂಡರ್ ಕೋಕೋನಟ್

click me!