ಕರ್ನಾಟಕ ರಾಜ್ಯದಲ್ಲಿ ಸೆಪ್ಟಂಬರ್ ತಿಂಗಳಲ್ಲಿಯೂ ಮಳೆ ಕೊರತೆ ಉಂಟಾಗಿದ್ದು, ಬರಪೀಡಿತ ತಾಲೂಕುಗಳ ಸಂಖ್ಯೆಯನ್ನು 195ರಿಂದ 216ಕ್ಕೆ ಹೆಚ್ಚಳ ಮಾಡಲಾಗಿದೆ.
ಬೆಂಗಳೂರು (ಅ.13): ರಾಜ್ಯದಲ್ಲಿ ಈಗಾಗಲೇ ಆಗಸ್ಟ್ ತಿಂಗಳಾಂತ್ಯಕ್ಕೆ ಪರಿಗಣಿಸಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ಇದಾದ ನಂತರ ಸೆಪ್ಟಂಬರ್ ತಿಂಗಳಲ್ಲಿಯೂ ಮಳೆ ಕೊರತೆ ಉಂಟಾಗಿದ್ದರಿಂದ ಹೆಚ್ಚುವರಿ 21 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿ ಒಟ್ಟು 216 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ - 2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ, ಸಮೀಕ್ಷೆಯ (Ground Truthing) ವರದಿಯನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಈ ಪೈಕಿ ಸಾಧಾರಣ ಬರಪೀಡಿತ 34 ತಾಲ್ಲೂಕುಗಳಲ್ಲಿ ಮತ್ತೊಮ್ಮೆ 22 ತಾಲ್ಲೂಕುಗಳ ಬೆಳೆ ಸಮೀಕ್ಷೆ ದೃಢೀಕರಣ (Ground Truthing) ವರದಿಯನ್ವಯ 11 ತೀವ್ರ ಬರ ಪೀಡಿತ ತಾಲ್ಲೂಕು ಹಾಗೂ 11 ಸಾಧಾರಣ ಬರ ಪೀಡಿತ ತಾಲ್ಲೂಕು ಹಾಗೂ ಹೆಚ್ಚುವರಿಯಾಗಿ 21 ಬರ ಪೀಡಿತ ತಾಲ್ಲೂಕುಗಳ ಪೈಕಿ, 17 ತೀವು ಬರಪೀಡಿತ ತಾಲ್ಲೂಕು ಹಾಗೂ 04 ಸಾಧಾರಣಾ ಬರಪೀಡಿತ ತಾಲ್ಲೂಕುಗಳೆಂದು (ಅನುಬಂಧ-1) ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಘೋಷಿಸಿ ಆದೇಶಿಸಿದೆ.
ಕರ್ನಾಟಕ ಬರ ಪರಿಶೀಲನೆ ಪೂರ್ಣಗೊಳಿಸಿದ ಕೇಂದ್ರ ಬರ ಅಧ್ಯಯನ ತಂಡ: ಹಣ ಬಿಡುಗಾಗಿ ಬೆನ್ನುಬಿದ್ದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಅ.09ರಂದು ನಡೆದ ಸಚಿವ ಸಂಪುಟ ಸಭೆ ನಿರ್ಣಯದಂತೆ ನಿರ್ದೇಶಕರು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಪುಸ್ತಾವನೆಯನ್ನು ಪರಿಶೀಲಿಸಿ ಹೊಸದಾಗಿ 21 ತಾಲ್ಲೂಕುಗಳಲ್ಲಿ ಬರ ಕಂಡುಬಂದಿರುವುದನ್ನು ಪ್ರಸ್ತಾಪಿಸಲಾಗಿದೆ. ರಾಜ್ಯದ 236 ತಾಲ್ಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಇದರಲ್ಲಿ ಸಾಧಾರಣ ಬರ ಪೀಡಿತ ತಾಲ್ಲೂಕುಗಳೆಂದು 34 ತಾಲ್ಲೂಕುಗಳ ಪೈಕಿ ಹವಾಮಾನ ಪರಿಸ್ಥಿತಿ ವೈಫಲ್ಯದಿಂದ 22 ತಾಲ್ಲೂಕುಗಳ (ಅನುಬಂಧ-1)ಬೆಳೆ ಸಮೀಕ್ಷೆ ದೃಢೀಕರಣ (Ground Truthing) ಮತ್ತೊಮ್ಮೆ ನಡೆಸುವಂತೆ ನಿರ್ಣಯಿಸಿದೆ.
