ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದ ಈ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆಗೂ ಬಹಿಷ್ಕಾರ!

By Ravi Janekal  |  First Published Apr 1, 2024, 9:25 PM IST

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಜಕ್ಕಣ್ಣಕ್ಕಿ ಗ್ರಾಮಸ್ಥರು ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸದ್ದಕ್ಕೆ ಈ ಬಾರಿಯೂ ಚುನಾವಣಾ ಬಹಿಷ್ಕಾರ  ಮಾಡಿ ಚುನಾವಣಾ ಆಯೋಗ ದೂರು ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯನ್ನೂ ಇದೇ ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದರು.


ವರದಿ : ಆಲ್ದೂರು ಕಿರಣ್  ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.1): ಮೊದಲ ಹಂತ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಚುನಾವಣಾ ರಣಕಣದಲ್ಲಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯುಲು ಕಸರತ್ತು ಆರಂಭಿಸಿದ್ದಾರೆ. ಗ್ರಾಮಾಂತರ ಪ್ರದೇಶದ ಮತಬೇಟೆಗೆ ತೆರಳುವ ರಾಜಕೀಯ ಪಕ್ಷಗಳಿಗೆ ಇದೀಗ  ಬಹಿಷ್ಕಾರದ ಬಿಸಿ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನಲ್ಲಿ ಬಹಿಷ್ಕಾರದ ಕೂಗು ಜೋರಾಗಿದ್ದು  ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಚುನಾವಣೆ ಬಹಿಷ್ಕಾರವನ್ನು ಗ್ರಾಮಸ್ಥರು ಮಾಡಿದ್ದಾರೆ. 

Latest Videos

undefined

ಸರ್ಕಾರದ ವಿರುದ್ಧ ಗ್ರಾಮಸ್ಥರಿಂದ ಚುನಾವಣಾ ಆಯೋಗಕ್ಕೆ ದೂರು

ಮೊದಲ ಹಂತದ ಲೋಕಸಭೆ ಚುನಾವಣೆಗೆ ಇನ್ನು 26 ದಿನಗಳು ಬಾಕಿ ಇದೆ. ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರವೂ ಬಿರುಸು ಪಡೆದುಕೊಂಡಿದೆ. ಇನ್ನೊಂದಡೆ ಮತದಾನದ ಮಹತ್ವವನ್ನು ಜನರಲ್ಲಿ  ಜಾಗೃತಿ ಮೂಡಿಸಲು  ಆಯೋಗ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದ್ರೆ ಚಿಕ್ಕಮಗಳೂರಿನ ಕೆಲ ಭಾಗದಲ್ಲಿ ಚುನಾವಣೆಯ ಬಹಿಷ್ಕಾರದ ಪ್ರಕರಣಗಳು ಜಾಸ್ತಿ ಆಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಜಕ್ಕಣ್ಣಕ್ಕಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡಿ ಚುನಾವಣಾ ಆಯೋಗ ದೂರು ನೀಡಿದ್ದಾರೆ. ಗ್ರಾಮಸ್ಥರು ಈ ಬಾರೀ ಲೋಕ ಸಭೆ ಚುನಾವಣೆಯ ಮತದಾನದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಗ್ರಾಮದ ದ್ವಾರ ಬಾಗಿಲಿನಲ್ಲಿ ಈ ಬಾರೀ ಮತದಾನ ಬಹಿಷ್ಕಾರ ಎಂದೂ ಬೋರ್ಡ್ ಹಾಕಿದ್ದಾರೆ. ಗ್ರಾಮದಲ್ಲಿ 50 ಕ್ಕೂ ಹೆಚ್ಚು ಮನೆಗಳಿದ್ದು 600ಕ್ಕೂ ಹೆಚ್ಚುಮತದಾರರು ಇದ್ದಾರೆ. 

