
ಮಂಡ್ಯ (ಏ.1): ಕೇಸರಿ ಶಾಲು ಹಾಕೋದು ಅಪರಾಧವಾ? ಕೇಸರಿ ಶಾಲಿನಲ್ಲಿ ಸಿದ್ಧಾಂತ ಇರೊಲ್ಲ. ಅದು ನಮ್ಮ ಮನಸ್ಸಿನಲ್ಲಿ, ನಡೆವಳಿಕೆಯಲ್ಲಿ ಇರುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಂಡ್ಯ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದರು.
ಮಂಡ್ಯದಲ್ಲಿಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರ ಸುಧೀರ್ಘ ರಾಜಕೀಯ ಜೀವದಲ್ಲಿ ಕಾಂಗ್ರೆಸ್ ಸಹವಾಸ ಮಾಡಿದ್ದೇ ತಪ್ಪು. ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿದ್ದಕ್ಕೆ ನಾಳೆ ಬೆಳಗ್ಗೆ ಏನು ದೇವೇಗೌಡರು ಪ್ರಧಾನಿ, ರಾಷ್ಟ್ರಪತಿಯೂ ಆಗಲ್ಲ. ನೀವು ಮಾಡಿರೋ ತಪ್ಪುಗಳನ್ನು ಸರಿಪಡಿಸಲು ಬಿಜೆಪಿ ಜೊತೆ ಹೋಗಿರೋದು. ದೇವೇಗೌಡರು ಹಿಂದೆ ಹಾಡಿದ ಮಾತುಗಳನ್ನು ಹೇಳ್ತೀರಾ? ನೀವು(ಸಿದ್ದರಾಮಯ್ಯ) ಸೋನಿಯಾ ಗಾಂಧಿ ಬಗ್ಗೆ ಏನು ಮಾತಾಡಿದ್ರಿ? ಆದರೆ ಕಾಂಗ್ರೆಸ್ ಸೇರಿ ಈಗ ಅವರ ಮುಂದೆಯೇ ನಡು ಬಗ್ಗಿಸಿ ನಿಲ್ಲುತ್ತೀರಲ್ಲ ಎಂದು ಟಾಂಗ್ ನೀಡಿದರು.
ಗೀತಾ ಶಿವರಾಜ ಕುಮಾರ್ ರಾಜಕಾರಣಕ್ಕೆ ಬಂದು ಡಾ.ರಾಜ್ ಕುಟುಂಬದ ಮರ್ಯಾದೆ ತೆಗೆದಿದ್ದಾರೆ: ಹರತಾಳು ಹಾಲಪ್ಪ ವಾಗ್ದಾಳಿ!
ಇನ್ನು ಹೊರಗಿನಿಂದ ಬಂದು ಮಂಡ್ಯದಲ್ಲಿ ನಿಂತಿದ್ದಾರೆಂಬ ಡಿಕೆ ಶಿವಕುಮಾರ ಹೇಳಿಕೆಗೆ ಗರಂ ಆದ ಎಚ್‌ಡಿ ಕುಮಾರಸ್ವಾಮಿಯವರು, ಡಿಕೆ ಶಿವಕುಮಾರ ಎಲ್ಲಿಂದ ಬಂದರು? ದೊಡ್ಡಾಲಹಳ್ಳಿಯಲ್ಲಿ, ಕೊಡಹಳ್ಳಿಯಲ್ಲಿ ಟೂರಿಂಗ್ ಟಾಕೀಸ್ ಇಟ್ಟುಕೊಂಡೆ ಶಿವಕುಮಾರ್ ಬಂದಿದ್ದು. ಈಗ ಬಲಿಷ್ಠವಾಗಿರೋದ್ರಿಂದ ಟೂರಿಂಗ್ ಟಾಕೀಸ್ ಮಹತ್ವ ಮರೆತಿದ್ದಾರೆ ಎಂದರು ತಿರುಗೇಟು ನೀಡಿದರು.
