ಜಾತ್ರೆಗೆ ತೆರಳುತ್ತಿದ್ದ ವೇಳೆ ಬೆಟ್ಟದಲ್ಲಿ ಉರಿಯುತ್ತಿದ್ದ ಬೆಂಕಿ ಆಕಸ್ಮಿಕವಾಗಿ ತಗುಲಿದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟು ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ.
ಕೊರಟಗೆರೆ (ತುಮಕೂರು) (ಮಾ.08): ಜಾತ್ರೆಗೆ ತೆರಳುತ್ತಿದ್ದ ವೇಳೆ ಬೆಟ್ಟದಲ್ಲಿ ಉರಿಯುತ್ತಿದ್ದ ಬೆಂಕಿ ಆಕಸ್ಮಿಕವಾಗಿ ತಗುಲಿದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟು ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ. ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಇರಕಸಂದ್ರ ಕಾಲೊನಿಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಾನಸ ಎಸ್.(15) ಮೃತ ಬಾಲಕಿ. ಬೈಚೇನಹಳ್ಳಿ ಹಾಗೂ ಡಿ.ನಾಗೇನಹಳ್ಳಿಯ ತನ್ನ ಸಹಪಾಠಿಗಳ ಜೊತೆ ಈಕೆ ದೇವರಾಯನದುರ್ಗದ ರಥೋತ್ಸವಕ್ಕೆ ಹೋಗುವಾಗ ಕಾಲು ದಾರಿಯ ಕಾಡಿನ ನಡುವೆ ಕಾಣಿಸಿಕೊಂಡಿದ್ದ ಬೆಂಕಿಯಿಂದಾಗಿ ಈ ದುರ್ಘಟನೆ ಸಂಭವಿಸಿದೆ.
ಈ ವೇಳೆ ಆಕೆಯ ಜತೆಗಿದ್ದ ಇಬ್ಬರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಆದರೆ ಮಾನಸಳ ಬಟ್ಟೆಗೆ ಬೆಂಕಿ ತಗುಲಿ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಜಾತ್ರೆಗೆ ಹೋಗುತ್ತಿದ್ದವರು ಕೂಡಲೇ ಪೊಲೀಸರಿಗೆ, ಅರಣ್ಯ ಇಲಾಖೆಯವರಿಗೆ ಹಾಗೂ ಫೈರ್ ಇಂಜಿನ್‌ಗೆ ಸುದ್ದಿ ಮುಟ್ಟಿಸಿದ್ದಾರೆ. ಬೆಂಕಿ ನಂದಿಸಿ ಬಾಲಕಿಯನ್ನು ಸಿಬ್ಬಂದಿ ಸಹಾಯದಿಂದ ಹೊರತರುವಷ್ಟರಲ್ಲಿ ಶೇ.80ರಷ್ಟು ಸುಟ್ಟಗಾಯಗಳಾಗಿತ್ತು. ಕೂಡಲೇ ಆಕೆಯನ್ನು ಬೆಂಗಳೂರಿಗೆ ಆ್ಯಂಬುಲೆನ್ಸ್ ಮೂಲಕ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾಳೆ.
undefined
ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು: ವಿವಾದದ ವಿಜಯೋತ್ಸವ!
ಮಂಗಳವಾರ ಕರ್ನಾಟಕದ 43 ಅರಣ್ಯದಲ್ಲಿ ಕಾಳ್ಗಿಚ್ಚು: ಬೇಸಿಗೆ ಆರಂಭವಾಗುತ್ತಿದ್ದಂತೆ ದೇಶದ ಹಲವು ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಮಂಗಳವಾರ ಕರ್ನಾಟಕದ 43 ಅರಣ್ಯ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 11 ಕಡೆ ಬೆಂಕಿ ಪತ್ತೆಯಾಗಿದೆ. ಒಡಿಶಾದಲ್ಲಿ 142 ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದು ದೇಶದಲ್ಲೇ ಅತ್ಯಧಿಕ ಎಂದು ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಮಂಗಳವಾರ ಒಂದೇ ದಿನ ಕರ್ನಾಟಕದ 14 ಜಿಲ್ಲೆಗಳ ವಿವಿಧ ಅರಣ್ಯ ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಕಡೆ ಅರಣ್ಯದಲ್ಲಿ ಬೆಂಕಿ ಉಂಟಾಗಿದೆ. ಉಳಿದಂತೆ ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ತಲಾ 5 ಕಡೆ, ಬಳ್ಳಾರಿಯಲ್ಲಿ 4, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ 3, ಗದಗ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 2 ಕಡೆ ಹಾಗೂ ಹಾಸನ, ಹಾವೇರಿ, ತುಮಕೂರು, ಕಲ್ಬುರ್ಗಿ ಮತ್ತು ಕೋಲಾರಗಳನ್ನು 1 ಕಡೆ ಬೆಂಕಿ ಕಾಣಿಸಿಕೊಂಡಿದೆ.
