ಹಣ ಆಯ್ತು ವಿಧಾನಸೌಧ ಗೇಟ್‌ ಬಳಿ ಈಗ ಮದ್ಯದ ಬಾಟಲಿ ಪತ್ತೆ!

Published : Mar 08, 2023, 07:39 AM IST
ಹಣ ಆಯ್ತು ವಿಧಾನಸೌಧ ಗೇಟ್‌ ಬಳಿ ಈಗ ಮದ್ಯದ ಬಾಟಲಿ ಪತ್ತೆ!

ಸಾರಾಂಶ

ಲಕ್ಷಾಂತರ ಹಣ ಪತ್ತೆ, ಸಚಿವರ ಹೆಸರಿನಲ್ಲಿ ನೇಮಕಾತಿ ಪತ್ರ ರವಾನಿಸುವ ಮೂಲಕ ವಿಧಾನಸೌಧಕ್ಕೆ ಕಪ್ಪು ಚುಕ್ಕೆ ಇಟ್ಟಪ್ರಸಂಗಗಳ ಸಾಲಿಗೆ ಈಗ ಮದ್ಯದ ವಾಸನೆ ಸೇರಿಕೊಂಡಿದೆ.   

ಬೆಂಗಳೂರು (ಮಾ.08): ಲಕ್ಷಾಂತರ ಹಣ ಪತ್ತೆ, ಸಚಿವರ ಹೆಸರಿನಲ್ಲಿ ನೇಮಕಾತಿ ಪತ್ರ ರವಾನಿಸುವ ಮೂಲಕ ವಿಧಾನಸೌಧಕ್ಕೆ ಕಪ್ಪು ಚುಕ್ಕೆ ಇಟ್ಟಪ್ರಸಂಗಗಳ ಸಾಲಿಗೆ ಈಗ ಮದ್ಯದ ವಾಸನೆ ಸೇರಿಕೊಂಡಿದೆ. ಮಂಗಳವಾರ ಕೆಂಗಲ್‌ ಹನುಮಂತಯ್ಯ ಪ್ರವೇಶ ದ್ವಾರದ ಬಳಿ ವಿಧಾನಸೌಧ ಒಳಗಿನಿಂದ ಬಂದ ವ್ಯಕ್ತಿಯೊಬ್ಬರ ಬ್ಯಾಗ್‌ನಿಂದ ಮದ್ಯದ ಬಾಟಲಿ ಕೆಳಗೆ ಬಿದ್ದು ಒಡೆದು ಮದ್ಯದ ವಾಸನೆ ಕೆಲ ಕಾಲ ಹರಡಿದ ಘಟನೆ ನಡೆದಿದೆ. 

ಮದ್ಯದ ಬಾಟಲಿ ಕೆಳಗೆ ಬಿದ್ದು ಚೂರು ಚೂರಾಗುತ್ತಿದ್ದಂತೆ ವ್ಯಕ್ತಿ ಲಗುಬಗೆಯಿಂದ ಕೆಲವು ಚೂರುಗಳನ್ನು ತೆಗೆದುಕೊಂಡು ಹೊರ ಹೋಗಿದ್ದಾನೆ. ಸಮೀಪದಲ್ಲಿ ಇದ್ದ ಮಾಧ್ಯಮ ಪ್ರತಿನಿಧಿಗಳು ಬರುತ್ತಿದ್ದಂತೆ ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದಾನೆ. ತಕ್ಷಣ ಪೊಲೀಸರು ಅಲ್ಲೇ ಕೆಲಸ ಮಾಡುವ ಸಿಬ್ಬಂದಿಗಳಿಂದ ಮದ್ಯವನ್ನು ಸ್ವಚ್ಛಗೊಳಿಸಿ, ಗಾಜಿನ ಚೂರುಗಳನ್ನು ತೆಗೆಸಿದ್ದಾರೆ.

Tumakuru: ಕಾಡಿನ ಬೆಂಕಿಗೆ ಜಾತ್ರೆಗೆ ತೆರಳುತ್ತಿದ್ದ ಬಾಲಕಿ ಸಾವು!