ಇನ್ನು ಕಾಂಗ್ರೆಸ್‌ನಿಂದ ಜಾತ್ಯಾತೀತ ಪಾಠ ಕಲಿಯುವ ಆಗತ್ಯ ಇಲ್ಲ. ಜಾತ್ಯಾತೀತ ಅಂದ್ರೆ ಏನು? ಅದರ ಅರ್ಥ ಹೇಳಲಿ ಅವರು, ಈಗ ಚುನಾವಣೆಯನ್ನು ಯಾವ ಆಧಾರದ ಮೇಲೆ ನಡೆಸುತ್ತಿದ್ದೀರಿ? ನೀವು ನಡೆಸುವ ಸಮ್ಮೇಳನವನ್ನು ಯಾವ ಆಧಾರದಲ್ಲಿ ಮಾಡ್ತೀರಾ? ಕಾಂತರಾಜು ವರದಿ ಯಾವ ಆಧಾರದ ಮೇಲೆ ನಡಿತೀದೆ. ಕಾಂತರಾಜು ವರದಿ ಜಾತ್ಯಾತೀತವಾಗಿ ಇದ್ಯಾ? ಜಾತಿಯನ್ನು ಎತ್ತಿ ಕಟ್ಟಲು ವರದಿ ಮಾಡ್ತಾ ಇದ್ದೀರಾ. ಜಾತ್ಯಾತೀತವನ್ನು ಸಾಯಿಸಲು ಹೊರಟಿರೋರು ನೀವು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹೊರಗಿನಿಂದ ಬಂದು ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಎಚ್‌ಡಿ ಕುಮಾರಸ್ವಾಮಿ, ಮಂಡ್ಯ ಏನು ಪಾಕಿಸ್ತಾನ, ಅಮೆರಿಕದಲ್ಲಿ ಇದ್ಯಾ? ಮಂಡ್ಯ ಇರೋದು ಕರ್ನಾಟಕದಲ್ಲಿ. ನಾನು ಇರೋದೂ ಕರ್ನಾಟಕದಲ್ಲಿ. ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರೂ ಸ್ಪರ್ಧಿಸುತ್ತೇನೆ. ಹಾಗಾದರೆ ಉತ್ತರ ಪ್ರದೇಶದಿಂದ ಕೇರಳಕ್ಕೆ ರಾಹುಲ್ ಗಾಂಧಿಯನ್ನ ಯಾಕೆ ಕರೆದುಕೊಂಡು ಹೋಗಿದ್ದೀರಾ? ಇಟಾಲಿ ಅಮ್ಮನನ್ನು ಇಂಡಿಯಾಗೆ ಯಾಕೆ ಕರೆದುಕೊಂಡು ಬಂದ್ದೀರಾ? ಅದಕ್ಕೂ ಸ್ವಲ್ಪ ಉತ್ತರ ಕೊಡಿ. ನಾನು ಕರ್ನಾಟಕದವನು ಕನ್ನಡಿಗ, ಇಲ್ಲಿ ಎಲ್ಲಿ ಬೇಕಾದ್ರು ಹೋಗಿ ನಿಲ್ಲುತ್ತೇನೆ. ನಾನೇನು ತಮಿಳುನಾಡಿಗೋ, ಕೇರಳಗೋ ಹೋಗಿ ನಿಂತಿಲ್ಲ ಎಂದು ತಿರುಗೇಟು ನೀಡಿದರು.
ಯಾವ ರಾಜಕೀಯ ನಾಯಕರೂ ಮಂಡ್ಯದಲ್ಲಿ ನನ್ನಷ್ಟು ಮದುವೆ ಸಮಾರಂಭಗಳಿಗೆ ಹೋಗಿಲ್ಲ: ಎಚ್‌ಡಿ ಕುಮಾರಸ್ವಾಮಿ
ಬಿಜೆಪಿಯಿಂದ ಮಂಜುನಾಥ್ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಟೀಕೆ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಅದೇ ರಾಜಕೀಯ ಸ್ಟಾಟರ್ಜಿ. ಇವತ್ತಿನ ರಾಜಕೀಯ ಸ್ಟಾಟರ್ಜಿಯೇ ಇದು. ಬಿಜೆಪಿಯಿಂದ ಡಾ ಮಂಜುನಾಥ ಸ್ಪರ್ಧಿಸಿದರೆ ಇವರಿಗೇಕೆ ಭಯ? ದೇವೇಗೌಡ ಅಳಿಯ ತೆನೆ ಹೊತ್ತ ಚಿಹ್ನೆ ಅಥವಾ ಕಮಲದ ಚಿಹ್ನೆ ಅಲ್ಲಿ ಆದ್ರೂ ನಿಲ್ತಾರೆ. ಎರಡೂ ಪಕ್ಷಗಳು ಮೈತ್ರಿ ಆಗಿವೆ. ಅದರ ಬಗ್ಗೆ ಇವರಿಗೆ ಯಾಕೆ ಚಿಂತೆ? ಸೋಲುವ ಭಯ ಕಾಡ್ತಿದೆಯೇ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