ಪ್ರಧಾನಿ ಮೋದಿ ಆಗಮನ: ಮೈಸೂರಿಗೆ ತೆರಳುವವರು ಈ ರಸ್ತೆಗಳನ್ನ ಬಳಸಿ

By Ravi JanekalFirst Published Apr 14, 2024, 8:46 AM IST
Highlights

ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಈ ಹಿನ್ನೆಲೆ ಇಂದು(ಏ.14) ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ ವ್ಯಾಪ್ತಿಯ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. 

ಮೈಸೂರು (ಏ.14): ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಈ ಹಿನ್ನೆಲೆ ಇಂದು(ಏ.14) ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ ವ್ಯಾಪ್ತಿಯ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. 

ಬೋಪಾಲ್ ಏರ್‌ಪೋರ್ಟ್‌ನಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸಂಜೆ 5ಗಂಟೆಗೆ ಆಗಮಿಸಲಿರುವ ಮೋದಿ, ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ  7 ಗಂಟೆಗೆ ಕಾರ್ಯಕ್ರಮ ಮುಗಿಸಿ ರಸ್ತೆ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪಯಣಿಸಲಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಮಂಗಳೂರಿನತ್ತ ಪಯಣ ಬೆಳೆಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಇಂದು ತರಾತುರಿಯಲ್ಲಿ ಶ್ರೀನಿವಾಸಪ್ರಸಾದ್ ಭೇಟಿಗೆ ಮುಂದಾದ ಯಡಿಯೂರಪ್ಪ!

ಮೋದಿ ಆಗಮನ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ:

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿರುವ ಹಿನ್ನೆಲೆ ನಗರದಲ್ಲಿ ಸಾರಿಗೆ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದು, ಮಹಾರಾಜ ಕಾಲೇಜು ಮೈದಾನದ ಸುತ್ತಲಿನ ಕೆಲವು ರಸ್ತೆಗಳಲ್ಲಿ  ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಹುಣಸೂರು ರಸ್ತೆ ಮಾರ್ಗವಾಗಿ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುವ ಮಾರ್ಗ:

1. ಹುಣಸೂರು ಮಾರ್ಗದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮಾರ್ಗ:

ಮಡಿಕೇರಿ, ಹುಣಸೂರು, ಹಾಸನ ಕಡೆಯಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ನಗರಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹಿನಕಲ್ ಪ್ಲೆöÊಓವರ್‌ಜಂಕ್ಷನ್- ಎಡತಿರುವು- ರಿಂಗ್‌ರಸ್ತೆ- ರಾಯಲ್‌ಇನ್‌ಜಂಕ್ಷನ್- ಬಲ ತಿರುವು- ಕೆ.ಆರ್.ಎಸ್. ರಸ್ತೆ- ವಿ.ವಿ.ಪುರಂ ವೃತ್ತ- ಆಕಾಶವಾಣಿ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಮೆಟ್ರೋಪೋಲ್ ವೃತ್ತ- ಮೂಡಾ ವೃತ್ತ- ಎಡತಿರುವು- ರಮಾವಿಲಾಸ ರಸ್ತೆ- ಬನುಮಯ್ಯಜಂಕ್ಷನ್- ಬಲ ತಿರುವು- ಬಿ.ರಾಚಯ್ಯ ವೃತ್ತ- ಎಡತಿರುವು- ಪುರಂದರರಸ್ತೆ- ಕುಸ್ತಿ ಅಖಾಡ ಜಂಕ್ಷನ್- ಹಾರ್ಡಿಂಜ್ ವೃತ್ತ- ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪುವುದು.

2. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹುಣಸೂರು ರಸ್ತೆಗೆ ಮಾರ್ಗ:

ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಸ್ ನಿಲ್ದಾಣದ ಬಳಿ ಎಡ ತಿರುವು ಪಡೆದು ಇರ್ವಿನ್ ರಸ್ತೆ- ನೆಹರು ವೃತ್ತ- ಆಯುರ್ವೇದಿಕ್ ವೃತ್ತ- ರೈಲ್ವೇ ನಿಲ್ದಾಣ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಕೆ.ಆರ್.ಎಸ್ ರಸ್ತೆ- ವಿ.ವಿ.ಪುರಂ ವೃತ್ತ- ರಾಯಲ್‌ಇನ್‌ಜಂಕ್ಷನ್- ಎಡತಿರುವು- ರಿಂಗ್‌ರಸ್ತೆ- ಹಿನಕಲ್ ಪ್ಲೆöÊ ಓವರ್ ಜಂಕ್ಷನ್- ಬಲ ತಿರುವು ಪಡೆದು ಹುಣಸೂರುರಸ್ತೆಯಲ್ಲಿ ಮುಂದುವರೆಯುವುದು. 

3. ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಬೆಂಗಳೂರು ರಸ್ತೆಗೆ ಮಾರ್ಗ:

ಕೆಎಸ್‌ಆರ್‌ಟಿಸಿ ಬಸ್ಸುಗಳು ಬಸ್ ನಿಲ್ದಾಣದ ಬಳಿ ಎಡತಿರುವು- ಫೈವ್ ಲೈಟ್ ವೃತ್ತ- ಡಾ.ರಾಜಕುಮಾರ್ ವೃತ್ತ- ಟಿಪ್ಪು ವೃತ್ತ- ಬಲ ತಿರುವು- ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್- ಕೆಂಪೇಗೌಡ ಜಂಕ್ಷನ್ ಮೂಲಕ ಮುಂದುವರೆಯುವುದು.

4. ನಂಜನಗೂಡುರಸ್ತೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಚರಿಸುವ ಮಾರ್ಗ

ನಂಜನಗೂಡು ರಿಂಗ್‌ರಸ್ತೆ ಜಂಕ್ಷನ್- ಬಲತಿರುವು- ರಿಂಗ್‌ರಸ್ತೆ- ಸಾವಿತ್ರಿ ಬಾಯಿಪುಲೆ ವೃತ್ತ- ಟಿ.ಎನ್ ಪುರರಸ್ತೆಟಿ-ಜಂಕ್ಷನ್- ಲಲಿತ ಮಹಲ್‌ರಸ್ತೆ- ಸಂಗೊಳ್ಳಿ ರಾಯಣ್ಣ ವೃತ್ತ- ಬುಲೆವಾರ್ಡ್ ವೃತ್ತ- ಟ್ಯಾಂಕ್ ಬಂಡ್‌ರಸ್ತೆ- ಲೋಕರಂಜನ್‌ರಸ್ತೆ- ಹಾರ್ಡಿಂಜ್ ವೃತ್ತ- ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪುವುದು.

ಮಂಗಳೂರು ನಗರದಾದ್ಯಂತ ರಸ್ತೆ ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಬದಲಾವಣೆ! 

ವಾಹನಗಳಿಗೆ ಈ ಸ್ಥಳಗಳಲ್ಲಿ ನಿರ್ಬಂಧ:

  • ಡಿ.ಸಿ ಕಛೇರಿ ಆರ್ಚ್‌ ಜಂಕ್ಷನ್‌ ನಿಂದ ಕೋರ್ಟ್‌ ಜಂಕ್ಷನ್‌ವರೆಗಿನ ಕೆಆರ್‌ಬಿ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧ.
  • ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆ ನಿರ್ಬಂಧ.
  • ನಗರಕ್ಕೆ ಆಗಮಿಸುವ ವಾಹನಗಳು ಪಡುವಾರಹಳ್ಳಿ ವೃತ್ತದ ಬಳಿ ಬಲ ತಿರುವು ಪಡೆದು ಬಯಲುರಂಗ ಮಂದಿರ ರಸ್ತೆಯಲ್ಲಿ ಸಂಚರಿಸಬೇಕು.
  • ಮೆಟ್ರೋಪೋಲ್ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗಿನ ಜೆಎಲ್‌ಬಿ ರಸ್ತೆ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಸಾರ್ವಜನಿಕ ವಾಹನ ಸಂಚಾರಕ್ಕೆ ಬದಲಿ ಮಾರ್ಗ: 

