ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಶರಣಾಗಿದ್ದಾನೆ.
ಬೆಂಗಳೂರು [ಜ.22]: ಎರಡು ವರ್ಷಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ ಆರೋಪಿ ಆದಿತ್ಯ ರಾವ್ ಎಂಬಾತನೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದು ಇದೀಗ ಆತ ಪೊಲೀಸರ ಮುಂದೆ ಶರಣಾಗಿದ್ದಾನೆ.
undefined
ಬೆಂಗಳೂರು ಪೊಲೀಸರ ಮುಂದೆ ಆರೋಪಿ ಆದಿತ್ಯ ರಾವ್ ಹಲಸೂರು ಗೇಟ್ ಠಾಣೆಯಲ್ಲಿ ಶರಣಾಗಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ತಾನೇ ಈ ಕೃತ್ಯ ಎಸಗಿದ್ದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಈಗ ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ಜೊತೆ ಈತನಿಗೆ ನಂಟಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಅಲ್ಲದೇ ಆತನ ಪತ್ತೆ ಪೊಲೀಸರು ಬಲೆ ಬೀಸಿದ್ದರು. ಇದರ ಬೆನ್ನಲ್ಲೇ ಆತನೇ ಶರಣಾಗಿದ್ದಾನೆ.
ಉಡುಪಿ ಹತ್ತಿರದ ಮಣಿಪಾಲ್‌ನ ಕೆಎಚ್‌ಬಿ ಕಾಲೋನಿ ನಿವಾಸಿ ಆದಿತ್ಯ ರಾವ್ 2018ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ ಪ್ರಕರಣದಲ್ಲಿ ಒಂಭತ್ತು ತಿಂಗಳು ಆತ ಜೈಲು ಶಿಕ್ಷೆಗೆ ಗುರಿಯಾಗಿದ್ದ. ನಂತರ 2019ರ ಅಕ್ಟೋಬರ್‌ನಲ್ಲಿ ಆದಿತ್ಯ ಬಂಧಮುಕ್ತನಾಗಿದ್ದ. ಪರಪ್ಪನ ಅಗ್ರಹಾರ ಕಾರಾಗೃಹದಿಂದ ಹೊರಬಂದ ಬಳಿಕ ಆತ ಮತ್ತೆ ಮಂಗಳೂರಿನ ವಿಮಾನ ನಿಲ್ದಾಣ ಸ್ಫೋಟಕ್ಕೆ ಯತ್ನಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಇದೀಗ ನಿಜವಾಗಿದೆ.
ಬಾಂಬ್ ಇಟ್ಟುಹೋದವನ ಪಿನ್ ಟು ಪಿನ್ ಡಿಟೇಲ್ಸ್ ಲಭ್ಯ, ಸಿಸಿಟಿವಿ ಸಾಕ್ಷ್ಯ
ಮಂಗಳೂರಿನ ಬಾಂಬ್ ಪ್ರಕರಣದ ಶಂಕಿತ ಹಾಗೂ ಆದಿತ್ಯ ರಾವ್‌ನ ಚಹರೆಯಲ್ಲಿ ಹೋಲಿಕೆ ಕಂಡುಬಂದಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮಂಗಳೂರು ಪೊಲೀಸರು, ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾದ ಶಂಕಿತನ ಭಾವಚಿತ್ರವನ್ನು ಬೆಂಗಳೂರು ಪೊಲೀಸರಿಗೆ ಕಳುಹಿಸಿದ್ದರು. ಆ ಭಾವಚಿತ್ರ ನೋಡಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು, ಮಂಗಳೂರಿನ ಬಾಂಬ್ ಪತ್ತೆ ಪ್ರಕರಣದ ಆರೋಪಿಗೂ ಆದಿತ್ಯನ ಮುಖಚಹರೆಗೂ ಹೋಲಿಕೆ ಕಂಡುಬಂದಿದೆ ಎಂದು ಹೇಳಿದ್ದರು.
ಪೊಲೀಸರ ಮೇಲೆ ಅನುಮಾನ: HDKಯನ್ನು ಭೇಟಿಯಾದ ಮಂಗಳೂರು ಕಮಿಷನರ್...
ಎಂಬಿಎ ಪದವೀಧರನಾದ ಆದಿತ್ಯ, ಓದು ಮುಗಿಸಿದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಎಲ್ಲಿಯೂ ಸಹ ಕಾಯಂ ಆಗಿ ನೆಲೆ ನಿಲ್ಲದೆ ಕೆಲವೇ ದಿನಗಳಲ್ಲಿ ಉದ್ಯೋಗ ತೊರೆಯುತ್ತಿದ್ದ. 2018ರ ಆಗಸ್ಟ್‌ನಲ್ಲಿ ಕೆಐಎ ಭದ್ರತಾ ಅಧಿಕಾರಿ ಹುದ್ದೆಗೆ ಆತ ಅರ್ಜಿ ಸಲ್ಲಿಸಿದ್ದ. ಆ ವೇಳೆ ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ಆರೋಪಿಗೆ ಉದ್ಯೋಗ ನೀಡಲು ಕೆಐಎ ಆಡಳಿತ ಮಂಡಳಿ ನಿರಾಕರಿಸಿತು. ಇದರಿಂದ ಕೆರಳಿದ ಆತ, ಅದೇ ವರ್ಷದ ಆಗಸ್ಟ್ 30 ರಂದು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿಗೆ 9 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಪರಪ್ಪನ ಅಗ್ರಹಾರದಿಂದ ಕಾರಾಗೃಹ ಶಿಕ್ಷೆ ಮುಗಿಸಿ 2019ರ ಅಕ್ಟೋಬರ್‌ನಲ್ಲಿ ಆದಿತ್ಯ ಬಿಡುಗಡೆಯಾಗಿದ್ದ.
ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