ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಚುನಾವಣಾ ದಿನಾಂಕ ಘೋಷಣೆ ಮುನ್ನವೇ ಜಿಲ್ಲೆಯಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿ ಶುರುವಾಗಿದ್ದು, ಕಾಂಗ್ರೆಸ್ ಹೈ ಕಮಾಂಡ್ ಗೆ ದೊಡ್ಡ ತಲೆ ನೋವು ತಂದೊಡ್ಡಿದೆ.
ವರದಿ - ಪುಟ್ಟರಾಜು.
ಚಾಮರಾಜನಗರ (ನ.4): ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಚುನಾವಣಾ ದಿನಾಂಕ ಘೋಷಣೆ ಮುನ್ನವೇ ಜಿಲ್ಲೆಯಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿ ಶುರುವಾಗಿದ್ದು, ಕಾಂಗ್ರೆಸ್ ಹೈ ಕಮಾಂಡ್ ಗೆ ದೊಡ್ಡ ತಲೆ ನೋವು ತಂದೊಡ್ಡಿದೆ.
undefined
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಇದೀಗ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಉಚಿತ ಖಚಿತ ಗ್ಯಾರಂಟಿ ಮೂಲಕ ಜನರ ಮನ ಗೆದ್ದ ಕೈ ಪಡೆ ಲೋಕಸಭಾ ಚುನಾವಣೆಯಲ್ಲೂ ಅಂತದೇ ಜನಪರ ಯೋಜನೆ ಘೊಷಣೆ ಮೂಲಕ ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನವನ್ನ ಗೆಲ್ಲುವ ಗುರಿ ಹೊಂದಿದೆ. ಆದ್ರೆ ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಿಸಿದ್ರು ಅನ್ನುವ ಹಾಗೆ ಕೈ ಪಾಳದಲ್ಲಿ ಈಗಲೇ ಟಿಕೆಟ್ ಗಾಗಿ ಭಾರಿ ಲಾಭಿ ಶುರುವಾಗಿದೆ.
ಸಿಎಂ ಮನೆಯಲ್ಲಿ ಬ್ರೇಕ್‌ಫಾಸ್ಟ್ ನಂತರ ಸೈಲೆಂಟಾದ ಕಾಂಗ್ರೆಸ್ ಸಚಿವ, ಶಾಸಕರು! ಸಚಿವ ಲಾಡ್ ಹೇಳಿದ್ದೇನು?
ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಸಚಿವ ಹೆಚ್.ಸಿ ಮಹದೇವಪ್ಪರ ಪುತ್ರ ಸುನೀಲ್ ಬೋಸ್ ಕಣ್ಣಿಟ್ಟಿದ್ರೆ, ಇತ್ತ ಕೈ ಪಾಳಯದ ಮಹಿಳಾ ಲೀಡರ್ ಪುಷ್ಪಾಅಮರನಾಥ್ ರೇಸ್ ನಲ್ಲಿದ್ದಾರೆ. ಕಳೆದ ಒಂದು ವಾರದ ಹಿಂದೆಯಷ್ಟೇ ಟಿ.ನರಸೀಪುರದಲ್ಲಿ ಭರ್ಜರಿ ಬಾಡೂಟ ಹಾಕಿಸುವ ಮೂಲಕ ನಾನು ಸಹ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗೆ ತಮ್ಮ ಆಸೆಯನ್ನ ವ್ಯಕ್ತ ಪಡಿಸಿದ್ದಾರೆ. ಇತ್ತ ಸ್ಥಳೀಯ ಕಾಂಗ್ರೆಸ್ ಮುಖಂಡರುಗಳಾದ, ನಂಜನಗೂಡು ಹಾಲಿ ಶಾಸಕ ದರ್ಶನ್ ಧ್ರುವ ನಾರಾಯಣ, ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ನಗರಸಭೆ ಅಧ್ಯಕ್ಷರಾದ ನಂಜುಂಡಸ್ವಾಮಿ ಪುತ್ರಿ ರೇಣುಕಾ ನಂಜುಂಡಸ್ವಾಮಿ ಹೀಗೆ ಲೋಕಸಭಾ ಟಿಕೆಟ್ ಆಕಾಂಕ್ಷಿ ಪಟ್ಟಿ ಬೆಳೆಯುತ್ತಲೇ ಇದೆ. ಈಗಿನಿಂದಲೇ ಪರಸ್ಪರ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಇನ್ನು ಸಚಿವ ಹೆಚ್.ಸಿ ಮಹದೇವಪ್ಪರ ಪುತ್ರ ಸುನೀಲ್ ಬೋಸ್ ಗೆ ಈ ಬಾರಿ ಚಾಮರಾಜನಗರ ಲೋಕಸಭಾ ಟಿಕೆಟ್ ಸಿಗಲಿದೆಯೆಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ. ಆದ್ರೆ ಸುನೀಲ್ ಬೋಸ್ ಗೆ ಟಿಕೆಟ್ ನೀಡಿದ್ರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಮತ ಹಾಕುವುದಿಲ್ಲವೆಂದು ಬಹಿರಂಗವಾಗೆ ಕೆಲ ದಲಿತ ಸಂಘಟನೆ ಹಾಗೂ ಮುಖಂಡರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಫೇಸ್ ಬುಕ್ ನಲ್ಲಿ ಸುನೀಲ್ ಬೋಸ್ ಗೆ ಟಿಕೆಟ್ ನೀಡದಂತೆ ಅಭಿಯಾನ ಶುರುವಾಗಿದೆ. ಒಂದು ವೇಳೆ ಸುನೀಲ್ ಬೋಸ್ ಗೆ ಟಿಕೆಟ್ ನೀಡಿದ್ರೆ ದಲಿತರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಮತ ಹಾಕುವುದಿಲ್ಲ ಎಂದು ಬಹಿರಂಗವಾಗೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಜೊತೆಗೆ ಸ್ಥಳೀಯರಿಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ.
ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ; ಸಹಕಾರಿ ಸಚಿವ ಕೆ.ಎನ್ ರಾಜಣ್ಣ
ಅದೇನೆ ಹೇಳಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಟಿಕೆಟ್ ಗಾಗಿ ಭಾರಿ ಪೈಪೋಟಿ ಶುರುವಾಗಿದ್ದು ಮುಂಬರುವ ದಿನಗಳಲ್ಲಿ ಕೈ ಪಾಳಯದಲ್ಲಿ ಆಂತರಿಕ ಭಿನ್ನಮತ ಸ್ಪೋಟಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಆಂತರಿಕ ಭಿನ್ನಮತವನ್ನ ಹೈ ಕಮಾಂಡ್ ಹೇಗೆ ಬಗೆಹರಿಸುತ್ತೆ ಎಂಬುದನ್ನ ಕಾದು ನೋಡ್ಬೇಕಿದೆ.