ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಮಾವೇಶದ ಮಧ್ಯೆ ಎದ್ದು ಹೊರಟವರಿಗೆ ಸಿಎಂ ಸಿದ್ದರಾಮಯ್ಯ ಗದರಿಸಿದ ಘಟನೆ ನಡೆಯಿತು. 'ನಿಮಗೋಸ್ಕರ ನಮ್ಮಸರ್ಕಾರ ಹಣ ಕೊಟ್ಟಿದೆ ಎದ್ದು ಹೋಗ್ತೀರಾ, ಕೂಡಿ' ಎಂದು ಸಿಎಂ ಜನರತ್ತ ಸಿಡಿಮಿಡಿಗೊಂಡರು.
ಚಿತ್ರದುರ್ಗ (ಏ.4): 2019ರಲ್ಲಿ 28ರಲ್ಲಿ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದ್ದೆವು. ಆದರೆ ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರವನ್ನು ಗೆದ್ದಿದ್ದೇವೆ. ಇದೀಗ ಚಿತ್ರದುರ್ಗ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಇಂದು ಕೋಟೆನಾಡು ಚಿತ್ರದುರ್ಗ ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಕ, ಲೋಕಸಭಾ ಚುನಾವಣೆಯಲ್ಲೂ ಸಹ ಈ ಸಲ ನಮ್ಮ ಕಾಂಗ್ರೆಸ್ ಶಾಸಕರು ಪ್ರಯತ್ನ ಪಟ್ಟು ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಬೇಕು ಎಂದರು.
undefined
ಸೋಮಣ್ಣರನ್ನ ತುಮಕೂರು ಅಭ್ಯರ್ಥಿ ಅನ್ನುವ ಬದಲು 'ಪಾರ್ಲಿಮೆಂಟ್ ಮೆಂಬರ್' ಎಂದ ಸಿಎಂ!
ಬಿಜೆಪಿ 3 ವರ್ಷ 10ತಿಂಗಳು ಕಾಲ ಅಧಿಕಾರ ನಡೆಸಿದರು. ಉಳಿದ ಕಾಲ ಹೆಚ್ ಡಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರವಿತ್ತು. ಬಿಜೆಪಿ ಯಾವತ್ತೂ ರಾಜ್ಯದಲ್ಲಿ ಮುಂಭಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನಿಂದ ಎರಡು ಸಲ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆಪರೇಷನ್ ಕಮಲದಂತಹ ವಾಮ ಮಾರ್ಗದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ನಮ್ಮ ಶಾಸಕರಿಗೆ 25-30 ಕೋಟಿ ಹಣ ಕೊಟ್ಟು ಖರೀದಿ ಮಾಡಿದರು. ಪ್ರಧಾನಿ ಮೋದಿ 'ನಾನು ಚೌಕಿದಾರ, ಹಣ ಮುಟ್ಟಲ್ಲ ಅಂತಾರೆ ಆದರೆ ಚುನಾವಣೆಗೆ ಕೋಟ್ಯಂತರ ಹಣ ಖರ್ಚು ಮಾಡುತ್ತಾರೆ. ಆಪರೇಷನ್ ಕಮಲ ಮಾಡಲು ಸಾವಿರಾರು ಕೋಟಿ ಎಲ್ಲಿಂದ ಬಂತು? ಬಿಎಸ್ ವೈ, ಬೊಮ್ಮಾಯಿ ಸಿಎಂ ಆಗಲು ಹಣ ಎಲ್ಲಿಂದ ಬಂತು? ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಗುತ್ತಿಗೆದಾರರ ಸಂಘದ ಅದ್ಯಕ್ಷ ಮಾಡಿದ್ದರು. ಆದರೆ ತಮ್ಮ ಬಂಡವಾಳ ಬಯಲಾಗುತ್ತದೆಂದು ಪ್ರಕರಣದ ಬಗ್ಗೆ ಬೊಮ್ಮಾಯಿ ತನಿಖೆ ಮಾಡಿಸಲಿಲ್ಲ. ಈಗ ನಮ್ಮ ಸರ್ಕಾರದಲ್ಲಿ ನಾನು ಆಯೋಗ ರಚನೆ ಮಾಡಿ ತನಿಖೆ ಮಾಡಿಸುತ್ತಿದ್ದೇನೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು. ಇದೇ ವೇಳೆ ಸಮಾವೇಶದ ಮಧ್ಯೆ ಎದ್ದು ಹೊರಟವರಿಗೆ ಸಿಎಂ ಗದರಿಸಿದ ಘಟನೆ ನಡೆಯಿತು. 'ನಿಮಗೋಸ್ಕರ ನಮ್ಮಸರ್ಕಾರ ಹಣ ಕೊಟ್ಟಿದೆ ಎದ್ದು ಹೋಗ್ತೀರಾ, ಕೂಡಿ' ಎಂದು ಸಿಎಂ ಜನರತ್ತ ಸಿಡಿಮಿಡಿಗೊಂಡರು.
