ಜೈ ಮಹಿಷಾ ಘೊಷಣೆ ಕೂಗುತ್ತಾ ಮೈಸೂರಿನತ್ತ ಹೊರಟ ದಲಿತ ಸಂಘಟನೆ ಕಾರ್ಯಕರ್ತರು!

By Ravi JanekalFirst Published Oct 13, 2023, 11:15 AM IST
Highlights

ನಗರದ ಟೌನ್‌ಹಾಲ್ ಬಳಿ ಇಂದು ಮಹಿಷಾ ದಸರಾ ಆಚರಣೆ ಹಿನ್ನೆಲೆ ಸುತ್ತಮುತ್ತ ಹಲವು ಜಿಲ್ಲೆಗಳಿಂದ ಬೈಕ್ ರಾಲಿ ಮೂಲಕ ಆಗಮಿಸಿದ ದಲಿತ ಸಂಘಟನೆಗಳ ಕಾರ್ಯಕರ್ತರು. 

ಮೈಸೂರು (ಅ.13):  ನಗರದ ಟೌನ್‌ಹಾಲ್ ಬಳಿ ಇಂದು ಮಹಿಷಾ ದಸರಾ ಆಚರಣೆ ಹಿನ್ನೆಲೆ ಸುತ್ತಮುತ್ತ ಹಲವು ಜಿಲ್ಲೆಗಳಿಂದ ಬೈಕ್ ರಾಲಿ ಮೂಲಕ ಆಗಮಿಸಿದ ದಲಿತ ಸಂಘಟನೆಗಳ ಕಾರ್ಯಕರ್ತರು. 

ಜಿಲ್ಲಾಡಳಿತ ಪೊಲೀಸ್ ಆಯುಕ್ತ 144 ಸೆಕ್ಷನ್ ಜಾರಿ ಮಾಡಿದ್ದರೂ ಕ್ಯಾರೇ ಎನ್ನದ ಮಹಿಷಾ ಆಚರಣೆ ಸಮಿತಿ ಸದಸ್ಯರು. ಅಶೋಕಪುರಂ ಪಾರ್ಕ್ ಬಳಿ ನೂರಾರು ಸಂಘಟನೆಗಳ ಕಾರ್ಯಕರ್ತರ ಜಮಾವಣೆ. ದಲಿತ, ಪ್ರಗತಿಪರ ಸಂಘಟನೆ ಕಾರ್ಯಕರ್ತರ ಜಮಾವಣೆ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಟೌನ್‌‌ ಹಾಲ್‌ಗೆ ತೆರಳಲಿರುವ ಕಾರ್ಯಕರ್ತರು. ನಗರದಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಜಾರಿಯಲ್ಲಿದ್ರು ನೂರಾರು ಸಂಖ್ಯೆಯಲ್ಲಿ ಗುಂಪು ಸೇರಿರುವ ಜನರು. ನಿಷೇಧಾಜ್ಞೆ ಜಾರಿಯಲ್ಲಿದೆ ಗುಂಪು ಸೇರಿದಂತೆ ಸಲಹೆ ನೀಡುತ್ತಿರೋ ಪೊಲೀಸರು. ಆದರೆ ಇದಕ್ಕೆ ಕ್ಯಾರೇ ಎನ್ನದೇ ಗುಂಪು ಗುಂಪಾಗಿ ಸೇರಿರುವ ವಿವಿಧ ಸಂಘಟನೆಗಳ ಜನರು.

