ಸಿದ್ದಗಂಗಾ ಮಠ ವಿಶ್ವಕ್ಕೆ ಪರಿಚಯಿಸುವಲ್ಲಿ ನನ್ನ ಸೇವೆಯೂ ಇದೆ: ವಿ ಸೋಮಣ್ಣ

By Ravi Janekal  |  First Published Mar 19, 2024, 11:49 PM IST

ಲೋಕಸಭೆ ಚುನಾವಣೆಯೇ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ. ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲಾ ಗೌಣ. ಮೋದಿ ಅವರ ಮುಖ ನೋಡಿ ಎಲ್ಲಾ ಕ್ಷೇತ್ರಗಳಲ್ಲಿ ಜನರಿಂದ ಮತದಾನ ಆಗುತ್ತದೆ ಎಂದು ವಿ ಸೋಮಣ್ಣ ತಿಳಿಸಿದರು.


ಚಿತ್ರದುರ್ಗ (ಮಾ.19): ಯಾರು ಯಾವ ಕಡೆ ಮುಖ ಮಾಡುತ್ತಾರೆ, ಯಾವ ಪಕ್ಷ ಸೇರುತ್ತಾರೆಂಬುದು ಗೌಣ. ದೇಶ ಮುಖ್ಯ, ವೈಯಕ್ತಿಕ ವಿಚಾರ ಇದ್ದಿದ್ದೇ ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ತಿಳಿಸಿದರು.

ಮಾಜಿ ಸಚಿವ ಜೆ ಮಾಧುಸ್ವಾಮಿ ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 28 ಕ್ಷೇತ್ರಕ್ಕೆ 28 ಅಬ್ಯರ್ಥಿಗಳಿಗೆ ಟಿಕೆಟ್ ಕೊಡ ಬೇಕಾಗುತ್ತದೆ. 28ರ ಬದಲು 29 ಟಿಕೆಟ್ ಕೊಡಲು ಆಗುವುದಿಲ್ಲವಲ್ಲ ಎಂದು ಪ್ರಶ್ನಿಸಿದ ವಿ ಸೋಮಣ್ಣ, ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದೆ ನನಗೂ ತುಮಕೂರಿಗೆ ಅವಿನಾಭಾವ ಸಂಬಂಧವಿದೆ. ಸಿದ್ದಗಂಗಾ ಮಠ ವಿಶ್ವಕ್ಕೆ ಪರಿಚಯಿಸುವಲ್ಲಿ ನನ್ನ ಸೇವೆಯೂ ಇದೆ. ಹೀಗಾಗಿ ಹೈಕಮಾಂಡ್ ಇವತ್ತಿಗೆ ಬೇಡ ಎಂದರೂ ನಾನು ಸಿದ್ಧನಿದ್ದೇನೆ ಎಂದರು.

Latest Videos

undefined

Lok sabha election 2024: ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ: ಜಗದೀಶ್ ಶೆಟ್ಟರ್

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಮಾಧುಸ್ವಾಮಿ ಅವರನ್ನು ಭೇಟಿ ಮಾಡಲು ಒಮ್ಮೆ ಕೇಳಿದೆ ಆದರೆ ಅವರು ಬರಬೇಡ ಎಂದರು. ಇನ್ನೊಮ್ಮೆ ಕೇಳಿ ನೋಡುತ್ತೇನೆ ಬಾ ಎಂದರೆ ಭೇಟಿಗೆ ಹೋಗುತ್ತೇನೆ. ಮಾಧುಸ್ವಾಮಿಗೆ ಟಿಕೆಟ್ ಕೊಟ್ಟಿದ್ದರೂ ನಾನು ಕೆಲಸ ಮಾಡುತ್ತಿದ್ದೆ. ಬಸವರಾಜುಗೆ ಟಿಕೆಟ್ ಕೊಟ್ಟಾಗ ನಾನು ಕೆಲಸ ಮಾಡಿದ್ದೇನೆ. ಮಾಧುಸ್ವಾಮಿ ಬುದ್ಧಿವಂತರು, ಪ್ರಜ್ಞಾವಂತರು. ಅವರ ತೀರ್ಮಾನ ಏನು ಎಂಬುದು ನನಗೆ ಗೊತ್ತಿಲ್ಲ ಎಂದರು.

Somanna meets Yediyurappa: ತುಮಕೂರು ‘ಲೋಕ’ ಟಿಕೆಟ್ ಮೇಲೆ ಸೋಮಣ್ಣ ಕಣ್ಣು: ಮುನಿಸು ಮರೆತು ಬಿಎಸ್‌ವೈ ಭೇಟಿ !

ಲೋಕಸಭೆ ಚುನಾವಣೆಯೇ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ. ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲಾ ಗೌಣ. ಮೋದಿ ಅವರ ಮುಖ ನೋಡಿ ಎಲ್ಲಾ ಕ್ಷೇತ್ರಗಳಲ್ಲಿ ಜನರಿಂದ ಮತದಾನ ಆಗುತ್ತದೆ. ದೇಶಕ್ಕೆ ಮೋದಿ ಬೇಕು ಎಂಬ ಕಾರಣಕ್ಕೆ ಜನರಿಂದ ಮತದಾನ ಮಾಡುತ್ತಾರೆ. ಕೆಎಸ್ ಈಶ್ವರಪ್ಪ ಸಹ ನುರಿತ ರಾಜಕಾರಣಿ. ನಾನು ಅವರ ಅಭಿಮಾನಿ. ಟಿಕೆಟ್ ಸಿಗದ ವಿಚಾರವಾಗಿ ಅವರಿಗೆ ನೋವಾಗಿರೋದು ನಿಜ. ಆದರೆ ಎರಡು ಮೂರು ದಿನದಲ್ಲಿ ಸರಿಯಾಗಲಿದೆ. ಅವರು ನಮ್ಮ ಪಕ್ಷದ ಬೆನ್ನೆಲುಬು, ಕೇಂದ್ರದ ನಾಯಕರು ಸರಿ ಮಾಡುತ್ತಾರೆ ಎಂದರು.

click me!