ಧಾರವಾಡ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ದೂರು ಸ್ವೀಕರಿಸಲು ತೆರಳುವ ಲೋಕಾಯುಕ್ತ ಅಧಿಕಾರಿಗಳ ವಿನೂತನ ಯೋಜನೆ ನ.14ರಿಂದ ಜಾರಿ.
ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ನ.12): ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದಾಗಿನಿಂದಲೂ ಧಾರವಾಡ ಜಿಲ್ಲೆಯಲ್ಲಿ ಲೋಕಾಯುಕ್ತ ಇಲಾಖೆ ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ಧಾರವಾಡ ಲೋಕಾಯುಕ್ತ ಅಧಿಕಾರಿಗಳು ವಿನೂತನ ಯೋಜನೆ ಮಾಡುತ್ತಿದ್ದು, ಸಾರ್ವಜನಿಕರಿಂದ ದೂರು ಸ್ವೀಕರಿಸಲು ತಾಲೂಕಿಗೆ ಹೋಗುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಯಾವ ತಾಲೂಕಿನಲ್ಲಿ ಯಾವ ದಿನಾಂಕಕ್ಕೆ ಬರ್ತಾರೆ ಎಂಬುದರ ಬಗ್ಗೆ ಎಲ್ಲ ಮಾಹಿತಿಯನ್ನು ಲೋಕಾಯುಕ್ತ ಅಧಿಕಾರಿಗಳು ನೀಡಿದ್ದಾರೆ.
undefined
ಸಾರ್ವಜನಿಕರು ಲೋಕಾಯುಕ್ತಕ್ಕೆ (Lokayukta) ದೂರು (Complaint) ಕೊಡಬೇಕಾದರೆ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ನಡುವಿರುವ ಅನೇಕ ಅಧಿಕಾರಿಗಳು (Officers) ಕೆಲಸ ಮಾಡಿಕೊಡಲು ಹಣ ಕೇಳುವುದು ಮತ್ತು ಹಲವು ಹಗರಣ ಮಾಡುತ್ತಾ ಆಸ್ತಿ (Property)ಗಳಿಸುತ್ತಿದ್ದರೂ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲು ಜಿಲ್ಲಾ (District) ಕೇಂದ್ರಕ್ಕೆ ಹೋಗಬೇಕು ಎಂದು ಹಿಂಜರಿಯುವವರ ಸಂಖ್ಯೆಯೇ ಅಧಿಕವಾಗಿದೆ. ಆದರೆ, ಈಗ ನೇರವಾಗಿ ಲೋಕಾಯುಕ್ತ ಅಧಿಕಾರಿಗಳು ನಿಮ್ಮ ತಾಲೂಕಿಗೆ (Talluk) ಆಗಮಿಸುತ್ತಿದ್ದಾರೆ. ಧಾರವಾಡ (Dharwad) ಕಛೇರಿಯ ಪೋಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಗೆ ನ.14 ರಿಂದ 21 ರವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದೂರು ಮತ್ತು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
21 ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾ ಶಾಕ್: ಏಕಕಾಲದಲ್ಲಿ 50 ಅಧಿಕಾರಿಗಳ ದಾಳಿ
ನಿಮ್ಮ ತಾಲೂಕಿಗೆ ಯಾವಾಗ ಬರುತ್ತಾರೆ?
ನ.14 ರಂದು ನವಲಗುಂದ ತಾಲೂಕ ಪಂಚಾಯತಿ (Talluk Panchayath)ಕಾರ್ಯಾಲಯ ಸಭಾಭವನದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸುತ್ತಾರೆ. ನ.16 ರಂದು ಅಣ್ಣಿಗೇರಿ (Annigeri) ಪುರಸಭೆ ಕಾರ್ಯಾಲಯ ಸಭಾಭವನ, ನ.17 ರಂದು ಧಾರವಾಡ ತಾಲೂಕ ಪಂಚಾಯತಿ ಕಾರ್ಯಾಲಯ ಸಭಾಭವನ, ನ.18 ರಂದು ಕಲಘಟಗಿ (Kalaghatagi)ತಹಶೀಲ್ದಾರ ಕಾರ್ಯಾಲಯ ಮತ್ತು ಹುಬ್ಬಳ್ಳಿ ಮಿನಿ ವಿಧಾನಸೌಧ ತಾಲೂಕ ಪಂಚಾಯತಿ ಕಾರ್ಯಾಲಯ ಸಭಾಭವನ, ನ.19 ರಂದು ಕುಂದಗೋಳ (Kundagol) ತಹಶೀಲ್ದಾರ ಕಾರ್ಯಾಲಯ, ನ.21 ರಂದು ಅಳ್ನಾವರ ಪಟ್ಟಣ ಪಂಚಾಯತಿ ಕಾರ್ಯಾಲಯ ಸಭಾಭವನದಲ್ಲಿ ಸಾರ್ವಜನಿಕರಿಂದ ದೂರು, ಅಹವಾಲು ಸ್ವೀಕಾರ ಮಾಡಲಿದ್ದಾರೆ.
ಬೆಳಗ್ಗೆಯಿಂದ ದೂರು ಸ್ವೀಕಾರ:
ಅಹವಾಲು ಸ್ವೀಕಾರ ದಿನಗಳಂದು ಗೊತ್ತುಪಡಿಸಿರುವ ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸ್ (Police) ಅಧಿಕಾರಿಗಳು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಂದ ಆಹವಾಲು (Report) ಸ್ವಿಕಸುತ್ತಾರೆ. ಈ ವೇಳೆ ಜನರು ತಮ್ಮ ದೂರುಗಳನ್ನು (Complaints) ನೇರವಾಗಿ ಲೋಕಾಯುಕ್ತ ಸಲ್ಲಿಕೆ ಮಾಡಬಹುದು. ಯಾವುದೇ ಸರ್ಕಾರಿ ಅಧಿಕಾರಿ ಅಥವಾ ನೌಕರರು ಸರ್ಕಾರಿ ಸೇವೆ ಒದಗಿಸುವಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ದೂರು ನೀಡಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೋಲಿಸ್ ಅಧೀಕ್ಷಕರು ಜನರಿಗೆ ಮಾಹಿತಿ ನೀಡಿದರು.
ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸಪ್ಪ
ಲೋಕಾಯುಕ್ತಕ್ಕೆ ಮರುಜೀವ:
ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದಾಗಿನಿಂದಲೂ ಲೋಕಾಯುಕ್ತಕ್ಕೆ ಮರುಜೀವ ಬಂದಂತಾಗಿದೆ. ಲೋಕಾಯುಕ್ತ ಅಧಿಕಾರಿಗಳು ಚುರುಕಾಗಿ (Active) ಕೆಲಸವನ್ನ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ನೇರವಾಗಿ ಭೇಟಿ ನೀಡಿ (Direct Visit) ಜನರಿಂದ ಸಮಸ್ಯಗಳ ಬಗ್ಗೆ ದೂರುಗಳ ಬಗ್ಗೆ ಮಾಹಿತಿ (Information) ಪಡೆದುಕ್ಕೊಳ್ಳಲಿದ್ದಾರೆ. ನಂತರ ಧಾರವಾಡ ಜಿಲ್ಲೆಯಲ್ಲಿ ಎಷ್ಟು ದೂರುಗಳು ದಾಖಲಾಗುತ್ತಿವೆ ಎಂಬ ಮಾಹಿತಿಯನ್ನ ಬಹಿರಂಗ ಮಾಡಲಾಗುತ್ತದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.