ಬಸವ ವಸತಿ ಯೋಜನೆಯ ಹಣ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ: ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಲೋಕಾಬಲೆಗೆ

Published : Apr 22, 2026, 06:16 PM IST
Lokayukta raid

ಸಾರಾಂಶ

ಕಲಬುರಗಿಯ ಯಡ್ರಾಮಿ ತಾಲೂಕಿನಲ್ಲಿ ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡಲು ₹20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಫಲಾನುಭವಿಯೊಬ್ಬರ ದೂರಿನ ಮೇರೆಗೆ ಈ ದಾಳಿ ನಡೆದಿದೆ. 

ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಲೋಕಾ ಬಲೆಗೆ ಬಿದ್ದಿದ್ದಾರೆ. ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡುವುದಕ್ಕೆ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತ್ ಕಂಪ್ಯೂಟರ್ ಆಪರೇಟರ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಬಂದೇನವಾಜ್ ಲೋಕಾ ಬಲೆಗೆ ಬಿದ್ದವ.

ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಲೋಕಾಬಲೆಗೆ

ಕಂಪ್ಯೂಟರ್ ಆಪರೇಟರ್ ಬಂದೇನವಾಜ್ ಮಲ್ಲಿಕಾರ್ಜುನ ಮಳ್ಳಿ ಎನ್ನುವ ಫಲಾನುಭವಿ ಬಳಿ ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಡಿದ್ದ. ಮುಂಗಡವಾಗಿ 5 ಸಾವಿರ ರೂ. ನಗದು ಹಾಗೂ 3 ಸಾವಿರ ರೂಪಾಯಿ ಫೋನ್ ಪೇ ಮೂಲಕ ಲಂಚ ಪಡೆದಿದ್ದ. ಈ ಸಂಬಂಧ ಮಲ್ಲಿಕಾರ್ಜುನ ಮಳ್ಳಿ ಲೋಕಾಯುಕ್ತಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಂಪ್ಯೂಟರ್ ಆಪರೇಟರ್ ಬಂದೇನವಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಲೋಕಾಯುಕ್ತ ಎಸ್ ಪಿ ಸಿದ್ದರಾಜು ಸಿ ಮಾರ್ಗದರ್ಶನದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ಲೈಂ*ಗಿಕ ದೌರ್ಜನ್ಯವೆಸಗಿ ಐಆರ್‌ಎಸ್ ಅಧಿಕಾರಿಯ 22ರ ಹರೆಯದ ಪುತ್ರಿಯ ಭೀಕರ ಹತ್ಯೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರ : ಉಳ್ಳಾಲಕ್ಕೆ ಹಿಂಸಾತ್ಮಕವಾಗಿ ಒಂಟೆಗಳ ಸಾಗಿಸುತ್ತಿದ್ದ ಮೂವರ ಬಂಧನ: 8 ಒಂಟೆಗಳ ರಕ್ಷಣೆ
ಇಡಿ ದಾಳಿ ಮೂಲಕ ಕಾಂಗ್ರೆಸ್‌ ಟಾರ್ಗೆಟ್‌, ಬಿಜೆಪಿಯವರ ಮೇಲೆ ದಾಳಿ ಆಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ ಆರೋಪ