ಬೆಳಗಾವಿಯಲ್ಲಿ KSRTC ಡ್ರೈವರ್ ಬೆನ್ನು ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಜೆ ನಿರಾಕರಿಸಿದ್ದಕ್ಕೆ ಮತ್ತು ಅಕ್ಕನ ಮಗನ ಮದುವೆಗೆ ರಜೆ ಸಿಗದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ (ಏ.2): ಒಂದೆಡೆ ರಾಜ್ಯ ಸರ್ಕಾರ ಮಧ್ಯಮವರ್ಗದವರ ಮೇಲೆ ದಿನಕ್ಕೊಂದರಂತೆ ಬೆಲೆ ಏರಿಕೆ ಭಾರ ಹಾಕುತ್ತಿದ್ದರೆ, ಇನ್ನು ಆತ ಮಾಡುವ ಕೆಲಸ ಸ್ಥಳದಲ್ಲೂ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡುತ್ತಿಲ್ಲ. ಕತ್ತೆ ರೀತಿಯಲ್ಲಿ ದುಡಿಸಿಕೊಳ್ಳುವಲ್ಲಿ ಹೆಸರುವಾಸಿಯಾಗಿರುವ ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಮಿಕ ನ್ಯಾಯಗಳಿಗೆ ಬೆಲೆಯೇ ಇಲ್ಲದಂತಾಗಿದೆ. ವಿಪರೀತ ಬೆನ್ನು ನೋವಿನ ಸಮಸ್ಯೆಯಿಂದಾಗಿ ಬಸ್‌ನಲ್ಲಿ ಡ್ರೈವರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದು ಒಂದು ತಿಂಗಳ ಅವಧಿಯಲ್ಲಿ ಬೆಳಗಾವಿಯಲ್ಲೇ ನಡೆದ 2ನೇ ಘಟನೆಯಾಗಿದೆ.
ಬೆಳಗಾವಿ ಎರಡನೇ ಸಾರಿಗೆ ಘಟಕದಲ್ಲಿ ಬುಧವಾರ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ 45 ವರ್ಷದ ಬಾಲಚಂದ್ರ ಎಸ್ ತುಕೋಜಿ ಮೃತ ದುರ್ದೈವಿ. ಕಳೆದ ಹಲವಾರು ದಿನಗಳಿಂದ ತೀವ್ರ ಬೆನ್ನು ನೋವಿನಿಂದ ಬಾಲಚಂದ್ರ ಬಳಲುತ್ತಿದ್ದರು.
ಆರಂಭದಲ್ಲಿ ಬೆನ್ನು ನೋವಿನ ಬಾಧೆಯಿಂದಾಗಿ ಆತ್ಯಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಪತಿ ಸಾವಿನ ಶರಣಾಗಿದ್ದಕ್ಕೆ ಡಿಪೋದಲ್ಲೇ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದಾರೆ.
ಬೆನ್ನು ನೋವಿನ ಚಿಕಿತ್ಸೆಗೆ ಡ್ರೈವರ್ ಬಾಲಚಂದ್ರ 15 ದಿನ ರಜೆ ಕೇಳಿದ್ದರು. ರಜೆ ಮಂಜೂರು ಮಾಡದೇ ಇರುವುದಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಒಂದು ತಿಂಗಳ ಹಿಂದೆ ಇದೇ ಬೆಳಗಾವಿಯಲ್ಲಿ ಡ್ಯೂಟಿ ಬದಲಿಸಲಿಲ್ಲ ಎಂದು ಬೇಸರಗೊಂಡು ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ. ಡಿಪೋ 1ರಲ್ಲಿ ಈ ಘಟನೆ ನಡೆದಿತ್ತು. ಮೃತ ನೌಕರನನ್ನು ಕೇಶವ ಕಮಡೊಳಿ (57) ಎಂದು ಗುರುತಿಸಲಾಗಿತ್ತು. ಬಸ್‌ಗಳ ಪಂಚರ್ ತೆಗೆಯುವ ಕೆಲಸ ಮಾಡುತ್ತಿದ್ದರು. ಬೆನ್ನು ನೋವಿದ್ದರೂ ಪಂಚರ್ ತೆಗೆಯುವ ಕೆಲಸವನ್ನು ಅಧಿಕಾರಿಗಳು ಕೊಟ್ಟಿದ್ದರು, ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಕೇಶವ ಆತ್ಮಹತ್ಯೆ ಮಾಡಿಕೊಂಡಿದ್ದ.
