'ಕೆಂಪೇಗೌಡ ಪ್ರಶಸ್ತಿ ಆಯ್ಕೆಯಲ್ಲಿ ಏಕಪಕ್ಷೀಯ ನಿರ್ಧಾರ'

By Kannadaprabha NewsFirst Published Sep 11, 2020, 8:05 AM IST
Highlights

5ರಿಂದ 6 ಮಂದಿ ಕೊರೋನಾ ವಾರಿಯರ್ಸ್‌ಗೆ ಮಾತ್ರ ಪ್ರಶಸ್ತಿ ನೀಡಲಾಗಿದೆ| ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ವಿವಿಧ ಕ್ಷೇತ್ರದ ಹೋರಾಟಗಾರರು ಎಂದು ಪ್ರಶಸ್ತಿ ನೀಡಲಾಗಿದೆ| ಯಾವುದೇ ಮಾನದಂಡ ಇಲ್ಲದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದ ಅಬ್ದುಲ್‌ ವಾಜಿದ್‌| 

ಬೆಂಗಳೂರು(ಸೆ.11): ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಆಯ್ಕೆಯಲ್ಲಿ ಆಡಳಿತ ಪಕ್ಷ ಮತ್ತು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಹಾಗೂ ಕೊರೋನಾ ವಾರಿಯರ್ಸ್‌ರನ್ನು ಕಡೆಗಣಿಸಲಾಗಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಆರೋಪಿಸಿದ್ದಾರೆ.

ಕೆಂಪೇಗೌಡ ಜಯಂತಿಯಂದು ಈ ಬಾರಿ ಕೊರೋನಾ ವಾರಿಯರ್ಸ್‌ಗೆ ಪ್ರಶಸ್ತಿ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಕೇವಲ 5ರಿಂದ 6 ಮಂದಿ ಕೊರೋನಾ ವಾರಿಯರ್ಸ್‌ಗೆ ಮಾತ್ರ ಪ್ರಶಸ್ತಿ ನೀಡಲಾಗಿದೆ. ಇನ್ನು ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ವಿವಿಧ ಕ್ಷೇತ್ರದ ಹೋರಾಟಗಾರರು ಎಂದು ಪ್ರಶಸ್ತಿ ನೀಡಲಾಗಿದೆ. ಯಾವುದೇ ಮಾನದಂಡ ಇಲ್ಲದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊರೋನಾ ವಾರಿಯರ್ಸ್‌ಗೆ ಸಂದ ಕೆಂಪೇಗೌಡ ಪ್ರಶಸ್ತಿ, ಅಪಸ್ವರ ಸಲ್ಲ

ಕೊರೋನಾ ಸೋಂಕಿನಿಂದ ಮೃತಪಟ್ಟ 350ಕ್ಕೂ ಹೆಚ್ಚು ಶವಗಳನ್ನು ಅಂತ್ಯ ಸಂಸ್ಕಾರ ಮಾಡಿದ ಮರ್ಸಿ ಏಂಜೆಲ್‌ ಕೊರೋನಾ ವಾರಿಯರ್ಸ್‌ ತಂಡವನ್ನು ಕೊನೆಯ ಹಂತದಲ್ಲಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.
 

click me!