ಇಸ್ರೇಲ್ ಹಮಾಸ್ ಯುದ್ಧ: 100 ಹೈಬ್ರಿಡ್ ಹಸುಗಳ ಆಮದು ಸ್ಥಗಿತ

Published : Oct 10, 2023, 08:55 PM ISTUpdated : Oct 10, 2023, 08:56 PM IST
ಇಸ್ರೇಲ್ ಹಮಾಸ್ ಯುದ್ಧ: 100 ಹೈಬ್ರಿಡ್ ಹಸುಗಳ ಆಮದು ಸ್ಥಗಿತ

ಸಾರಾಂಶ

ತುಮಕೂರು ಮೂಲದ ಅಶೋಕ್ ಹಾಸನದ ಹೊಳೆನರಸೀಪುರದಲ್ಲಿ ತಮ್ಮ ಅಗ್ರಿಕಲ್ಚರ್ ಸ್ಟಾರ್ಟಪ್ ಮೂಲಕ ರೈತರಿಗೆ ಇಸ್ರೇಲ್ ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಿ ರಾಜ್ಯದ ವಿವಿಧ ಭಾಗದ ರೈತರಿಗೆ ಇಸ್ರೇಲ್ ಹಸುಗಳನ್ನು ಕೊಡಿಸುವ ಪ್ರಯತ್ನ ನಡೆಸಿದ್ದರು ಆದರೆ ಹಮಾಸ್ ಇಸ್ರೇಲ್ ಯುದ್ಧದಿಂದಾಗಿ ಹೈಬ್ರಿಡ್ ಹಸುಗಳ ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಸ್ಥಗಿತಗೊಂಡಿದೆ.

ತುಮಕೂರು (ಅ.10) :  ಹಮಾಸ್ ಉಗ್ರರ ವಿರುದ್ಧ ದೂರದ  ಇಸ್ರೇಲ್‌ನಲ್ಲಿ ನಡೆಯುತ್ತಿರುವ ಯುದ್ಧ ಕರ್ನಾಟಕದ ಮೇಲೆ ನೇರ ಪರಿಣಾಮ ಬೀರಿದೆ.‌ 

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ವಿಚಾರದಲ್ಲಿ ತನ್ನದೇ ಛಾಪು ಮೂಡಿಸಿರುವ ಇಸ್ರೇಲ್, ಜಗತಿನ ಹಲವು ಕೃಷಿಕರನ್ನು ತನ್ನತ್ತ ಸೆಳೆದುಕೊಂಡಿದೆ.‌ ಇಸ್ರೇಲ್ ತಂತ್ರಜ್ಞಾನವನ್ನು ನಮ್ಮ ಕರ್ನಾಟಕಕ್ಕೆ ತಂದು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಪ್ರಗತಿ ಪರ ರೈತ ಅಶೋಕ್ ಮುಂದಾಗಿದ್ದರು. ಈ ಸಂಬಂದ ಈಗಾಗ್ಲೇ ಎರಡು ಬಾರಿ ಇಸ್ರೇಲ್‌ಗೆ ಭೇಟಿ ನೀಡಿರುವ ಅಶೋಕ್ ಅಲ್ಲಿ ಕೃಷ್ಣ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿದ್ದರು. ಈ ಭಾರಿ 100 ಹೈ ಬ್ರಿಡ್ ಇಸ್ರೇಲ್ ಹಸುಗಳನ್ನು ಆಮದು ಮಾಡಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದರು. ಇದೇ ತಿಂಗಳ 29ರೊಂದು ರಾಜ್ಯದ 30 ಜ‌ನ ರೈತರ ತಂಡದೊಂದಿಗೆ ಇಸ್ರೇಲ್ ಗೆ ಪ್ರಯಣಿಸಿ ಅಲ್ಲಿ ನೇರವಾಗಿ ಹಸುಗಳ ಹಸುಗಳನ್ನು ಖರೀದಿಸಿ, ರಾಜ್ಯಕ್ಕೆ ತರಲಾಗುತ್ತಿತ್ತು.‌ ಈ ಸಂಬಂಧ  ಭಾರತ ಹಾಗೂ  ಇಸ್ರೇಲ್ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ  ರೈತರು ಸಂಪರ್ಕದಲ್ಲಿದ್ದರು, ಇದೀಗ ದಿಢೀರನೇ ಯುದ್ಧ  ಪ್ರಾರಂಭವಾದ ಪರಿಣಾಮ 100 ಹಸುಗಳ ಆಮದು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. 

ಇಸ್ರೇಲ್ ಪ್ರತಿದಾಳಿಗೆ ಬೆಚ್ಚಿದ ಉಗ್ರರು, ಹಮಾಸ್ ಆರ್ಥಿಕ ಸಚಿವ ಏರ್‌ಸ್ಟ್ರೈಕ್‌ನಲ್ಲಿ ಹತ!

ತುಮಕೂರು ಮೂಲದ ಅಶೋಕ್ ಹಾಸನದ ಹೊಳೆನರಸೀಪುರದಲ್ಲಿ ತಮ್ಮ ಅಗ್ರಿಕಲ್ಚರ್ ಸ್ಟಾರ್ಟಪ್ ಮೂಲಕ ರೈತರಿಗೆ ಇಸ್ರೇಲ್ ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಿ ರಾಜ್ಯದ ವಿವಿಧ ಭಾಗದ ರೈತರಿಗೆ ಇಸ್ರೇಲ್ ಹಸುಗಳನ್ನು ಕೊಡಿಸುವ ಪ್ರಯತ್ನ ನಡೆಸಿದ್ದರು. ಒಂದು ವರ್ಷದಿಂದ ಇಸ್ರೇಲ್ ನೊಂದಿಗೆ ಸಂಪರ್ಕದಲ್ಲಿದ್ದರು, ಕಳೆದ ಶುಕ್ರವಾರದಷ್ಟೇ ಇಸ್ರೇಲ್ ರಾಯಭಾರಿ ಕಚೇರಿಯೊಂದಿಗೆ ಮಾತುಕತೆ ನಡೆಸಿದ್ದರು, ಯುದ್ಧ ನಡೆಯದಿದ್ದರೆ, ಹಸುಗಳನ್ನು ಆಮದು ಪ್ರಕ್ರಿಯೆ ಮುಂದುವರೆಯುತ್ತಿತ್ತು. ಆದರೆ ಹಮಾಸ ಉಗ್ರರು ರಾಕೆಟ್ ದಾಳಿ ನಡೆಸಿ ಅಪಾರ ಸಾವು ನೋವುಗಳುಂಟಾಗಿವೆ. ಇತ್ತ ಇಸ್ರೇಲ್ ಸಹ ಪ್ಯಾಲೆಸ್ತಿನ್ ಮೇಲೆ ಯುದ್ಧ ಸಾರಿದ್ದು ವಿಮಾನಯಾಣ ಸಂಚಾರ ಎಲ್ಲವೂ ಬಂದ್ ಆಗಿವೆ. ಈ ಹಿನ್ನೆಲೆ ಹಸು ತರುವ ಪ್ರಕ್ರಿಯೇ ಸ್ಥಗಿತಗೊಂಡಿದೆ.‌ ಜೊತೆಗೆ ಇಸ್ರೇಲ್ ತೆರಳಿ ಯುದ್ಧ ಪರಿಸ್ಥಿತಿಯಲ್ಲಿ ಸಿಲುಕುವ  ಸಂಕಷ್ಟದಿಂದ ರೈತರು ಕೂಡ ಪಾರಾಗಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!
CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