ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ನಾಯಕತ್ವ ವಹಿಸಿಕೊಳ್ಳುವಂತೆ ಕೇಳುತ್ತಿದ್ದಾರೆ. ಇಂಥ ನಾಯಕನನ್ನು ನಾವು ಉಳಿಸಿಕೊಳ್ಳಬೇಕಿದೆ. ಅದು ಸಾಧ್ಯವಾಗುವುದು ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ ಬಸವರಾಜರನ್ನು ಗೆಲ್ಲಿಸಿದಾಗ ಮಾತ್ರ ಎಂದು ಸಂಸದ ಕರಡಿ ಸಂಗಣ್ಣ ನುಡಿದರು.
ಕೊಪ್ಪಳ (ಏ.1): ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ನಾಯಕತ್ವ ವಹಿಸಿಕೊಳ್ಳುವಂತೆ ಕೇಳುತ್ತಿದ್ದಾರೆ. ಇಂಥ ನಾಯಕನನ್ನು ನಾವು ಉಳಿಸಿಕೊಳ್ಳಬೇಕಿದೆ. ಅದು ಸಾಧ್ಯವಾಗುವುದು ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ ಬಸವರಾಜರನ್ನು ಗೆಲ್ಲಿಸಿದಾಗ ಮಾತ್ರ ಎಂದು ಸಂಸದ ಕರಡಿ ಸಂಗಣ್ಣ ನುಡಿದರು.
ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದ ಬೂತ್ ವಿಜಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ, ಈ ಚುನಾವಣೆಯಲ್ಲಿ ಡಾ ಬಸವರಾಜ ಅವರಿಗೆ ನಿಮ್ಮ ಆಶೀರ್ವಾದ ಆಗಬೇಕು. ಬಸವರಾಜ ಅವರು ಗೆದ್ದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ. ಮತ್ತೊಮ್ಮೆ ಪ್ರಧಾನಿ ಆಗಿದ್ದೇ ಆದಲ್ಲಿ ನರೇಂದ್ರ ಮೋದಿ ವಿಶ್ವ ನಾಯಕತ್ವ ವಹಿಸಿಕೊಳ್ಳೋದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಡಿಎಂಕೆ-ಕಾಂಗ್ರೆಸ್‌ಗೆ ಕಚತೀವು ತಲೆನೋವು, ಲೋಕಸಭೆಯಲ್ಲಿ ಉಲ್ಟಾ ಆಗುತ್ತಾ ಲೆಕ್ಕಾಚಾರ?
ಒಬ್ಬ ಯುವಕ, ವೈದ್ಯ, ಶಿಕ್ಷಣವಂತ ಅಭ್ಯರ್ಥಿ ನಮಗೆ ಸಿಕ್ಕಿದ್ದಾರೆ. ಇಂಥ ಅಭ್ಯರ್ಥಿಯನ್ನು ಗೆಲ್ಲಿಸಲು ಮನವಿ ಮಾಡಿದರು. ಇದೇ ಬಿಜೆಪಿ ಪಕ್ಷಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮರುಸೇರ್ಪಡೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ ಸಂಸದರು, ಜನಾರ್ದನ ರೆಡ್ಡಿ ಪಕ್ಷಕ್ಕೆ ಬಂದಿರುವುದರಿಂದ ನಮಗೆ ಶಕ್ತಿ ಬಂದಿದೆ ಎಂದರು.
I.N.D.I.A ಒಕ್ಕೂಟದ ಬಗ್ಗೆ ವಾಗ್ದಾಳಿ ನಡೆಸಿದ ಸಂಸದರು. ಇಂಡಿಯ ಒಕ್ಕೂಟದವರ ಚರಿತ್ರೆಯನ್ನು ತಿಳಿಯಬೇಕಿದೆ. ಅವರ ಒಕ್ಕೂಟಕ್ಕೆ ನಾಯಕತ್ವವೇ ಇಲ್ಲ. ಬಹಳಷ್ಟು ವರ್ಷ ಆಡಳಿತ ಮಾಡಿದ್ದು ಕಾಂಗ್ರೆಸ್. ಆದರೆ ದೇಶವನ್ನು ಅಭಿವೃದ್ಧಿ ದೇಶದ ಸಾಲಿನಲ್ಲಿ ನಿಲ್ಲಿಸಲು ಆಗಲಿಲ್ಲ. ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು ಪಿಎಂ ಮಾಡಲು ನಿರ್ಧರಿಸಿದರು. ಬಳಿಕ ದೇಶದ ಪ್ರಧಾನಿಯಾದ ಬಳಿಕ ದೇಶ ಹೇಗೆ ಅಭಿವೃದ್ಧಿಗೊಂಡಿದೆ ಎಂಬುದು ಕಣ್ಣುಮುಂದೆ ಇದೆ. ದೇಶವಾಸಿಗಳ ಭಾವನೆಗಳಿಗೆ ಚ್ಯುತಿ ಬರದಂತೆ ಮೋದಿ ನಡೆದುಕೊಂಡಿದ್ದಾರೆ ಎಂದರು.
ಲಂಕಾದಿಂದ ಕಚ್ಚತೀವು ದ್ವೀಪ ಮರಳಿ ಪಡೆಯಲು ಮೋದಿ ಸರ್ಕಾರ ಯತ್ನ, ಅಣ್ಣಾಮಲೈ ಹೇಳಿಕೆ ಸಂಚಲನ!
ಹಿಂದೆ ಭಾರತವನ್ನು ಹಾವಾಡಿಗರ ದೇಶ ಎಂದು ಹೇಳುತ್ತಿದ್ದರು. ಇವತ್ತು ಭಾರತದ ಪ್ರಧಾನಿಗೆ ವಿದೇಶಕ್ಕೆ ಹೋದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡ್ತಾರೆ. ಪ್ರಧಾನಿ ಮೋದಿ ಮುಂದಿನ ಯೋಜನೆಗಳ ಸಂಕಲ್ಪ ಮಾಡಿದ್ದಾರೆ. ದೇಶದಲ್ಲಿ 72% ಸುಶಿಕ್ಷಿತರು ಮೋದಿಗೆ ವೋಟ್ ಹಾಕುತ್ತೇವೆ ಎಂದಿದ್ದಾರೆ.ಕಚತೀವು ದ್ವೀಪವನ್ನು ನೆಹರು ಅವರು ಬಿಟ್ಟುಕೊಟ್ಟರು. ಆದರೆ ಅದನ್ನು ವಾಪಸ್ ಪಡೆಯುವ ಧೈರ್ಯ ಮೋದಿಯವರಿಗೆ ಇದೆ. ಅಂಥ ನಾಯಕರನ್ನು ಪಡೆದ ನಾವೇ ಧನ್ಯರು. ಅಮೆರಿಕಕ್ಕಿಂತ ಭಾರತ ಅಭಿವೃದ್ಧಿಯಲ್ಲಿ ಮುಂದಿದೆ. ಹೈವೇ ನಿರ್ಮಾಣ, ಮೂಲಭೂತ ಸೌಕರ್ಯದಲ್ಲಿ ಭಾರತ ಜಗತ್ತಿನಲ್ಲಿ ನಂ 1 ಸ್ಥಾನದಲ್ಲಿದೆ ಎಂದು ಅಭಿಪ್ರಾಯಪಟ್ಟರು.