ಚಿಕ್ಕಮಗಳೂರು: ಬಿಸಿಲು ಝಳ, ಚುನಾವಣಾ ಕಾವು ಜನರು ಸುಸ್ತೋ ಸುಸ್ತು!

ಓಡಾಡಲು ರಸ್ತೆಯೂ ಇಲ್ಲ, ವಾಸ ಮಾಡ್ತಿರೋ ಮನೆಗೆ ಹಕ್ಕುಪತ್ರವೂ ಇಲ್ಲ

ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆಯಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮೂಲಭೂತ ಸೌಕರ್ಯಗಳಿಂದಾ ಈ ಗ್ರಾಮ ಹಲವಾರು ವರ್ಷಗಳಿಂದಾ ವಂಚಿತ ಆಗಿದ್ದು ಹಲವಾರು ಬಾರೀ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ.ಈ ಕಾರಣಕ್ಕಾಗಿ ಲೋಕಸಭಾ ಚುನಾವಣೆಯ ಮತದಾನವನ್ನು ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದಾರೆ.  ತಾಲೂಕ್ ಕೇಂದ್ರದಿಂದಾ 45 ಕೀ.ಮೀ  ದೂರದಲ್ಲಿರುವ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಕೂಡ ಇಲ್ಲ. ಮಳೆಗಾಲದಲ್ಲಿ ಜನರು ಮತ್ತು ವಾಹನ ಸಂಚಾರ ಓಡಾಡ ತುಂಬಾ  ಕಷ್ಟದಾಯಕವಾಗಿದ್ದು ಇದರಿಂದ ಬೇಸತ್ತು ಗ್ರಾಮಸ್ಥರು ಮತಧಾನ ಬಹಿಷ್ಕಾರ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ವಾರದಲ್ಲಿ ಇಬ್ಬರು, 8 ತಿಂಗಳಲ್ಲಿ 8 ಮಂದಿ ಕಾಡಾನೆ ದಾಳಿಗೆ ಬಲಿ!

ಕಳೆದ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದ ಗ್ರಾಮಸ್ಥರಿಗೆ ತಹಶೀಲ್ದಾರ್ ಸೌಲಭ್ಯ ಕಲ್ಪಿಸೋ ಭರವಸೆ ನೀಡಿದ್ದರು. ಕೊಟ್ಟ ಭರವಸೆ ಹುಸಿಯಾದ ಹಿನ್ನೆಲೆ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡಿ ಸರ್ಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಅದೇನೆಯಿರಲಿ ಜನಪ್ರತಿನಿದಿಗಳು ಕೇವಲ ಚುನಾವಣೆಗಳು ಬಂದಾಗ ಮತದಾರರಿಗೆ ಬಣ್ಣದ ಬಣ್ಣದ ಆಶ್ವಾಸನೆಗಳನ್ನು ನೀಡಿವ ಬದಲು ಅದನ್ನು ಕಾರ್ಯಗತ ಮಾಡುವುದರ ಮೂಲಕ ಜನರ ಸಮಸ್ಸೆಯನ್ನು ಬಗೆಹರಿಸಿಬೇಕು ಅದನ್ನು ಬಿಟ್ಡು ಭರವಸೆಗಳನ್ನು ನೀಡಿ ಮತ್ತೆ ಚುನಾವಣೆ ಬಂದಾಗ ಜನರಿಗೆ ಅದೇ ಭರವಸೆ ನೀಡಲು ಬಂದರೆ ಈ ರೀತಿಯಾಗಿ ಬಹಿಷ್ಕಾರದ ಬಿಸಿ ಎದುರುಸಿಬೇಕಾಗುತ್ತೇದೆ ಇನ್ನು ಮುಂದೆಯಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು  ಎಚ್ಚೆತುಗೊಂಡು ಅಭಿವೃದ್ದಿ ಕಡೆಗೆ ಗಮನ ಹರಿಸುವರೆ ಎಂಬದನ್ನು ಕಾದ್ದು ನೋಡಬೇಕಾಗಿದೆ.

click me!