Latest Videos

ಬೆಂಗಳೂರು ವಾಹನ ಮಾಲೀಕರೆ ಎಚ್ಚರ, ಪ್ರತಿ ತಿಂಗಳು ಕಳುವಾಗುತ್ತಿದೆ 400ಕ್ಕೂ ಹೆಚ್ಚು ವಾಹನ!

By Chethan KumarFirst Published Jun 16, 2024, 6:36 PM IST
Highlights

ಬೆಂಗಳೂರಿನಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಬೆಂಗಳೂರಿನಲ್ಲಿ ಪ್ರತಿ ತಿಂಗಳಲ್ಲಿ ಸರಾಸರಿ ಪ್ರಕಾರ 400ಕ್ಕೂ ಹೆಚ್ಚು ವಾಹನಗಳು ಕಳ್ಳತನವಾಗುತ್ತಿದೆ. 
 

ಬೆಂಗಳೂರು(ಜೂ.16) ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ವಾಹನ, ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ವಾಹನ ಮಾರಾಟ, ಬಳಕೆ ಎಲ್ಲವೂ ಹೆಚ್ಚು. ಜೊತೆಗೆ ವಾಹನ ಪಾರ್ಕಿಂಗ್ ಸಮಸ್ಯೆಯೂ ಅದಕ್ಕಿಂತ ಹೆಚ್ಚು. ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ವಾಹನ ಕಳ್ಳತನ ಪ್ರಕರಣವೂ ಗಣನೀಯವಾಗಿ ಏರಿಕೆಯಾಗುತ್ತಿರುವುದು ಆತಂಕ ತಂದಿದೆ. ಪ್ರತಿ ತಿಂಗಳು ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚು ವಾಹನಗಳು ಕಳ್ಳತನವಾಗುತ್ತಿದೆ. 

2024ರ ಸಾಲಿನಲ್ಲಿ ಪ್ರತಿ ತಿಂಗಳು 400ಕ್ಕೂ ಹೆಚ್ಚು ವಾಹನಗಳು ಕಳ್ಳತನವಾಗಿದೆ. ಜನವರಿಯಲ್ಲಿ 520ಕ್ಕೂ ಹೆಚ್ಚು ವಾಹನಗಳು ಕಳ್ಳತನವಾಗಿದೆ. ಈ ಪೈಕಿ ಕೆಲ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಆದರೆ ಬಹುತೇಕ ಪ್ರಕರಣಗಳು ತಾರ್ಕಿಕ ಅಂತ್ಯಕಂಡಿಲ್ಲ. ಇತ್ತೀಚೆಗೆ ಪಾರ್ಕ್ ಮಾಡಿದ್ದ ಟೆಂಪೋ ಟ್ರಾವಲರ್ ಕಳ್ಳತನ ವೇಳೆ ಆರೋಪಿಯನ್ನು ಬಂಧಿಸಲಾಗಿತ್ತು. 

ವಾಹನ ಸವಾರರೇ ಎಚ್ಚರ: ಪೊಲೀಸ್ ಪೋರ್ಟಲ್‌ ಬಳಸ್ಕೊಂಡು ಕಾರು, ಬೈಕ್‌ ಮಾಲೀಕರಿಂದ ಹಣ ಸುಲಿಗೆ ಮಾಡ್ತಿದ್ದ ಐನಾತಿ ಕಳ್ಳ!

ಹಲವು ವಾಹನ ಕಳ್ಳರ ಗ್ಯಾಂಗ್ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ವಾಹನ ಕಳ್ಳತನ ಮಾಡುವುದೇ ಈ ಗ್ಯಾಂಗ್‌ನ ಕೆಲಸ. ರಾತ್ರಿಯಲ್ಲೇ ಹೆಚ್ಚಿನ ವಾಹನಗಳು ಕಳುವಾಗುತ್ತಿದೆ. ನಿಲ್ಲಿಸಿದ್ದ ವಾಹನಗಳನ್ನು ನಿಮಿಷಗಳ ಅಂತರದಲ್ಲಿ ಕಳ್ಳತನ ಮಾಡುವ ಚಾಲಾಕಿ ಗ್ಯಾಂಗ್ ಪತ್ತೆ ಹಚ್ಚಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿ ದಿನ ಪ್ರಕರಣ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. 

2024ರಲ್ಲಿ ಇದುವರೆಗೆ 1900ಕ್ಕೂ ಹೆಚ್ಚು ವಾಹನಗಳು ಕಳ್ಳತನವಾಗಿದೆ. ಕಾರು, ಬೈಕ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳೂ ಇದರಲ್ಲಿ ಸೇರಿವೆ. ಇದೀಗ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ರಾತ್ರಿ ವೇಳೆ ಗಸ್ತು ಹೆಚ್ಚಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇದೇ ವೇಳೆ ವಾಹನ ಮಾಲೀಕರು ತಮ್ಮ ತಮ್ಮ ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡುವಂತೆ ಕೋರಿದ್ದಾರೆ. ಪಾರ್ಕಿಂಗ್ ಸಮಸ್ಯೆಯಿಂದ ಎಲ್ಲೆಂದರಲ್ಲಿ ಪಾರ್ಕ್ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ. ಮನೆ ಮುಂಭಾಗದಲ್ಲಿ ಪಾರ್ಕ್ ಮಾಡಿದ ವಾಹನಗಳನ್ನೂ ಕದ್ದ ಉದಾಹರಣೆಗಳಿವೆ. ಹೀಗಾಗಿ ಮುಂಜಾಗ್ರತ ವಹಿಸುವಂತೆ ಸೂಚಿಸಲಾಗಿದೆ.

ಹೊಸ ಗ್ಯಾರೇಜ್‌ ತೆರೆಯಲು ವಾಹನ ಕದಿಯುತ್ತಿದ್ದವರ ಸೆರೆ
 

click me!