ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇಬ್ಬರ ಮೃತ ದೇಹ ಪತ್ತೆಯಾಗಿದೆ.
ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಏ.7): ಸಮುದ್ರದ ಅಲೆಗಳ ನಡುವೆ ಸೆಲ್ಫಿ (Selfi) ತೆಗೆಯಲು ಹೋಗಿ ಸುಳಿಯಲ್ಲಿ ಸಿಕ್ಕು ಮೂವರು ನೀರುಪಾಲಾಗಿದ್ದಾರೆ . ಉಡುಪಿ (Udupi) ಜಿಲ್ಲೆಯ ಮಲ್ಪೆಯಲ್ಲಿರುವ (Malpe) ಸೈಂಟ್ ಮೇರಿಸ್ ದ್ವೀಪದಲ್ಲಿ (saint mary island )ಈ ದುರಂತ ಸಂಭವಿಸಿದೆ . ಮುಳುಗಡೆಯಾದ ವಿದ್ಯಾರ್ಥಿಗಳು ಮೂಲತಃ ಕೇರಳದವರು !
undefined
ಗುರುವಾರ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ಕೇರಳ (Kerala) ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇಬ್ಬರ ಮೃತ ದೇಹ ಪತ್ತೆಯಾಗಿದೆ. ಇನ್ನೊಬ್ಬನ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಮುಳುಗಡೆಯಾದವರನ್ನು ಕೇರಳ ರಾಜ್ಯದ ಕೊಟ್ಟಾಯಂ ನ (Kottayam) ಮಂಗಳಂ ಇಂಜಿನಿಯರಿಂಗ್ ಕಾಲೇಜಿನ ಅಲೆನ್ ರೇಜಿ (22), ಅಮಲ್ ಸೀ ಅನಿಲ್( 22) ಮತ್ತು ಆ್ಯಂಟನಿ ಶೆಣೈ (21) ಎಂದು ಗುರುತಿಸಲಾಗಿದೆ ಇವರ ಜೊತೆ ಪ್ರವಾಸಕ್ಕೆಂದು ಕೊಟ್ಟಾಯಂ ನಿಂದ 42 ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರಾಧ್ಯಾಪಕರು ಬಂದಿದ್ದರು. ನಿನ್ನೆಯೇ ಈ ಭಾಗಕ್ಕೆ ಪ್ರವಾಸ ಬಂದವರು ರಾತ್ರಿ ತಂಗಿ ಬೆಳ್ಳಂಬೆಳಗ್ಗೆ ಸೈಂಟ್ ಮೆರೀಸ್ ಐಲ್ಯಾಂಡ್ ಗೆ ಹೋಗಿದ್ರು.
ನೀರು ಪಾಲದ ವಿದ್ಯಾರ್ಥಿಗಳ ಪೈಕಿ ಓರ್ವ ಸೆಲ್ಫಿ ತೆಗೆಯುವ ಸಲುವಾಗಿ ದ್ವೀಪದ ಉತ್ತರ ಭಾಗಕ್ಕೆ ತೆರಳಿದ್ದ. ಸೈಂಟ್ ಮೇರಿಸ್ ದ್ವೀಪದ ಈ ಪರಿಸರ ಅಪಾಯಕಾರಿಯಾಗಿದ್ದು ಅಲ್ಲಿ ಎಚ್ಚರಿಕೆಯ ಕೆಂಪು ಬಾವುಟವನ್ನು ಕೂಡ ಹಾಕಲಾಗಿದೆ. ಆದರೆ ಇದ್ಯಾವುದಕ್ಕೂ ಗಮನ ನೀಡಿದ ವಿದ್ಯಾರ್ಥಿಗಳು ಮೋಜು-ಮಸ್ತಿಗೆ ಎಂದು ಈ ಪರಿಸರಕ್ಕೆ ತೆರಳಿದ್ದರು.
ಉಡುಪಿಯಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ಹೊಡೆದಾಟ: ವಿಡಿಯೋ ವೈರಲ್!
ಸೆಲ್ಫಿ ತೆಗೆಯಲು ಹೋದ ಯುವಕ ಇದ್ದಕ್ಕಿದ್ದಂತೆ ನೀರಿಗೆ ಬಿದ್ದಿದ್ದಾನೆ, ಆತನನ್ನು ರಕ್ಷಿಸಲು ಮತ್ತಿಬ್ಬರು ನೀರಿಗೆ ಧುಮುಕಿದ್ದಾರೆ. ಆದರೆ ಸಮುದ್ರದ ಸುಳಿಯಲ್ಲಿ ಮೂರು ಜನ ಮುಳುಗಿದ್ದಾರೆ. ಮೂವರನ್ನು ಅಲೆಗಳು ಹೊತ್ತೊಯ್ದಿವೆ.
ಪೊಲೀಸ್ ಮೇಲಾಧಿಕಾರಿಗಳ ಮನೆ ಸೇವೆ ಮಾಡುವ ಆರ್ಡರ್ಲಿ ಪದ್ಧತಿ ಬೇಡ, ಉಡುಪಿಯಿಂದ ಅಭಿಯಾನ
ಸೈಂಟ್ ಮೇರಿಸ್ ದ್ವೀಪ ದಲ್ಲಿರುವ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಆದರೆ ಮುಳುಗಿದ ಯುವಕರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮುಳುಗಡೆಯಾದ ವಿದ್ಯಾರ್ಥಿಗಳ ಪೈಕಿ ಇಬ್ಬರ ಶವ ದೊರೆತಿದ್ದು ಮತ್ತೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.