ಇನ್ನೊಂದೆಡೆ ಬಾಲಚಂದ್ರ ಅಕ್ಕನ ಮಗನ ವಿವಾಹ ನಾಳೆ ನಡೆಯಬೇಕಿತ್ತು. ಅದಕ್ಕೂ ಸಾರಿಗೆ ಇಲಾಖೆ ಸಿಬ್ಬಂದಿ ರಜೆ ನೀಡಿರಲಿಲ್ಲ. ಇದಕ್ಕೆ ನೊಂದು ಬಾಲಚಂದ್ರ ಬಸ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪತಿ ಸಾವಿನ ಸುದ್ದಿ ಕೇಳಿ ಬಾಲಚಂದ್ರ ಪತ್ನಿ ಶಿಲ್ಪಾ ತೀವ್ರ ಅಸ್ವಸ್ಥರಾಗಿದ್ದಾರೆ. ಸಾರಿಗೆ ಇಲಾಖೆ ವಾಹನದಲ್ಲೇ ಶಿಲ್ಪಾ ಆಸ್ಪತ್ರೆಗೆ ದಾಖಲಾಗಿದೆ. ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಶಿಲ್ಪಾರನ್ನು ಕರೆದೊಯ್ಯಲಾಗಿದೆ. ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಶಿಲ್ಪಾ ತುಕೋಜಿ, ಪತಿ ಸಾವಿನ ಸುದ್ದಿ ಕೇಳಿ ತೀವ್ರ ಅಸ್ವಸ್ಥರಾಗಿದ್ದರು.
ಪಿಎಫ್, ಇಂಧನ ಖರೀದಿ ಬಾಕಿ ತೀರಿಸಲು 624 ಕೋಟಿ ಬ್ಯಾಂಕ್ ಸಾಲಕ್ಕೆ ಮುಂದಾದ KSRTC!
ಆತ್ಮಹತ್ಯೆ ಮಾಡಿಕೊಂಡಿದ್ದ ಮೆಕಾನಿಕ್: ಒಂದು ತಿಂಗಳ ಹಿಂದೆ ಇದೇ ಬೆಳಗಾವಿಯಲ್ಲಿ ಡ್ಯೂಟಿ ಬದಲಿಸಲಿಲ್ಲ ಎಂದು ಬೇಸರಗೊಂಡು ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ. ಡಿಪೋ 1ರಲ್ಲಿ ಈ ಘಟನೆ ನಡೆದಿತ್ತು. ಮೃತ ನೌಕರನನ್ನು ಕೇಶವ ಕಮಡೊಳಿ (57) ಎಂದು ಗುರುತಿಸಲಾಗಿತ್ತು. ಬಸ್‌ಗಳ ಪಂಚರ್ ತೆಗೆಯುವ ಕೆಲಸ ಮಾಡುತ್ತಿದ್ದರು. ಬೆನ್ನು ನೋವಿದ್ದರೂ ಪಂಚರ್ ತೆಗೆಯುವ ಕೆಲಸವನ್ನು ಅಧಿಕಾರಿಗಳು ಕೊಟ್ಟಿದ್ದರು, ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಕೇಶವ ಆತ್ಮಹತ್ಯೆ ಮಾಡಿಕೊಂಡಿದ್ದ.
'ಚಕ್ಕಡಿ ಗಾಡಿ ಪಕ್ಕಕ್ಕೆ ಸರಿಸುವಂತೆ ಹಾರ್ನ್ ಮಾಡಿದ್ದಕ್ಕೆ KSRTC ಬಸ್ ಚಾಲಕನ ಮೇಲೆ ಹಲ್ಲೆ!