ಬೆಲೆ ಏರಿಕೆ ಖಂಡಿಸಿ ತಾಲೂಕು ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ

By Suvarna News  |  First Published Apr 7, 2022, 6:09 PM IST

ದೇಶದಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.


ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಏ.7):  ಪೆಟ್ರೋಲ್ (Petrol), ಡಿಸೇಲ್ (Diesel), ಗ್ಯಾಸ್ (Gas) ಸೇರಿದಂತೆ ದಿನದಿಂದ ದಿನಕ್ಕೆ ಅಗತ್ಯ ವಸ್ತಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು (Cogress Workers) ತಾಲೂಕು ಕಚೇರಿ (Taluk Office) ಮುಂದೆ ಪ್ರತಿಭಟನೆ (Protest) ನಡೆಸಿದರು. ತಾಲೂಕು ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. 

Tap to resize

Latest Videos

ಕಛೇರಿ ಮುಂಭಾಗ ದ್ವಿಚಕ್ರ ವಾಹನ, ಖಾಲಿ ಗ್ಯಾಸ್ ಸಿಲಿಂಡರ್ ಇಟ್ಟು ಪ್ರತಿಭಟನೆ: ಪೆಟ್ರೋಲ್ 73 ರೂಪಾಯಿ, ಡೀಸೆಲ್ 36 ರೂಪಾಯಿ, ಅಡುಗೆ ಅನಿಲ 600 ರೂಪಾಯಿ ಹೆಚ್ಚಾಗಿದೆ. ಇವುಗಳ ಜೊತೆ ವಿವಿಧ ಮೂಲಭೂತ ಸೌಲಭ್ಯಗಳ ದರವೂ ಏರಿಕೆಯಾಗಿದೆ. ಇದು ಹೀಗೆ ಮುಂದುವರೆದರೆ ಬಡ ಹಾಗೂ ಮಧ್ಯಮ ವರ್ಗದ ಜನ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಡುತ್ತಿರೋ ಸರ್ಕಾರ ತಮ್ಮ ವೈಪಲ್ಯವನ್ನ ಮುಚ್ಚಿಕೊಳ್ಳಲು ಬೇರೆ ವಿಷಯದ ಕಡೆ ಜನರ ಗಮನ ಹರಿಸುವಂತೆ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಬಿ ಎನ್ ಸಂದೀಪ್  ಕಿಡಿಕಾರಿದ್ದಾರೆ. 

Chikkamagaluru ಹಣಕಾಸಿನ ವಿಚಾರಕ್ಕೆ ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ ‌
ಸರ್ಕಾರ ಜಾತಿ-ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಜನರ ಗಮನವನ್ನ ಬೇರೆಡೆ ಸೆಳೆಯುತ್ತಿದೆ ಎಂದು ಧಿಕ್ಕಾರ ಕೂಗಿದರು. ಶಾಸಕ ಸಿ.ಟಿ.ರವಿ ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಡಿಪಿಎ ಗೊಬ್ಬರಕ್ಕೆ 150 ರೂಪಾಯಿ ಏರಿಕೆ ಮಾಡಿದೆ. ಎನ್.ಕೆ.ಪಿ.ಎಸ್. ಗೊಬ್ಬರ 110 ರೂಪಾಯಿ ಜಾಸ್ತಿ ಮಾಡಿದೆ.

ಚಿಕ್ಕಮಗಳೂರಿನಲ್ಲಿ ಚಿಲ್ಲರೆ ಹಣಕ್ಕಾಗಿ ಬಾರ್ ಕ್ಯಾಶಿಯರ್ ಕೊಲೆ

ಗೊಬ್ಬರಕ್ಕೆ 5 ಪರ್ಸೆಂಟ್ ಜಿಎಸ್‍ಟಿ, ಕಳೆನಾಶಕಕ್ಕೆ 18 ಪರ್ಸೆಂಟ್ ಜಿಎಸ್‍ಟಿ ಹಾಗೂ ಕೃಷಿ ಸಲಕರಣೆಗೆ 12 ಪರ್ಸೆಂಟ್ ಜಿಎಸ್‍ಟಿ ಹಾಕಿದೆ. ಸರ್ಕಾರದ ಈ ರೈತ ವಿರೋಧಿ ಧೋರಣೆಯಿಂದ ರೈತರು ಕೃಷಿ ಮಾಡುವುದೇ ಕಷ್ಟವಾಗಿದೆ, ಸರ್ಕಾರದ ಈ ರೈತ ವಿರೋಧಿಧೋರಣೆಯಿಂದಲೇ ಇಂದು ರೈತರು ಕೃಷಿಯತ್ತ ಮುಖ ಮಾಡದಂತಾಗಿದೆ ಎಂದು ಕಿಡಿಕಾರಿದರು. ತಾಲೂಕು ಕಚೇರಿ ಮುಂದೆ ಬೈಕ್ ನಿಲ್ಲಿಸಿ ಅದರ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

click me!