ಮಂಗಳವಾರ ಮಧ್ಯಾಹ್ನದವರೆಗೆ ದೇಶದಲ್ಲಿ ಒಟ್ಟು 391 ಬೆಂಕಿ ಪ್ರಕರಣಗಳು ದಾಖಲಾಗಿದ್ದು, ಒಡಿಶಾದಲ್ಲಿ 142, ಛತ್ತೀಸ್‌ಗಢದಲ್ಲಿ 58, ಆಂಧ್ರಪ್ರದೇಶದಲ್ಲಿ 48, ತೆಲಂಗಾಣದಲ್ಲಿ 37, ಕರ್ನಾಟಕದಲ್ಲಿ 43, ಜಾರ್ಖಂಡ್‌ನಲ್ಲಿ 32 ಮತ್ತು ಮಹಾರಾಷ್ಟ್ರದಲ್ಲಿ 15 ಅರಣ್ಯಕ್ಕೆ ಬೆಂಕಿ ಬಿದ್ದಿರುವ ಘಟನೆಗಳು ವರದಿಯಾಗಿವೆ. ಇವುಗಳು ಪ್ರಾಕೃತಿಕ ಅಥವಾ ಮಾನವ ನಿರ್ಮಿತ ಅವಗಢಗಳಾಗಿರಬಹುದು ಎಂದು ಸಮೀಕ್ಷೆ ತಿಳಿಸಿದೆ. ಮಂಗಳವಾರ ಒಡಿಶಾದ 30 ಜಿಲ್ಲೆಗಳಲ್ಲಿ 12 ಜಿಲ್ಲೆಗಳ ಅರಣ್ಯ ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಮ್ಲಿಪಾಲ್ ಅರಣ್ಯದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ.
ಹಿಂದು, ಮುಸ್ಲಿಂ, ಕ್ರೈಸ್ತರನ್ನು ಸಮಾನವಾಗಿ ನೋಡಿದ ಕಾಂಗ್ರೆಸ್: ಮಲ್ಲಿಕಾರ್ಜುನ ಖರ್ಗೆ
ಕಾಫಿಯ ನಾಡಿನಲ್ಲಿ ಕಾಡ್ಗಿಚ್ಚಿನ ರೌದ್ರನರ್ತನ: ಚಿಕ್ಕಮಗಳೂರಿನ ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ನಂದಿಸಲು ಹೋದ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಿಂದಿಗೆರೆ ಗ್ರಾಮದಲ್ಲಿ ರಸ್ತೆ ಬದಿ ಬೈಕ್ ನಿಲ್ಲಿಸಿ ಬೆಂಕಿ ನಂದಿಸಲು ಹೋಗಿದ್ದ ಸಿಬ್ಬಂದಿ ಹಿಂದಿರುಗಿ ಬರುವಷ್ಟರಲ್ಲಿ ಮೂರು ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಕಾಡ್ಗಿಚ್ಚಿನಲ್ಲಿ ಬೆಂಕಿಯ ಕಿಡಿ ಹಾರಿ ಅಥವಾ ಬಿಸಿಗಾಳಿ, ಬೆಂಕಿ ಶಾಖಕ್ಕೂ ಬೈಕ್ ಸುಟ್ಟಿರಬಹುದು ಎಂದು ಶಂಕಿಸಲಾಗಿದೆ.