ಚಾಮರಾಜನಗರದಿಂದ ಬೈಕ್ ರಾಲಿ:

ಇತ್ತ ಚಾಮರಾನಗರದಿಂದ ಮೂಲಕ ಮೈಸೂರಿನತ್ತ ಬೈಕ್‌ ರಾಲಿ ಮೂಲಕ ಹೊರಟ ದಲಿತ ಸಂಘಟನೆಗಳ ಮುಖಂಡರು. ಇದರ ಜೊತೆಗೆ ಎರಡು ಬಸ್ ಗಳ ಮೂಲಕ ಮೈಸೂರಿನತ್ತ ಪಯಣ. ಇದಕ್ಕೂ ಮೊದಲು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹಿಷಾನ ಪರ ಜೈಕಾರ ಕೂಗಿದ ಮುಖಂಡರು. ಜಿಲ್ಲಾಡಳಿತದ ನಿಷೇಧಾಜ್ಞೆಗೆ ಕ್ಯಾರೆ ಎನ್ನದ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರು.

ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ; ಜಿಲ್ಲಾಡಳಿತ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ: ಜ್ವಾನಪ್ರಕಾಶ ಸ್ವಾಮೀಜಿ

ಮಂಡ್ಯದಿಂದ ಮೈಸೂರಿನತ್ತ ಬೈಕ್ ರಾಲಿ:

ಮಹಿಷ ದಸರಾ ಬೆಂಬಲಿಸಿ ಮಂಡ್ಯ ಟು ಮೈಸೂರು ಬೈಕ್ ರಾಲಿ ಮೂಲಕ ನೂರಾರು ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರಯಾಣ. ಮಹಿಷಾ ದಸರಾ ಬೆಂಬಲಿಸಿ ಮೈಸೂರು ತಲುಪಿದ ಕಾರ್ಯಕರ್ತರು. ನಿಷೇಧಾಜ್ಞೆ ನಡುವೆ ಬೈಕ್ ರಾಲಿ. ಅಶೋಕ ಪುರಂ ಅಂಬೇಡ್ಕರ್ ಪಾರ್ಕ್ ನಿಂದ ಟೌನ್ ಹಾಲ್ ವರೆಗೆ  ನೂರಾರು ಬೈಕ್ ಗಳ ಮೂಲಕ ರಾಲಿ. ಧ್ವನಿವರ್ಧಕ ಬಳಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದರೂ, ಮಹಿಷಾನಿಗೆ ಜೈಕಾರದ ಕೂಗು. ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಮಹಿಷಾನಿಗೆ ಜೈಕಾರದ ಅಬ್ಬರ. ಮಹಿಷಾ ದಸರಾ ಆಚರಣೆಗೆ ಹಲವು ಷರತ್ತುಗಳು ವಿಧಿಸಿ ಅನುಮತಿ ನೀಡಿದ್ದ ಪೊಲೀಸ್ ಆಯುಕ್ತರು. ಆದರೆ ಇದೀಗ ಎಲ್ಲ ಷರತ್ತುಗಳ ಉಲ್ಲಂಘನೆ. ಗುಂಪುಗುಂಪಾಗಿ ಸೇರಿರುವ ಜನರು.

ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧ; ಟೌನ್‌ಹಾಲ್‌ಗೆ ಸೀಮಿತವಾದ ಮಹಿಷಾ ದಸರಾ 

ಬೈಕ್‌ ರಾಲಿಗೂ ಮುನ್ನ ಮಹಿಷಾಸುರನ ಪ್ರತಿಮೆಗೆ ಪೂಜೆ ಸಲ್ಲಿಸಿದ ಕಾರ್ಯಕರ್ತರು. ಮಂಡ್ಯ ಜಿಲ್ಲೆಯ ‌ಮಂಗಲ ಗ್ರಾಮದಲ್ಲಿ ಪೂಜೆ. ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗವೇ ಇರುವ ಮಹಿಷಾಸುರನ ಪ್ರತಿಮೆ. ಪ್ರತಿಮೆಗೆ ಹೂವಿನ ಹಾರ ಹಾಕಿ, ಆರ್ಚಕರಿಂದ ಪೂಜೆ. ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು. ಪ್ರತಿಮೆಗೆ ಪೂಜೆ ಸಲ್ಲಿಸಿ ಬಳಿಕ ಮೈಸೂರಿನತ್ತ ತೆರಳಿದ ಕಾರ್ಯಕರ್ತರು.

click me!