ಮಹಿಳೆಯರಿಗಾಗಿ ನೀಡಿದ ಗ್ಯಾರಂಟಿ ಯೋಜನೆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ಧಾಯ್ತು. ಇದೀಗ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರೋ ರಾಜ್ಯ ಕಾಂಗ್ರೆಸ್ ಘಟಕ ಇದೀಗ ಮತ್ತದೆ ಮಹಿಳಾ ಮತದಾರರನ್ನು ಸೆಳೆಯಲು ವಿವಿಧ ಕಸರತ್ತು ನಡೆಸಿದೆ. ನಟ ಶಿವರಾಜ ಕುಮಾರ ಪತ್ನಿ ಗೀತಾ ಶಿವರಾಜ ಕುಮಾರ ಮೂಲಕ ರಾಜ್ಯಾದ್ಯಂತ ನಾರೀಶಕ್ತಿ ಹೆಸರಲ್ಲಿ ಬೃಹತ್ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದೆ.
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಅ.10) : ಮಹಿಳೆಯರಿಗಾಗಿ ನೀಡಿದ ಗ್ಯಾರಂಟಿ ಯೋಜನೆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ಧಾಯ್ತು. ಇದೀಗ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರೋ ರಾಜ್ಯ ಕಾಂಗ್ರೆಸ್ ಘಟಕ ಇದೀಗ ಮತ್ತದೆ ಮಹಿಳಾ ಮತದಾರರನ್ನು ಸೆಳೆಯಲು ವಿವಿಧ ಕಸರತ್ತು ನಡೆಸಿದೆ. ನಟ ಶಿವರಾಜ ಕುಮಾರ ಪತ್ನಿ ಗೀತಾ ಶಿವರಾಜ ಕುಮಾರ ಮೂಲಕ ರಾಜ್ಯಾದ್ಯಂತ ನಾರೀಶಕ್ತಿ ಹೆಸರಲ್ಲಿ ಬೃಹತ್ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದೆ. ಬಳ್ಳಾರಿಯಿಂದಲೇ ಈ ಕಾರ್ಯಕ್ರಮಕ್ಕೆ ಭರ್ಜರಿ ಚಾಲನೆ ನೀಡಲಾಗಿದ್ದು, ರಾಜ್ಯ ಸರ್ಕಾರ ಮಹಿಳೆಯರಿಗಾಗಿ ನೀಡಿದ ಯೋಜನೆ ಬಗ್ಗೆ ಮಾಹಿತಿ ನೀಡ್ತಿದೆ.
undefined
ಲೋಕಸಭೆ ಚುನಾವಣೆ ಹಿನ್ನೆಲೆ ಮತ್ತೊಂದು ಮೆಗಾ ಪ್ಲಾನ್ ಮಾಡಿದ ಕಾಂಗ್ರೆಸ್
ನಾರೀಯರ ಶಕ್ತಿಯಿಂದಲೇ ಅಧಿಕಾರಕ್ಕೆ ಬಂದಿರೋದಾಗಿ ಹೇಳಿರೋ ಕಾಂಗ್ರೆಸ್ ನಿಂದ ಮಹಿಳೆಯರಿಗಾಗಿ ವಿಶೇಷ ಯೋಜನೆಗಳು. ವಿಧಾನ ಸಭೆ ಆಯ್ತು. ಇದೀಗ ಲೋಕಸಭೆಯಲ್ಲಿ ಬೇಕಿದೆಯಂತೆ ಮಹಿಳೆಯರ ಬೆಂಬಲ. ಹೌದು, ಮಹಿಳೆಯರಿಗಾಗಿ ನೀಡಿದ ಉಚಿತ ಬಸ್ ನ ಶಕ್ತಿ ಯೋಜನೆ(Shakti scheme), ಎರಡು ಸಾವಿರ ಗ್ಯಾರಂಟಿ, ಉಚಿತ ಕರೆಂಟ್ ಬಿಲ್ ನ ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಸೇರಿದಂತೆ ಮಹಿಳಾ ಪರ ಗ್ಯಾರಂಟಿಗಳ ಘೋಷಣೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು . ಇದೀಗ ಅದೇ ಪ್ಲಾನ್ ಮುಂದುವರೆಸಿದ್ದು, ನಟ ಶಿವರಾಜ ಕುಮಾರ ಪತ್ನಿ ಗೀತಾ ಶಿವರಾಜ ಕುಮಾರ(Geeta shivaraj kumar) ಮುಂದಾಳಾತ್ವದಲ್ಲಿ ನಾರೀಶಕ್ತಿ ಎನ್ನು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಹಿಳಾ ಮತದಾರರ ಸೆಳೆಯಲು ಕಸರತ್ತು ನಡೆಸುತ್ತಿದೆ.
ಹಮಾಸ್ ಉಗ್ರರ ವಿರುದ್ದ ಇಸ್ರೇಲ್ ಪ್ರತಿದಾಳಿಗೆ ಕೆರಳಿದ ಕಾಂಗ್ರೆಸ್, ಪ್ಯಾಲೆಸ್ತಿನ್‌ಗೆ ಬೆಂಬಲ ಘೋಷಣೆ!
