ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ವಿಷಯ ತಿಳಿದು ಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೊಂದೆಡೆ, ಇಬ್ಬರು ಪೊಲೀಸ್ ಪೇದೆಗಳು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು (ಎ.2): ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್ ಇನ್ಸ್ಪೆಕ್ಟರ್ ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಮನೆಗೆ ಲೋಕಾಯುಕ್ತ ದಾಳಿಯಾಗುತ್ತಿದೆ ಎಂಬ ವಿಚಾರ ತಿಳಿದ ತಕ್ಷಣ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಪರಾರಿಯಾಗಿದ್ದಾರೆ. ಸಿಎಂ ಮೆಡಲ್ ಗೆ ಆಯ್ಕೆಯಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಮನೆ ಮೇಲೆ ಲೋಕಾಯುಕ್ತ ಇಲಾಖೆ ದಾಳಿ ಮಾಡಲು ಹೋಗಿತ್ತು. ಈ ವಿಚಾರ ತಿಳಿದು ಮನೆಯಲ್ಲೇ ಇಲಾಖೆಯ ಜೀಪ್ ಬಿಟ್ಟು ಕುಮಾರ್ ಎಸ್ಕೇಪ್ ಆಗಿದ್ದಾರೆ.
ಅಕ್ರಮ ಗಣಿ ಕೇಸ್: ಎಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ, ಹೈಕೋರ್ಟ್ ಹೇಳಿದ್ದೇನು?
ಮತ್ತೊಂದಡೆ ನಾಗರಭಾವಿಯ ಖಾಸಗಿ ಹೊಟೇಲ್ ನಲ್ಲಿ ಡೀಲ್ ಮಾಡುವ ವೇಳೆ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಲೋಕಾ ದಾಳಿ ನಡೆದಿದೆ. ಹೆಡ್ ಕಾನ್ಸ್ ಸ್ಟೇಬಲ್ ಉಮೇಶ್ (SB), ಪೊಲೀಸ್ ಕಾನ್ ಸ್ಟೇಬಲ್ ಅನಂತ್ ಲೋಕಾ ಬಲೆಗೆ ಬಿದ್ದಿದ್ದಾರೆ. ಹೀಗಾಗಿ ಠಾಣೆಯ ಸಿಬ್ಬಂದಿಗಳ ಜೊತೆಗೆ ಸಿಕ್ಕಿಬಿದ್ದ ಸಿಬ್ಬಂದಿಗಳ ವಿಚಾರಣೆ ಕೂಡ ನಡೆಯುತ್ತಿದೆ. ಸಂಜೆ 5 ಘಂಟೆಯಿಂದ ಬೆಳಗಿನ ಜಾವದ ವರೆಗೆ ನಡೆದ ವಿಚಾರಣೆ ನಡೆದಿದೆ.
ಕಲಬುರಗಿ: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಾಹಿತಿ ಆಯುಕ್ತ! ಏನಿದು ಪ್ರಕರಣ?
ಘಟನೆ ಏನು?
ಗುತ್ತಿಗೆದಾರ ಚೆನ್ನೇಗೌಡ ಹಾಗೂ ಕುಟುಂಬಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಕಿರುಕುಳ ನೀಡಿರುವ ಆರೋಪವಿದೆ. ಸುಳ್ಳು ಕೇಸ್ ಹಾಕಿ ಚನ್ನೇಗೌಡರ ನಾಲ್ಕು ಕೋಟಿ ಮೌಲ್ಯದ ಮನೆಯನ್ನ ಹೇಳಿದವ್ರಿಗೆ ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಇನ್ಸ್ಪೆಕ್ಟರ್ ಕಿರುಕುಳ ಕೊಟ್ಟಿದ್ದಾರೆಂಬುದು ಆರೋಪ. ಚೆನ್ನೇಗೌಡ ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದು, ಇವ್ರಿಗೂ ಕೂಡ ಇನ್ಸ್ಪೆಕ್ಟರ್ ಕುಮಾರ್ ಕಿರುಕುಳ ಕೊಟ್ಟಿದ್ದಾರೆನ್ನಲಾಗಿದೆ. ಮನೆಯನ್ನು ಬರೆದುಕೊಡಿ ಇಲ್ಲವಾದರೆ ಈ ಹಿಂದೆ ದಾಖಲಾಗಿದ್ದ ಕೇಸ್ ಒಂದಕ್ಕೆ ಬಿ ರಿಪೋರ್ಟ್ ಹಾಕ್ತಿನಿ ಎಂದು ಕಿರುಕುಳ ನೀಡಿದ್ದಾರೆನ್ನಲಾಗಿದೆ. ಮಾತ್ರವಲ್ಲ ಚೆನ್ನೇಗೌಡ ಮನೆಗೆ ಕೆಲ ಪುಂಡರನ್ನು ನುಗ್ಗಿಸಿ ದಾಂಧಲೆ ನಡೆಸಿದ್ದು, ಈ ವೇಳೆ ಚನ್ನೇಗೌಡ ಇದನ್ನು ವೀಡಿಯೋವನ್ನ ಮಾಡಿಕೊಂಡಿದ್ದಾರೆ.