Latest Videos

ಸ್ವಾತಂತ್ರ್ಯ ಸೇನಾನಿಗೆ ಭಕ್ತರೇ ಕಟ್ಟಿದ ದೇಗುಲ ಲೋಕಾರ್ಪಣೆ ಮಾಡಿದ ಸಿಎಂ!

By Ravi JanekalFirst Published Jun 16, 2024, 8:29 PM IST
Highlights

ಭಕ್ತರೇ ಸೇರಿ ಹಣ ಸಂಗ್ರಹಿಸಿ 30 ವರ್ಷಗಳ ಬಳಿಕ ಕಟ್ಟಿದ ಸ್ವಾತಂತ್ರ್ಯ ಸೇನಾನಿಯ ಬೃಹತ್ ದೇಗುಲವನ್ನ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. 

ವಿಜಯಪುರ (ಜೂ.16) ಭಕ್ತರೇ ಸೇರಿ ಹಣ ಸಂಗ್ರಹಿಸಿ 30 ವರ್ಷಗಳ ಬಳಿಕ ಕಟ್ಟಿದ ಸ್ವಾತಂತ್ರ್ಯ ಸೇನಾನಿಯ ಬೃಹತ್ ದೇಗುಲವನ್ನ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. 

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠದಲ್ಲಿ ಕ್ರಾಂತಿಯೋಗಿ ಮಹಾದೇವರ ದೇಗುಲವನ್ನು ಸುಮಾರು 50 ಕೋಟಿ ರೂ ವೆಚ್ಚದಲ್ಲಿ ಭಕ್ತರೇ ನಿರ್ಮಿಸಿದ್ದಾರೆ. ಈ ವಿಶೇಷ ದೇಗುಲವನ್ನ ಸಿಎಂ ಸಿದ್ದರಾಮಯ್ಯ(CM Siddaramaiah) ಉದ್ಘಾಟಿಸಿದ್ರು. ವಿಶೇಷ ಅಂದರೆ ಮಾಧವಾನಂದ ಪ್ರಭುಜಿ(Madhavananda prabhu) ಗಳು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಅಂತರ್ ಜಾತಿಯ ವಿವಾಹ (Inter caste marriage), ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ಗೋವಾ ವಿಮೋಚನೆ ಹೋರಾಟಗಳನ್ನ ವೇದಿಕೆಯಲ್ಲಿ ನೆನೆದು ಸಿಎಂ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿದರು.

 

ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರನಿಗೆ ಗೋಲ್ಡನ್‌ ಟೆಂಪಲ್!

ಹೆಚ್ಚೆಚ್ಚು ಅಂತರ್ ಜಾತಿ, ಅಂತರ್ ಧರ್ಮಿಯ ವಿವಾಹ ಮಾಡಬೇಕು: ಸಿಎಂ

ದೇಗುಲ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜನರು ಹೆಚ್ಚೆಚ್ಚು ಅಂತರ್ ಜಾತಿಯ, ಅಂತರ್ ಧರ್ಮಿಯ ವಿವಾಹಗಳನ್ನ ಪ್ರೋತ್ಸಾಹಿಸಬೇಕು. ಇದರಿಂದ ಜಾತೀಯತೆಯನ್ನ ತೊಲಗಿಸಬಹುದು ಎಂದರು.

ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದ ವಿಜಯಪುರದ ಮಠಾಧೀಶರು; ರಾಜ್ಯೋತ್ಸವದ ಮರುದಿನವೇ ಮಹಾದೇವರ ಜನ್ಮದಿನ!

ಜಾತ್ಯಾತೀತ ಸಮಾಜ ನಿರ್ಮಾಣವಾಗಬೇಕಾದರೆ ಜನರು ಅಂತರ್ ಜಾತಿ ವಿವಾಹಗಳತ್ತ ಒಲವು ತೋರಿಸಬೇಕು. ಸಮಾಜವನ್ನ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವಿಭಜಿಸಲಾಯಿತು. ಇಂಚಗೇರಿ ಮಠದ ಮಾಧವಾನಂದ ಶ್ರೀಗಳು ಸಾವಿರಾರು ಅಂತರ್ ಜಾತಿ, ಅಂತರ್ ಧರ್ಮಿಯ ವಿವಾಹಳಗಳನ್ನ ಮಾಡುವ ಮೂಲಕ ಜಾತೀಯತೆಯ ವಿರುದ್ಧ ಹೋರಾಡಿದರು. ನಾವು ಸಹಿತ ಅವರ ಮಾರ್ಗದಲ್ಲಿ ಸಾಗಬೇಕು ಎಂದರು.

click me!