ಇನ್ನೆರಡು ದಿನಗಳಲ್ಲಿ ಟಿಕೆಟ್ ಫೈನಲ್ ಆಗಲಿದೆ. ಬೆಳಗಾವಿಯಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದೇನೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಹುಬ್ಬಳ್ಳಿ (ಮಾ.19): ಇನ್ನೆರಡು ದಿನಗಳಲ್ಲಿ ಟಿಕೆಟ್ ಫೈನಲ್ ಆಗಲಿದೆ. ಬೆಳಗಾವಿಯಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಲೋಕಸಭಾ ಟಿಕೆಟ್ ವಿಚಾರ ಕುರಿತಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ಬೆಳಗಾವಿ ಜಿಲ್ಲೆಯ ನಾಯಕರ ಜೊತೆ ಸಮಾಲೋಚನೆ ಮಾಡಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳೋ ಕೆಲಸ ಆಗಿದೆ. ಚುನಾವಣಾ ಸಭೆ ಮುಗಿಸಿ ಅಂತಿಮ ತೀರ್ಮಾನ ಆಗತ್ತೆ
ಮೋದಿ ಸಭೆ ಕರೆದು ಅಂತಿಮ ತೀರ್ಮಾನ ಮಾಡ್ತಾರೆ. ಸಭೆಯ ಬಳಿಕ ಯೋಗ್ಯವಾದ ನಿರ್ದಾರ ಆಗತ್ತೆ. ಸಮಾಧಾನ ಆಗಿದೆ ಎಂದರು.
ಜಗದೀಶ್ ಶೆಟ್ಟರ್ ಸ್ಪರ್ಧೆಗೆ ‘ಲೋಕಲ್’ ಸಿಟ್ಟು..ಬೆಳಗಾವಿಯಲ್ಲಿ ಕಾರ್ಯಕರ್ತರಿಂದ ಗೋ ಬ್ಯಾಕ್ ಅಭಿಯಾನ!
ಇನ್ನು ಟಿಕೆಟ್ ತಪ್ಪಿಸಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಟಿಕೆಟ್ ತಪ್ಪಿಸುವ ವಿಚಾರ ನಾನು ಕಮೆಂಟ್ ಮಾಡಲ್ಲ. ಪಕ್ಷದ ತೀರ್ಮಾನ ಆದ ಮೇಲೆ ಎಲ್ಲರಿಗೂ ಗೊತ್ತಾಗುತ್ತೆ. ಎಲ್ಲರ ಸಹಕಾರದೊಂದಿಗೆ ಚುನಾವಣೆ ಎದುರಿಸುತ್ತೇವೆ. ಇವತ್ತು ಮದ್ಯಾಹ್ನ ಕಡಾಡಿ, ಪ್ರಭಾಕರ ಕೋರೆ, ಅಭಯ್ ಪಾಟೀಲ್ ಎಲ್ಲರ ಜೊತೆ ಮಾತನಾಡಿದ್ದೇನೆ. ಪಕ್ಷದ ನಿರ್ದಾರಕ್ಕೆ ಬದ್ದ ಎಂದಿದ್ದಾರೆ.
ನಾಳೆ ಬಿಜೆಪಿ ಮೂರನೇ ಲಿಸ್ಟ್ ಘೋಷಣೆ ಸಾಧ್ಯತೆ, ನನ್ನ ಹೆಸರೂ ಬರಬಹುದು: ಜಗದೀಶ್ ಶೆಟ್ಟರ್
ಟಿಕೆಟ್ ಸಿಗೋ ವಿಶ್ವಾಸ ಇದೆ. ಟಿಕೆಟ್ ಘೋಷಣೆ ಆಗೋವರೆಗೂ ನಾವು ಏನು ಹೇಳೋಕೆ ಆಗೊಲ್ಲ ಎಂದರು.