  • ನಗರಕ್ಕೆ ಆಗಮಿಸುವ ವಾಹನಗಳು ಮೆಟ್ರೋಪೋಲ್ ವೃತ್ತದಿಂದ ವಿನೋಬ ರಸ್ತೆ- ಚಿಕ್ಕಗಡಿಯಾರ ವೃತ್ತ- ಕೆ.ಆರ್ ವೃತ್ತದ ಮೂಲಕ ಸಂಚರಿಸಬೇಕು.
  • ನಗರಕ್ಕೆ ಆಗಮಿಸುವ ವಾಹನಗಳು ಮೆಟ್ರೋಪೋಲ್ ವೃತ್ತ- ದಾಸಪ್ಪ ವೃತ್ತ- ಜೆ.ಕೆ.ಗ್ರೌಂಡ್ ಜಂಕ್ಷನ್- ಆಯುರ್ವೇದಿಕ್ ವೃತ್ತದ ಮೂಲಕ ಸಂಚರಿಸುವುದು. 
  • ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ್ತ- ಕೆ.ಆರ್.ಎಸ್‌ರಸ್ತೆ- ವಿ.ವಿ.ಪುರಂ ವೃತ್ತದ ಮೂಲಕ ಮುಂದೆ ಸಾಗುವುದು.

ಸಾರ್ವಜನಿಕ ವಾಹನಗಳು ಸಂಚರಿಸುವ ಬದಲಿ ಮಾರ್ಗಗಳು:

  •  ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಚದುರಂಗ ವೃತ್ತದ ಬಳಿ ಬಲ ತಿರುವು ಪಡೆದು ಚದರಂಗ ರಸ್ತೆ ಮೂಲಕ ಮುಂದೆ ಸಾಗುವುದು. 
  • ನಗರಕ್ಕೆ ಆಗಮಿಸುವ ವಾಹನಗಳು ವಾಲ್ಮಿಕಿ ರಸ್ತೆಯಲ್ಲಿ ಎಡತಿರುವು ಪಡೆದು ಆಕಾಶವಾಣಿ ವೃತ್ತದ ಮೂಲಕ ಸಂಚರಿಸುವುದು.
  • ನಗರದಿಂದ ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ್ತ- ಕೆ.ಆರ್.ಎಸ್‌ರಸ್ತೆ- ವಿ.ವಿ.ಪುರಂ ವೃತ್ತದ ಮೂಲಕ ಮುಂದೆ ಸಾಗುವುದು.
  • ಮೂಡಾ ಜಂಕ್ಷನ್‌ ನಿಂದ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಪ್ರತಿಮೆ ಜಂಕ್ಷನ್‌ವರೆಗೆ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. 
  • ಬೋಗಾದಿ ರಸ್ತೆಕಡೆಗೆ ಸಂಚರಿಸುವ ವಾಹನಗಳು ಆರ್.ಟಿ.ಓ ವೃತ್ತ- ಬಲ್ಲಾಳ್ ವೃತ್ತ- ಕೆ.ಜಿ.ಕೊಪ್ಪಲುರಸ್ತೆ- ವಿಜಯ ಬ್ಯಾಂಕ್‌ರಸ್ತೆ ಮೂಲಕ ಸಂಚರಿಸುವುದು.
  • ಹುಣಸೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತಿಪ್ಪೇಸ್ವಾಮಿ ವೃತ್ತ- ಬಯಲು ರಂಗಮಂದಿರ ರಸ್ತೆ- ಪಡುವಾರಹಳ್ಳಿ ಜಂಕ್ಷನ್- ಹುಣಸೂರುರಸ್ತೆ ಮೂಲಕ ಸಂಚರಿಸುವುದು.
  • ಬೋಗಾದಿ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ವಿ.ಎಂ.ಡಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಮುಂದೆ ಸಾಗುವುದು.
click me!