ಜಗತ್ತಿಗೇ ಮಾರ್ಗದರ್ಶಕವಾದ ಧರ್ಮದ ನಂಬಿಕೆಗೆ ಪೆಟ್ಟಾಗದಿರಲಿ: ಹಿರೇಮಗಳೂರು ಕಣ್ಣನ್

Published : Sep 12, 2023, 10:40 AM IST
ಜಗತ್ತಿಗೇ ಮಾರ್ಗದರ್ಶಕವಾದ ಧರ್ಮದ ನಂಬಿಕೆಗೆ ಪೆಟ್ಟಾಗದಿರಲಿ:  ಹಿರೇಮಗಳೂರು ಕಣ್ಣನ್

ಸಾರಾಂಶ

ಭಾರತ ದೇಶದ ಮಣ್ಣಿನ ಗುಣ ಶ್ರೇಷ್ಟವಾಗಿದ್ದು ಜಗತ್ತಿಗೇ ಮಾರ್ಗದರ್ಶನ ಮಾಡಿದ ಸನಾತನ ಧರ್ಮದ ಮೇಲೆ ಪೆಟ್ಟು ಕೊಡುವ ಕೆಲಸ ಸರಿಯಾದುದಲ್ಲ ಎಂದು ಕನ್ನಡದ ಪೂಜಾರಿ ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು. ಕಟೀಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ಘಟಕದ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಲ್ಕಿ (ಸೆ.12) :  ಭಾರತ ದೇಶದ ಮಣ್ಣಿನ ಗುಣ ಶ್ರೇಷ್ಟವಾಗಿದ್ದು ಜಗತ್ತಿಗೇ ಮಾರ್ಗದರ್ಶನ ಮಾಡಿದ ಸನಾತನ ಧರ್ಮದ ಮೇಲೆ ಪೆಟ್ಟು ಕೊಡುವ ಕೆಲಸ ಸರಿಯಾದುದಲ್ಲ ಎಂದು ಕನ್ನಡದ ಪೂಜಾರಿ ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು. ಕಟೀಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ಘಟಕದ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಸ್ರೇಲ್ ನಿಂದ ನಮ್ಮೂರಿಗೆ ಸಂಸ್ಕೃತ ಕಲಿಯಲು ಬಂದವರು ನಾವು ಜ್ಞಾನ ಸಂಪಾದನೆಗಾಗಿ ಬಂದಿದ್ದೇವೆ ಎಂದಿದ್ದರು. ಸಾಹಿತ್ಯದಿಂದ ಸಂಸ್ಕಾರ. ಸರಸ್ವತಿಯ ಅಕ್ಷರ ಪ್ರಸಾದ ಸಾಹಿತ್ಯದ ಬರಹಗಳು. ದ್ವೈತ ಆದ್ವೈತ ವಿಶಿಷ್ಟಾದೈತ ಸಿದ್ದಾಂತಗಳು ರಾದ್ದಾಂತಗಳಾಗಬಾರದು,ಇತ್ತೀಚಿಗೆ ನಮ್ಮ ಮನೆಯ ನಾಗರಿಕ ಸಂಸ್ಕೃತಿ ಹೇಗಿದೆಯೆಂದರೆ ಪದ್ಮಾವತಿ ನಿಲಯ ವೆಂಕಟೇಶ್ವರ ಪ್ರಸನ್ನ ತಂದೆ ತಾಯಿಯ ಆಶೀರ್ವಾದ ಎಂದೆಲ್ಲ ಹಾಕಿ ನಾಯಿಗಳಿವೆ ಎಚ್ಚರಿಕೆ ಅಂತ ಅಪಸಂಸ್ಕೃತಿ ಬೋರ್ಡನ್ನೂ ನೇತು ಹಾಕುತ್ತೇವೆ. ಮುದ್ದಣ ಮನೋರಮೆಯರ ಸಾಹಿತ್ಯ ಬರೆದ ಕವಿ ಕಷ್ಟದಲ್ಲಿದ್ದ. ಆದರೆ ಅಂತಹ ಶ್ರೇಷ್ಟ ಸಾಹಿತ್ಯವನ್ನು ಮುಂದಿಟ್ಟು ಡಾಕ್ಟರೇಟ್ ಮಾಡಿದವರು ಎಷ್ಟೋ ಮಂದಿ ಇದ್ದಾರೆ. ಮುಳಿಯ ತಿಮ್ಮಪ್ಪಯ್ಯ ಡಿವಿಜಿ. ಹುಯಿಳಗೋಳ ಹೀಗೆ ಸಾಹಿತ್ಯಕ್ಕಾಗಿ ಕನ್ನಡಕ್ಕಾಗಿ ಕೆಲಸ ಮಾಡಿದವರಿಲ್ಲ. ಆದರೆ ಅವರ ಕಾರ್ಯಗಳು ಅನುಪಮ ಸ್ಮರಣೀಯ, ಕನ್ನಡದ ಓದು ಬಳಕೆ ನಿರಂತರವಾಗಿರುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ಹೇಳಿದರು.

ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್‌ ಒಡೆಯರ್‌

ಹಿರೇಮಗಳೂರು ಕಣ್ಣನ್ ಅವರನ್ನು ಮೂಲ್ಕಿ ಕಸಾಪದ ವತಿಯಿಂದ ಗೌರವಿಸಲಾಯಿತು.

ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಮೂಲ್ಕಿ ಕಸಾಪದ ಮಿಥುನ ಕೊಡೆತ್ತೂರು. ಡಾ. ಪದ್ಮನಾಭ ಭಟ್ ಎಕ್ಕಾರು. ದೇವದಾಸ ಮಲ್ಯ ಸಚ್ಚಿದಾನಂದ ಉಡುಪ ಮತ್ತಿತರರಿದ್ದರು. ಪ್ರಕಾಶ್ ಆಚಾರ್ ಕನ್ನಡ ಹಾಡು ಹಾಡಿದರು. ಸಂತೋಷ್ ಉಡುಪ ವಂದಿಸಿದರು. ಚಿತ್ರ:11ಕಟೀಲು ಉಪನ್ಯಾಸ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್ - ಪೊಲೀಸರ ಬಲೆಗೆ ಬಿದ್ದ ಮೂವರು!