ರಾಜ್ಯಕ್ಕೆ ಕೇಂದ್ರದಿಂದ 10 ವರ್ಷದಲ್ಲಿ 1.85 ಲಕ್ಷ ಕೋಟಿ ಅನುದಾನ ನಷ್ಟ: ಸಚಿವ ಕೃಷ್ಣ ಬೈರೇಗೌಡ

By Kannadaprabha News  |  First Published Apr 7, 2024, 12:03 PM IST

ಲೋಕಸಭಾ ಚುನಾವಣೆ ಸಮಯದಲ್ಲಿ ತೆರಿಗೆ ಅನ್ಯಾಯದ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕಕ್ಕೆ ಜಿಎಸ್‌ಟಿ ಹಂಚಿಕೆ ಸೇರಿದಂತೆ ಇನ್ನಿತರ ವಿಚಾರದಲ್ಲಿ 1.85 ಲಕ್ಷ ಕೋಟಿ ರು. ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಪಾದಿಸಿದ್ದಾರೆ. 
 


ಬೆಂಗಳೂರು (ಏ.07): ಲೋಕಸಭಾ ಚುನಾವಣೆ ಸಮಯದಲ್ಲಿ ತೆರಿಗೆ ಅನ್ಯಾಯದ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕಕ್ಕೆ ಜಿಎಸ್‌ಟಿ ಹಂಚಿಕೆ ಸೇರಿದಂತೆ ಇನ್ನಿತರ ವಿಚಾರದಲ್ಲಿ 1.85 ಲಕ್ಷ ಕೋಟಿ ರು. ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಪಾದಿಸಿದ್ದಾರೆ. ಜಾಗೃತ ಕರ್ನಾಟಕ, ರಾಜ್ಯ ರೈತ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳು ಶನಿವಾರ ಗಾಂಧಿಭವನದಲ್ಲಿ 'ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆದ ಅನ್ಯಾಯ ವೆಷ್ಟು?' ವಿಷಯದ ಕುರಿತು ಏರ್ಪಡಿಸಿದ್ದ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

1.85 ಲಕ್ಷ ಕೋಟಿ ರು. ಆದಾಯ ನಷ್ಟ: ವರ್ಷದಿಂದ ವರ್ಷಕ್ಕೆ ರಾಜ್ಯದಿಂದ ಜಿಎಸ್ಟಿ ಸಂಗ್ರಹ ಶೇ. 14ರಷ್ಟು ಹೆಚ್ಚುತ್ತಿದೆ. ಆದರೆ, ರಾಜ್ಯಕ್ಕೆ ನೀಡುವ ಪಾಲು ಮಾತ್ರ ಕಡಿಮೆ ಯಾಗುತ್ತಿದೆ. ಜಿಎಸ್ಟಿ ಜಾರಿಯಾದಾಗಿನಿಂದ ರಾಜ್ಯಕ್ಕೆ ಜಿಎಸ್ಟಿ ಸಂಗ್ರಹದಿಂದ 4.92 ಲಕ್ಷ ಕೋಟಿ ರು. ಜಿಎಸ್ಟಿ ಆದಾಯ ಬರಬೇಕಿದ್ದು, 3.26 ಲಕ್ಷ ಕೋಟಿ ರು. ಮಾತ್ರ ಕೇಂದ್ರ ಸರ್ಕಾರ ಹಿಂದಿರುಗಿಸಿದೆ. 1.65 ಲಕ್ಷ ರು. ಜಿಎಸ್ಟಿ ಆದಾಯ ಖೋತಾದಲ್ಲಿ 1.06 ಲಕ್ಷ ಕೋಟಿ ರು.ಗಳನ್ನು ನಷ್ಟ ಪರಿಹಾರವಾಗಿ ನೀಡಿದೆ. ಉಳಿದ 59,274 ಕೋಟಿ ರು. ಜಿಎಸ್ಟಿ ಆದಾಯ ಖೋತಾ ಆಗುವಂತಾಗಿದೆ.

Tap to resize

Latest Videos

15ನೇ ಹಣಕಾಸು ಆಯೋಗವು ಕೇಂದ್ರದಿಂದ ನೀಡುವ ಅನುದಾನದಲ್ಲಿ ರಾಜ್ಯದ ಪಾಲನ್ನು 14ನೇ ಹಣಕಾಸು ಆಯೋಗಕ್ಕಿಂತ ಶೇ. 1.07ರಷ್ಟು ಕಡಿತ ಗೊಳಿಸಿದ್ದರಿಂದಲೂ ಆದಾಯ ಖೋತಾ ಆಗುವಂತಾಗಿದೆ. 2020-21ರಿಂದ 2025 -26ರವರೆಗೆ 62 ಸಾವಿರ ಕೋಟಿ ರು.ನಷ್ಟು ಆದಾಯ ನಷ್ಟವುಂಟಾಗುವಂತಾಗಿದೆ. ಅಲ್ಲದೆ, ಆಯೋಗವು 2020-21ನೇ ಸಾಲಿಗೆ 5,495 ಕೋಟಿ ರು. ವಿಶೇಷ ಅನುದಾನವನ್ನು ರಾಜ್ಯಕ್ಕೆ ನೀಡುವಂತೆ ಸೂಚಿಸಿತ್ತು. ಅದರ ಜತೆಗೆ ಆಯೋಗದ ಅಂತಿಮ ವರದಿಯಲ್ಲಿ 6,664 ಕೋಟಿ ರು. ವಿಶೇಷ ಅನುದಾನನೀಡುವಂತೆಯೂ ತಿಳಿಸಿತ್ತು. ಆದರೆ, ಅದ್ಯಾವುದನ್ನೂ ಕೇಂದ್ರ ಸರ್ಕಾರ ನೀಡಿಲ್ಲ ಎಂದರು.

ನಾಲ್ಕೂವರೆ ವರ್ಷಗಳ ಬಳಿಕ ವಿಶ್ವನಾಥ್, ಎಚ್.ಡಿ.ಕುಮಾರಸ್ವಾಮಿ ಭೇಟಿ

ನಿರ್ಮಲಾ ಸೀತಾರಾಮನ್ ಗೈರು!: ಬಹಿರಂಗ ಚರ್ಚಾ ಕಾರ್ಯಕ್ರಮಕ್ಕೆ ಆಯೋಜಕರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಆಹ್ವಾನಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಅಲ್ಲದೆ, ಅವರಿಗಾಗಿ ಪ್ರತ್ಯೇಕ ಆಸನವನ್ನೂ ಕಾಯ್ದಿರಿಸಿ ದ್ದರು. ಆದರೆ, ಕಾರ್ಯಕ್ರಮಕ್ಕೆ ಸೀತಾರಾಮನ್ ಅವರು ಮಾತ್ರ ಬರಲಿಲ್ಲ.

click me!