Maha Kumbh Mela 2025 : ಮೈಸೂರಿನಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲು, ಬುಕಿಂಗ್ ವಿವರ ಇಲ್ಲಿದೆ

By Kannadaprabha News  |  First Published Dec 22, 2024, 9:39 AM IST

Maha Kumbh Mela 2025: ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಮೈಸೂರಿನಿಂದ ಪ್ರಯಾಗ್‌ರಾಜ್‌ಗೆ ವಿಶೇಷ ಏಕಮುಖ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ. ಡಿ. 23ರಂದು ಮೈಸೂರಿನಿಂದ ಹೊರಡುವ ಈ ರೈಲು ಡಿ. 25ರಂದು ಪ್ರಯಾಗ್ ರಾಜ್ ತಲುಪಲಿದೆ. ಹಲವು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.


ಹುಬ್ಬಳ್ಳಿ (ಡಿ.22): ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಮೈಸೂರಿನಿಂದ ಪ್ರಯಾಗ್‌ರಾಜ್‌ಗೆ ವಿಶೇಷ ಏಕಮುಖ ಎಕ್ಸ್‌ಪ್ರೆಸ್ ರೈಲು (06215) ಓಡಿಸಲಿದೆ. 

ರೈಲು ಸಂಖ್ಯೆ 06215 ಮೈಸೂರು- ಪ್ರಯಾಗ್ ರಾಜ್ ಒನ್-ವೇ ಕುಂಭ ವಿಶೇಷ ಏಕಮುಖ ಎಕ್ಸ್‌ಪ್ರೆಸ್ ರೈಲು ಡಿ. 23ರಂದು ಮಧ್ಯರಾತ್ರಿ 12.30 ಗಂಟೆಗೆ ಮೈಸೂರಿನಿಂದ ಹೊರಟು, ಡಿ. 25ರಂದು ಬೆಳಗ್ಗೆ 3 ಗಂಟೆಗೆ ಪ್ರಯಾಗ್ ರಾಜ್ ಜಂಕ್ಷನ್ ತಲುಪಲಿದೆ. 

Tap to resize

Latest Videos

undefined

ಮಹಾಕುಂಭ ಮೇಳದ ವೇಳೆ ಉಚಿತ ರೈಲು ಪ್ರಯಾಣ, ರೈಲ್ವೇಸ್‌ ಸ್ಪಷ್ಟೀಕರಣ ಇಲ್ಲಿದೆ!

ಮಾರ್ಗ ಮಧ್ಯದಲ್ಲಿ ಈ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸಿಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಪುಣೆ, ದೌಂಡ್ ಚೋರ್ಡ್ ಲೈನ್, ಅಹ್ಮದ್‌ ನಗರ, ಮನ್ಮಡ, ಭುಸಾವಲ್, ಖಾಂಡ್ವಾ, ತಲ್ವಾಡಿಯಾ, ಛಾನೆರಾ, ಖಿರ್ಕಿಯಾ, ಹರ್ದಾ, ಬನಪುರ, ಇಟಾರ್ಸಿ, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

 ಈ ರೈಲಿನ ಆಗಮನ ಮತ್ತು ನಿರ್ಗಮನದ ಸಮಯವನ್ನು ತಿಳಿಯಲು, ಪ್ರಯಾಣಿಕರು ಭಾರತೀಯ ರೈಲ್ವೆಯ ವೆಬ್‌ಸೈಟ್‌ (www.enquiry.indianrail.gov.in) ಭೇಟಿ ನೀಡಿ, 139 ಸಂಖ್ಯೆಗೆ ಡಯಲ್ ಮಾಡಿ ಅಥವಾ NTES ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

click me!