ಬಿಜೆಪಿ ಕೊಟ್ಟ ಯಾವುದೇ ಭರವಸೆ ಇದುವರೆಗೂ ಈಡೇರಿಸಿಲ್ಲ. ಕಪ್ಪು ಹಣ ತಂದು ತಲಾ 15ಲಕ್ಷ ರೂ.ಕೊಡ್ತೀವಿ ಅಂದರು. 15ಲಕ್ಷ ರೂ. ಹಣ ನಿಮ್ಮಅಕೌಂಟಿಗೆ ಬಂತಾ? ಬೆಲೆ ಏರಿಕೆ ಇಳಿಸುತ್ತೇವೆ, ಅಚ್ಚೇದಿನ್ ಆಯೇಗಾ ಅಂದರು ಬಂತಾ? ನರೇಂದ್ರ ಮೋದಿ ಕ್ಯೂಂ ಜೂಟ್ ಬೋಲೆ ಎಂದು ಸಿಎಂ ಪ್ರಶ್ನಿಸಿದರು. ಇನ್ನು ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇವೆಂದರು ಅದನ್ನೂ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದರು, ಒಂದು ರೂಪಾಯಿ ಸಹ ಹೆಚ್ಚು ಮಾಡಲಿಲ್ಲ. ಇಂದು ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಗಗನಕ್ಕೆ ಏರಿದೆ. ಮಿಸ್ಟರ್ ನರೇಂದ್ರ ಮೋದಿ, ಅಚ್ಚೇ ದಿನ್ ಆಯೇಗಾ? ಎಂದು ವ್ಯಂಗ್ಯ ಮಾಡಿದರು.
ಸಿದ್ದರಾಮಯ್ಯ ಅಹಂಕಾರಕ್ಕೆ ಎಂಪಿ ಚುನಾವಣೇಲಿ ಉತ್ತರ: ಎಚ್.ಡಿ.ದೇವೇಗೌಡ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರು, ಬಡವರ ಬದುಕಿಗಾಗಿ ಐದು ಗ್ಯಾರಂಟಿ ಘೋಷಣೆ ಮಾಡಿದೆವು. ಎಂಟು ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಭರವಸೆ ಈಡೇರಿಸಿಲ್ಲ, ನಾವು ನುಡಿದಂತೆ ನಡೆದಿದ್ದೇವೆ. ಚಿತ್ರದುರ್ಗ ಬಡವರ ಸಂಖ್ಯೆ ಹೆಚ್ಚು ಇರುವಂಥ ಜಿಲ್ಲೆ. ಬಿಜೆಪಿ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಿಂದ ಇಂದು ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಸಂವಿಧಾನ ಬದಲಾವಣೆಗೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಆದರೆ ನಾವು ಸಹ ನಾಶ ಆಗುತ್ತೇವೆ. ಇಂಥವರಿಗೆ ದಲಿತರು, ಹಿಂದುಳಿದವರು ಮತ ಹಾಕಬೇಕಾ? ಹೇಳಿ ನೀವೆ ಎಂದರು.