ಮೂರನೇ ಹಂತದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ತಾಲೂಕುಗಳಲ್ಲಿ ಶೇ.10 ರಷ್ಟು ಗ್ರಾಮಗಳನ್ನು ರ್ಯಾಂಡಮ್ (Random) ಆಗಿ ಆಯ್ಕೆ ಮಾಡಿ, ಪ್ರಮುಖ ಬೆಳೆಗಳನ್ನು ಗುರುತಿಸಿ ಪ್ರತಿ ಬೆಳೆಗಳ ಸುಮಾರು 5 sites ಇ-ಆಡಳಿತ ಇಲಾಖೆ ಅಭಿವೃದ್ಧಿ ಪಡಿಸಿರುವ ಅಪ್ಲಿಕೇಷನ್ (App) ಮೂಲಕ ಭೂಮಿಯ ಸತ್ಯಾಸತ್ಯತೆ ಅಥವಾ ಪರಿಶೀಲನೆ (Ground Truthing or Verification) ಮಾಡುವುದು. ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆಯನ್ನು ಕೈಗೊಂಡು ಬರ ಕೈಪಿಡಿಯಲ್ಲಿ ನಮೂದಿಸಿರುವ Form No.11 ರಲ್ಲಿ ದೃಢೀಕೃತ ವರದಿಯನ್ನು ಸಲ್ಲಿಸಲು ತಿಳಿಸಲಾಯಿತು.
ಬರಪೀಡಿತ 195 ತಾಲ್ಲೂಕುಳಿಗೆ ಹೆಚ್ಚುವರಿ 32 ಸೇರ್ಪಡೆಗೆ ಸಿದ್ಧತೆ: ಸಚಿವ ಕೃಷ್ಣ ಬೈರೇಗೌಡ ಮಾಹಿತಿ
ಜಿಲ್ಲಾಧಿಕಾರಿಗಳಿಂದ ಬೆಳೆ ಸಮೀಕ್ಷೆ ಬಗ್ಗೆ ವರದಿಯನ್ನು ಪಡೆದು ಪರಿಶೀಲಿಸಿ, ಮೊದಲು ಸಾಧಾರಣ ಬರ ಪೀಡಿತವೆಂದು ಗುರುತಿಸಲಾದ 34 ತಾಲ್ಲೂಕುಗಳ ಪೈಕಿ 22 ತಾಲ್ಲೂಕುಗಳಲ್ಲಿ Ground Truthing ಕೈಗೊಂಡು ನೀಡಿರುವ ವರದಿಯನುಸಾರ 11 ತಾಲ್ಲೂಕುಗಳಲ್ಲಿ "ತೀವ್ರ" ಬರ ಹಾಗೂ 11 ತಾಲ್ಲೂಕುಗಳಲ್ಲಿ "ಸಾಧಾರಣ" ಬರ ಪೀಡಿತ ತಾಲ್ಲೂಕು ಎಂದು ಘೋಷಿಸುವ ಅರ್ಹತೆ ಪಡೆದಿರುವುದಾಗಿ ಹಾಗೂ ಸೆಪ್ಟೆಂಬರ್ ಅಂತ್ಯದವರೆಗಿನ ಅವಧಿಗೆ ಬರ ಪರಿಸ್ಥಿತಿ ಕಂಡು ಬಂದ 21 ತಾಲ್ಲೂಕುಗಳ ಪೈಕಿ Ground Truthing ಕೈಗೊಂಡ ವರದಿಯನ್ವಯ 17 ತಾಲ್ಲೂಕುಗಳನ್ನು "ತೀವ್ರ" ಬರಪೀಡಿತ ತಾಲ್ಲೂಕು ಎಂದು ಮತ್ತು ಉಳಿದ 4 ತಾಲ್ಲೂಕು "ಸಾಧಾರಣ” ಬರಪೀಡಿತವೆಂದು ಒಟ್ಟು 236 ತಾಲ್ಲೂಕುಗಳ ಪೈಕಿ 189 ತೀವ್ರ ಬರಪೀಡಿತ ತಾಲ್ಲೂಕು ಹಾಗೂ 27 ಸಾಧಾರಣಾ ಬರಪೀಡಿತ ತಾಲ್ಲೂಕುಗಳು ಒಳಗೊಂಡಂತೆ ಒಟ್ಟು 216 ತಾಲ್ಲೂಕುಗಳನ್ನು ಬರಪೀಡಿತ ತಾಲೂಕುಗಳಾಗಿ ಅರ್ಹತೆ ಪಡೆದಿರುವುದು ಕಂಡುಬಂದಿದೆ.