Rameshwaram Cafe Blast Case: ನನ್ನ ತಪ್ಪಿದ್ದರೆ ಗುಂಡು ಹೊಡೆಯಿರಿ: ಸಾಯಿ ಪ್ರಸಾದ್​

By Kannadaprabha NewsFirst Published Apr 7, 2024, 9:12 AM IST
Highlights

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಅವರನ್ನು ವಶಕ್ಕೆ ಪಡೆದಿದ್ದ ಎನ್​ಐಎ ತಂಡವು ವಿಚಾರಣೆ ನಡೆಸಿ ವಾಪಸ್​ ಕಳುಹಿಸಿದೆ. 
 

ಶಿವಮೊಗ್ಗ (ಏ.07): ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಅವರನ್ನು ವಶಕ್ಕೆ ಪಡೆದಿದ್ದ ಎನ್​ಐಎ ತಂಡವು ವಿಚಾರಣೆ ನಡೆಸಿ ವಾಪಸ್​ ಕಳುಹಿಸಿದೆ. ಇದರ ಬೆನ್ನಲ್ಲೇ ಸಾಯಿ ಪ್ರಸಾದ್​ ಮಾತನಾಡಿದ್ದು, ನಾನೊಬ್ಬ ಬಿಜೆಪಿ ಸಣ್ಣ ಕಾರ್ಯಕರ್ತ ಅಷ್ಟೇ. ಯಾವುದೇ ಮುಖಂಡ, ನಾಯಕನಲ್ಲ. ಸಣ್ಣಪುಟ್ಟ ಪೇಂಟಿಂಗ್ ಮಾಡಿಕೊಂಡು ಬದುಕುತ್ತಿದ್ದೇವೆ. ನನ್ನದು ತಪ್ಪಿದ್ದರೆ ನೇರವಾಗಿ ಗುಂಡು ಹೊಡೆಯಿರಿ ಎಂದಿದ್ದಾರೆ.

ಇಂತಹ ಕೆಲಸ ಮಾಡುತ್ತೇವೆ ಎಂದು ತಿಳಿದರೆ, ಮನೆಯಲ್ಲೇ ಮೊದಲು ಹೊಡೆಯುತ್ತಾರೆ. ಈ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ. ನಾವು ಯಾವುದೇ ದೇಶ ವಿರೋಧಿ ಚಟುವಟಿಕೆ ಮಾಡಲ್ಲ. ನಾನು ಹಿಂದೂಪರ ಸಂಘಟನೆಯಲ್ಲಿದ್ದೇನೆ. ಹುಟ್ಟಿನಿಂದಲೂ ಆ ಬುದ್ಧಿ ನಮಗೆ ಬಂದಿಲ್ಲ ಎಂದು ಸಾಯಿಪ್ರಸಾದ್ ತಿಳಿಸಿದ್ದಾರೆ.

