ಬೆಂಗಳೂರು ಗಲಭೆ: ಶಾಸಕ ಅಖಂಡ ಮನೆಗೆ ಬೆಂಕಿ ಇಟ್ಟಿದ್ದವ ಅರೆಸ್ಟ್‌

By Kannadaprabha NewsFirst Published Sep 11, 2020, 8:19 AM IST
Highlights

ವಾಟರ್‌ ಮ್ಯಾನ್‌ ಕೆಲಸ ಮಾಡಿಕೊಂಡಿದ್ದ ಮುಜಾಯಿದ್ದ ಆ.11ರಂದು ನಡೆದ ಗಲಭೆ ದಿನ ನೂರಕ್ಕೂ ಹೆಚ್ಚು ಮಂದಿಯನ್ನು ಠಾಣೆ ಬಳಿಯಿಂದ ಶಾಸಕ ಅಂಖಡ ಶ್ರೀನಿವಾಸ್‌ ಮೂರ್ತಿ ಮನೆ ಬಳಿ ಕರೆದೊಯ್ದಿದ್ದ| ಘಟನೆ ನಡೆದಾಗಿನಿಂದ ಸಿಗದೆ ಕೋಲಾರ, ರಾಮನಗರ ಸೇರಿ ವಿವಿಧೆಡೆ ತಲೆಮರೆಸಿಕೊಂಡಿದ್ದ ಆರೋಪಿ| 

ಬೆಂಗಳೂರು(ಸೆ.11): ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಮನೆಗೆ ಬೆಂಕಿ ಇಟ್ಟಿದ್ದ ಎನ್ನಲಾದ ಆರೋಪಿ ಮುಜಾಯಿದ್‌ ಎಂಬಾತನನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.ಜೆ.ಹಳ್ಳಿಯಲ್ಲಿ ನಿವಾಸಿ ಮುಜಾಹಿದ್‌ನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವಾಟರ್‌ ಮ್ಯಾನ್‌ ಕೆಲಸ ಮಾಡಿಕೊಂಡಿದ್ದ ಮುಜಾಯಿದ್ದ ಆ.11ರಂದು ನಡೆದ ಗಲಭೆ ದಿನ ನೂರಕ್ಕೂ ಹೆಚ್ಚು ಮಂದಿಯನ್ನು ಠಾಣೆ ಬಳಿಯಿಂದ ಶಾಸಕ ಅಂಖಡ ಶ್ರೀನಿವಾಸ್‌ ಮೂರ್ತಿ ಮನೆ ಬಳಿ ಕರೆದೊಯ್ದಿದ್ದ. ಘಟನೆ ನಡೆದಾಗಿನಿಂದ ಆರೋಪಿ ಸಿಗದೆ ಕೋಲಾರ, ರಾಮನಗರ ಸೇರಿ ವಿವಿಧೆಡೆ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು ಗಲಭೆ ಕೇಸ್‌: ಎಸ್‌ಡಿಪಿಐ ಕಚೇರಿಯಲ್ಲಿ ಮತ್ತೆ ಮಾರಕಾಸ್ತ್ರ ವಶ

ಶಾಸಕರ ಸಂಬಂಧಿ ನವೀನ್‌ ಎಂಬಾತ ಇಸ್ಲಾಂ ಧರ್ಮಗುರುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಎಂಬ ಕಾರಣಕ್ಕೆ ಕಿಡಿಗೇಡಿಗಳು ಕಾವಲ್‌ಭೈರಸಂದ್ರ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿದ್ದರು. ಪ್ರಕರಣದಲ್ಲಿ ಈಗಾಗಲೇ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಅಂದು ನಡೆದ ಗಲಭೆಯಲ್ಲಿ ಕೋಟ್ಯಂತರ ರೂ. ನಷ್ಟ ಉಂಟಾಗಿತ್ತು.
 

click me!