ಸದರಿ ವ್ಯಕ್ತಿ ಮಫ್ತಿಯಲ್ಲಿದ್ದ ಪೊಲೀಸ್‌ ಎಂದು ಹೇಳಲಾಗಿದ್ದು, ಈ ಬಗ್ಗೆ ಭದ್ರತಾ ಸಿಬ್ಬಂದಿಯನ್ನು ಕೇಳಿದರೆ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ವಿಧಾನಸೌಧದ ಒಳಗೆ ಪ್ರವೇಶಿಸುವ ಮುನ್ನ ಬ್ಯಾಗ್‌ಗಳನ್ನು ತಪಾಸಣೆ ಮಾಡಿಯೇ ಒಳಗೆ ಬಿಡುತ್ತಾರೆ. ಕೆಂಗಲ್‌ ಗೇಟ್‌ನಿಂದ ಕೇವಲ ಅತಿಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಉಳಿದ ಗೇಟ್‌ಗೆ ಹೋಲಿಸಿದರೆ ತುಸು ಬಿಗಿ ಬಂದೋಬಸ್ತ್‌ ವ್ಯವಸ್ಥೆ ಇಲ್ಲಿರುತ್ತದೆ. ಹೀಗಿರುವಾಗ ವಿಧಾನಸೌಧ ಒಳಗೆ ತಪಾಸಣೆಯ ಕಣ್ಣು ತಪ್ಪಿಸಿ ಮದ್ಯ ಬಾಟಲಿ ಬಂದದ್ದಾದರೂ ಹೇಗೆ, ಯಾರ ಕಚೇರಿಯಿಂದ ಸದರಿ ವ್ಯಕ್ತಿ ತಂದಿದ್ದು ಎಂಬ ಪ್ರಶ್ನೆ ಮೂಡಿದೆ.

ರಾಜ್ಯದ ಪೊಲೀಸ್‌ ಶ್ವಾನಕ್ಕೆ ರಾಷ್ಟ್ರದ ಮಟ್ಟದ ಬೆಳ್ಳಿ ಪದಕ: ರಾಷ್ಟ್ರದ ಮಟ್ಟದ ‘ಅಖಿಲ ಭಾರತ ಪೊಲೀಸ್‌ ಕರ್ತವ್ಯ ಕೂಟ-2023’ರಲ್ಲಿ ಮಾದಕ ವಸ್ತು ಪತ್ತೇದಾರಿಕೆ ವಿಭಾಗದಲ್ಲಿ ಕರ್ನಾಟಕ ಪೊಲೀಸ್‌ ಶ್ವಾನದಳದ (ಹ್ಯಾಂಡ್ಲರ್‌) ಹೆಡ್‌ ಕಾನ್‌ಸ್ಟೇಬಲ್‌ ಸಂಜೀವ್‌ ಸಣ್ಣಕ್ಕಿ ಹಾಗೂ ಶ್ವಾನ ‘ಭೂಮಿ’ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮಧ್ಯಪ್ರದೇಶ ರಾಜ್ಯದ ಭೋಪಾಲ್‌ನಲ್ಲಿ ಕೇಂದ್ರ ಗೃಹ ಇಲಾಖೆ ಆಯೋಜಿಸಿದ್ದ ‘66ನೇ ಅಖಿಲ ಭಾರತ ಪೊಲೀಸ್‌ ಕರ್ತವ್ಯ ಕೂಟ’ದಲ್ಲಿ ಎಲ್ಲ ರಾಜ್ಯಗಳ ಪೊಲೀಸ್‌ ಇಲಾಖೆಗಳು, ಬಿಎಸ್‌ಎಫ್‌, ಎಸ್‌ಎಸ್‌ಬಿ, ಆರ್‌ಪಿಎಫ್‌, ಐಟಿಬಿಎಫ್‌ ಹಾಗೂ ಸಿಐಎಸ್‌ಎಫ್‌ ಸೇರಿದಂತೆ ಅರೆಸೇನಾ ಪಡೆಗಳು ಪಾಲ್ಗೊಂಡಿದ್ದವು. 

ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು: ವಿವಾದದ ವಿಜಯೋತ್ಸವ!

ಮಾದಕ ವಸ್ತು ಪತ್ತೆ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ರಾಜ್ಯ ಪೊಲೀಸ್‌ ಶ್ವಾನದಳದ ಹೆಡ್‌ ಕಾನ್‌ಸ್ಟೇಬಲ್ ಸಂಜೀವ ಸಣ್ಣಕ್ಕಿ ಹಾಗೂ ಶ್ವಾನ ಭೂಮಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಮಾದಕ ವಸ್ತು ಪತ್ತೆ ವಿಭಾಗದಲ್ಲಿ ವಲಯ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವ ‘ಭೂಮಿ’ ಸಾಕಷ್ಟುಅಪರಾಧ ಪ್ರಕರಣಗಳನ್ನು ಭೇದಿಸಿದೆ. ಸಂಜೀವ್‌ ಸಣ್ಣಿಕ್ಕಿ ಹಾಗೂ ಭೂಮಿಯನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಪ್ರಶಂಸಿಸಿದ್ದಾರೆ. ಗೆಲುವಿಗೆ ಡಿಸಿಪಿ ಚನ್ನಬಸಪ್ಪ ಹೊಸಮನಿ, ಇನ್ಸ್‌ಪೆಕ್ಟರ್‌ ಮಂಜುನಾಥ, ಸುರೇಶ, ಶಿವರಾಜ ಹಾಗೂ ಅಧಿಕಾರಿ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