ನಾರೀಶಕ್ತಿಯ ಹೆಸರಲ್ಲಿ ಬಳ್ಳಾರಿಯಲ್ಲಿ ಚಾಲನೆ ನೀಡಲಾದ ಈ ಕಾರ್ಯಕ್ರಮ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕಿನಲ್ಲಿ ಮಾಡಲು ಪ್ಲಾನ್ ಮಾಡಲಾಗಿದೆ. ನಾರೀಶಕ್ತಿಯ ರಾಯಭಾರಿಯಂತೆ ಗೀತಾ ಅವರನ್ನು ಬಳಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿದ ಎಲ್ಲ ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ ಹೇಳುವ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಕಾರ್ಯಕ್ರಮದ ಉದ್ದಕ್ಕೂ ಗೀತಾ ಶಿವರಾಜಕುಮಾರ ಸರ್ಕಾರದ ಯೋಜನೆ ವಿವರಣೆ ನೀಡಿದ್ರು..
ಇನ್ನೂ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಸರ್ಕಾರ ನೀಡಿದ ಯೋಜನೆ ಬಗ್ಗೆ ವಿವರಣೆ ನೀಡಿದ ಸಚಿವ ನಾಗೇಂದ್ರ ಮತ್ತು ಶಾಸಕ ಭರತ್ ರೆಡ್ಡಿ .ಇವತ್ತು ನಾವು ಗೆದ್ದಿರೋದು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದಕ್ಕೆ ನಾರೀಯರ ಶಕ್ತಿಯೇ ಕಾರಣ ಎಂದು ಮಹಿಳೆಯರ ಗುಣಗಾನ ಮಾಡಿದ್ರು. ಅಲ್ಲದೇ ಈ ಬಾರಿ ಗೀತಾ ಶಿವರಾಜ ಕುಮಾರ ಅವರು ಲೋಕಸಭೆಯಿಂದ ಕಣಕ್ಕಿಳಿಯೋದಾಗಿ ಹೇಳಿದ್ರು. ಶಿವಮೊಗ್ಗ ಮಾತ್ರವಲ್ಲದೇ ಗೀತಾರವರು ರಾಜ್ಯದ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು. 4ರಿಂದ 5 ಲಕ್ಷ ಅಂತರದಲ್ಲಿ ಗೆಲ್ತಾರೆ. ಇಂತಹವರು ಲೋಕಸಭೆ ಯಲ್ಲಿದ್ರೇ ಮಹಿಳೆಯರಿಗೊಂದು ಗೌರವ ಎಂದ್ರು. ಕಾರ್ಯಕ್ರಮದ ಬಳಿಕ ಗೀತಾ ಶಿವರಾಜ ಕುಮಾರ ಸೇರಿದಂತೆ ಸಚಿವ ನಾಗೇಂದ್ರ ಮತ್ತು ಶಾಸಕ ಭರತ ರೆಡ್ಡಿ ಬಸ್ನಲ್ಲಿ ಪ್ರಯಾಣ ಮಾಡಿದ್ರು.
2009ರಲ್ಲಿ ಜಾತಿ ಕೇಳಲ್ಲ, 2023ರಲ್ಲಿ ಎಲ್ಲರ ಜಾತಿ ಗೊತ್ತಾಗಬೇಕು;ರಾಹುಲ್ ಯೂಟರ್ನ್ ವಿಡಿಯೋ ವೈರಲ್!
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ನಾರೀಶಕ್ತಿ ಕಾರ್ಯಕ್ರಮ
ಮಹಿಳಾಮಣಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು 33ಪರ್ಸೆಂಟ್ ಮೀಸಲಾತಿ ನೀಡಿರೋದು, ಎಲ್ಲಾ ಪಕ್ಷಗಳು ಮಹಿಳೆಯರ ಪರ ಒಲವು ತೋರಿಸುತ್ತಿರೋದು ವಿಶೇಷವಾಗಿದೆ. ಅಲ್ಲದೇ ಈಗಾಗಲೇ ಮಹಿಳಾ ಪರ ನೀಡಿದ ಗ್ಯಾರಂಟಿ ಇಂಪ್ಯಾಕ್ಟ್ ನೋಡಿರೋ ಕಾಂಗ್ರೆಸ್ ಇದೀಗ ಮತ್ತೊಮ್ಮೆ ಮಹಿಳೆಯ ಮೊರೆ ಹೋಗಿದ್ದು, ಲೋಕಸಭೆಯಲ್ಲಿ ಹೆಚ್ಚು ಹೆಚ್ಚು ಸ್ಥಾನ ಪಡೆಯೋ ನಿರೀಕ್ಷೆ ಇಟ್ಟುಕೊಂಡಿದೆ. ಆದ್ರೇ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗ್ತದೆ ಅನ್ನೋದನ್ನು ಕಾದು ನೋಡಬೇಕಿದೆ.