ಸೋಮಣ್ಣರನ್ನ ತುಮಕೂರು ಅಭ್ಯರ್ಥಿ ಅನ್ನುವ ಬದಲು 'ಪಾರ್ಲಿಮೆಂಟ್ ಮೆಂಬರ್' ಎಂದ ಸಿಎಂ!

By Ravi Janekal  |  First Published Apr 1, 2024, 5:51 PM IST

ವಿಧಾನಸಭಾ ಚುನಾವಣೇಲಿ ಬಿಜೆಪಿಯವರು ನನ್ನನ್ನ ಸೋಲಿಸಲಿಕ್ಕೆ ಸೋಮಣ್ಣನನ್ನ ಕರೆ ತಂದರು. ಅಲ್ಲಿ ನನ್ನ ವಿರುದ್ಧ ಸೋತ ಬಳಿಕ ಇದೀಗ ತುಮಕೂರಿಗೆ ಹೋಗಿ ಪಾರ್ಲಿಮೆಂಟ್ ಮೆಂಬರ್ ಆಗಿದ್ದಾರೆ ಎಂದರು.  ಬಾಯ್ತಪ್ಪಿನಿಂದ ಸೋಮಣ್ಣನವರು ತುಮಕೂರು ಅಭ್ಯರ್ಥಿ ಅನ್ನುವ ಬದಲು ಪಾರ್ಲಿಮೆಂಟ್ ಮೆಂಬರ್ ಎಂದ ಸಿಎಂ.


ಮೈಸೂರು (ಏ.1): ವರುಣ ಕ್ಷೇತ್ರ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರವಾಗಿದೆ. ನಾನು ಎರಡು ಬಾರಿ ಸಿಎಂ ಆಗಲು ನೀವೆಲ್ಲರೂ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬೆಂಗಳೂರಿನ ಸೋಮಣ್ಣ ಅವರನ್ನ ಕರೆದುಕೊಂಡು ಬಂದ್ರು. ಸಾಕಷ್ಟು ಹಣ ಖರ್ಚು ಮಾಡಿದ್ರೂ ನನ್ನ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ನಿಮ್ಮ ಋಣವನ್ನು ನಾನು ತೀರಿಸಲು ಸಾಧ್ಯವಿಲ್ಲ. 2013ರಲ್ಲಿ ಸಿಎಂ ಆಗಬೇಕಾದರೆ ನೀವೆಲ್ಲ ನನಗೆ 30ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ರಿ. 2023ರಲ್ಲಿ 40ಸಾವಿರಕ್ಕೂ ಹೆಚ್ಚು ಮತಗಳನ್ನ ನೀಡಿ ಗೆಲ್ಲಿಸಿದ್ರಿ. ನನಗೆ 2ನೇ ಬಾರಿ ಸಿಎಂ ಆಗಲಿಕ್ಕೆ ನಿಮ್ಮೆಲ್ಲರ ಪಾತ್ರ ದೊಡ್ಡದು. ಹೀಗಾಗಿ ವರುಣ ಕ್ಷೇತ್ರದ ಜನತೆಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದರು.

Latest Videos

undefined

ನನ್ನ ಉಸಿರು ಇರೋತನಕ ತುಮಕೂರು ರಾಜಕಾರಣಕ್ಕೆ ನನ್ನ ಮಗ ಬರೋದಿಲ್ಲ: ವಿ ಸೋಮಣ್ಣ

ಸೋಮಣ್ಣರನ್ನ ಪಾರ್ಲಿಮೆಂಟ್ ಮೆಂಬರ್ ಎಂದ ಸಿಎಂ:

ವಿಧಾನಸಭಾ ಚುನಾವಣೇಲಿ ಬಿಜೆಪಿಯವರು ನನ್ನನ್ನ ಸೋಲಿಸಲಿಕ್ಕೆ ಸೋಮಣ್ಣನನ್ನ ಕರೆ ತಂದರು. ಅಲ್ಲಿ ನನ್ನ ವಿರುದ್ಧ ಸೋತ ಬಳಿಕ ಇದೀಗ ತುಮಕೂರಿಗೆ ಹೋಗಿ ಪಾರ್ಲಿಮೆಂಟ್ ಮೆಂಬರ್ ಆಗಿದ್ದಾರೆ ಎಂದರು. ಸೋಮಣ್ಣನವರು ತುಮಕೂರು ಅಭ್ಯರ್ಥಿ ಅನ್ನುವ ಬದಲು ಬಾಯ್ತಪ್ಪಿನಿಂದ ಪಾರ್ಲಿಮೆಂಟ್ ಮೆಂಬರ್ ಎಂದ ಸಿಎಂ.

ಸಿದ್ದರಾಮಯ್ಯ ಅಹಂಕಾರಕ್ಕೆ ಎಂಪಿ ಚುನಾವಣೇಲಿ ಉತ್ತರ: ಎಚ್‌.ಡಿ.ದೇವೇಗೌಡ

ಹಿಂದಿನ ಚುನಾವಣೆಯಲ್ಲೇ ನನ್ನ ಸೋಲಿಸಲು ಸೋಮಣ್ಣ ಸಾಕಷ್ಟು ಹಣವನ್ನ ಖರ್ಚು ಮಾಡಿದ್ರು. ಆದರೆ ನೀವು ಸೋಮಣ್ಣನನ್ನ ಸೋಲಿಸಿ ನನ್ನನ್ನ ಗೆಲ್ಲಿಸಿದ್ರಿ. ನಾನು ಮುಖ್ಯಮಂತ್ರಿಯಾದ ಬಳಿಕ ಬಡವರು, ಅಲ್ಪ ಸಂಖ್ಯಾತರ ಪರ ಕೆಲಸ ಮಾಡಿದ್ದೇನೆ. ನಮ್ಮ ಸರ್ಕಾರದಲ್ಲಿ ನಾವು ನುಡಿದಂತೆ ನಡೆದಿದ್ದೇವೆ ಎಂದರು.

click me!