Latest Videos

Lok Sabha Election 2024: ಪ್ರಜಾತಂತ್ರ ಉಳಿಸಲು ಕಾಂಗ್ರೆಸ್‌ ಗೆಲ್ಲಿಸಿ : ಸಿಎಂ ಸಿದ್ದರಾಮಯ್ಯ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಮುಜಾಮಿಲ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆ ಭಾಗವಾಗಿ ನನಗೂ ಸೇರಿ ಮೂವರಿಗೆ ನೋಟಿಸ್ ನೀಡಲಾಗಿತ್ತು. ಜೊತೆಗೆ ನನ್ನ ತಮ್ಮನಿಗೂ ನೋಟಿಸ್ ಬಂದಿತ್ತು. ನಮಗೆ ನೋಟಿಸ್ ಏಕೆ ಕೊಟ್ಟಿದ್ದಾರೆಂದು ತಿಳಿದಿರಲಿಲ್ಲ. ಮತೀನ್ ಎಂಬಾತ ಸಾಯಿ ಸ್ಲ್ಯಾಷ್_ಪಿ ಎಂಬ ಅಕೌಂಟ್ ನಿಂದ ಕ್ರಿಪ್ಟೋ ಕರೆನ್ಸಿ ವ್ಯವಹಾರ ಮಾಡಿದ್ದಾನೆ. ಸಾಯಿ ಪಕ್ಕದಲ್ಲಿ ಪಿ ಇರುವುದರಿಂದ ನನ್ನ ತಮ್ಮ ಹಾಗೂ ನನಗೆ ಕರೆಸಿದ್ದರು ಎಂದು ಬಳಿಕ ಗೊತ್ತಾಯಿತು ಎಂದು ತಿಳಿಸಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ನಾನು ಕ್ರಿಪ್ಟೋ ಎಂಬ ಅಧಿಕೃತ ಆ್ಯಪ್ ಮೂಲಕ ಶೇರ್‌ನಲ್ಲಿ ಹಣ ಹೂಡಿಕೆ ಮಾಡಿದ್ದೇನೆ. ಅದು ನನ್ನ ಬ್ಯಾಂಕ್ ಮೂಲಕವೇ ಕೆವೈಸಿ ಬಳಸಿ ಮಾಡಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಗೆ ನಾನು ತಿಳಿಸಿದ್ದೇನೆ. ಹೀಗಾಗಿ ಎಲ್ಲಾ ರೀತಿಯಲ್ಲೂ ಅಧಿಕಾರಿಗಳು ತನಿಖೆ ಮಾಡಿ ಕಳುಹಿಸಿದ್ದಾರೆ. ಜೊತೆಗೆ ಮುಜಾಮಿಲ್​ನನ್ನು ವಿಚಾರಣೆ ಮಾಡಿ ಕಳಿಸಿದ್ದಾರೆ. ನಾವು ಅವರು ಸ್ನೇಹಿತರು ಅಷ್ಟೇ. ಅವರ ಕೆಲಸವೇನಾದರೂ ಇದ್ದರೆ ನಾನು ಮಾಡಿಕೊಡುತ್ತಿದ್ದೆ. ಅವರ ಅಂಗಡಿಯಲ್ಲಿ ಮೊಬೈಲ್ ಖರೀದಿ ಮಾಡಿದ್ದೇವೆ. ಆರೋಗ್ಯಕರ ವ್ಯವಹಾರ ಮಾಡುತ್ತಿದ್ದೇವೆ. 

ಬೆಂಗಳೂರಿನಲ್ಲಿ ಕಾಲರಾ ಸ್ಫೋಟ ಭೀತಿ: ಇಬ್ಬರು ವಿದ್ಯಾರ್ಥಿನಿಯರಲ್ಲಿ ಸೋಂಕು ದೃಢ

ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಕೊಟ್ಟಿದ್ದೇನೆ. ನಾನು ಅವರಿಗೆ ಕ್ರಿಪ್ಟೋ ಆ್ಯಪ್ ಬಳಕೆ ಬಗ್ಗೆ ತಿಳಿಸಿಕೊಟ್ಟಿದ್ದು, ಈ ವೇಳೆ ಬೇರೇನೂ ವ್ಯವಹಾರ ಅಧಿಕಾರಿಗಳಿಗೆ ಕಂಡು ಬಂದಿಲ್ಲ ಸಾಯಿ ಪ್ರಸಾದ್​ ತಿಳಿಸಿದ್ದಾರೆ. ದೇಶದ ವಿಚಾರ ಬಂದಾಗ ಪಕ್ಷ ಜಾತಿ ಎಂಬುದು ಬರಲ್ಲ. ಈ ಪ್ರಕರಣದಿಂದ ಯುವಕರು ಎಚ್ಚರವಾಗಿರಬೇಕು. ಎಲ್ಲಿ ಬೇಕಲ್ಲಿ ದಾಖಲೆ ಪತ್ರಗಳು ಜೆರಾಕ್ಸ್, ಸ್ಕ್ಯಾನಿಂಗ್ ಮಾಡಿಸಬಾರದು. ಕುವೆಂಪು ಊರು, ನಾಡು ತೀರ್ಥಹಳ್ಳಿ ಎನ್ನುತ್ತಿದ್ದೆವು. ಈಗ ಉಗ್ರರ ನಾಡಾಗಿ ಪರಿವರ್ತನೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!