
ಬೆಂಗಳೂರು (ಡಿ.5) : ಕೆಂಗೇರಿ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಸತತ ನಾಲ್ಕನೇ ದಿನ ಚಿರತೆ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಿ ಗಸ್ತು ನಡೆಸಿದ್ದರೂ ಚಿರತೆ ಜಾಡು ಮಾತ್ರ ಪತ್ತೆಯಾಗಲಿಲ್ಲ.
ಇನ್ನೊಂದೆಡೆ ಬೆಂಗಳೂರಿನ ಹೊರವಲಯದಲ್ಲಿ ಅರಣ್ಯ ಸಮೀಪದಲ್ಲಿರುವ ನಿವಾಸಿಗಳಿಗೆ ಚಿರತೆಯಿಂದ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಒಳಗೊಂಡ ಸಲಹಾ ಪತ್ರವನ್ನು ಅರಣ್ಯ ಇಲಾಖೆ ಹೊರಡಿಸಿದೆ. ಮಾತ್ರವಲ್ಲದೆ, ಚಿರತೆ ಕಾಣಿಸಿಕೊಂಡ ಸ್ಥಳಗಳ ಸುತ್ತಮುತ್ತ ಬಡಾವಣೆಗಳಲ್ಲಿ ರಾತ್ರಿ ಅವಧಿಯಲ್ಲಿ ಅರಣ್ಯ ಸಿಬ್ಬಂದಿ ಗಸ್ತು ತಿರುಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಬೆಂಗ್ಳೂರಲ್ಲಿ ಇನ್ನೂ ಸಿಗದ ಚಿರತೆಗಳು: ಗಾರ್ಡನ್ ಸಿಟಿಯಲ್ಲಿ ಹೆಚ್ಚಿದ ಆತಂಕ
ಗುರುವಾರದಿಂದ ತುರಹಳ್ಳಿ ಸಮೀಪದ ಕಾಡಿನಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಆರಂಭವಾಗಿದ್ದು, ಭಾನುವಾರ ತಂಡಗಳ ಸಂಖ್ಯೆ ಐದಕ್ಕೆ ಹೆಚ್ಚಿಸಲಾಗಿತ್ತು. ಬಿಜಿಎಸ್ ಕ್ಯಾಂಪಸ್ ಹಿಂಭಾಗ, ಇಂಟಿಗ್ರೇಟೆಡ್ ಕಮ್ಯುನಿಟಿ ಟೌನ್‌ಶಿಪ್, ಲಕ್ಷ್ಮಿ ದೇವಸ್ಥಾನ ಸುತ್ತಮುತ್ತ, ಹೆಮ್ಮಿಗೆಪುರ ಹಾಗೂ ಶ್ರೀಧರ ಗುಡ್ಡದ ಸುತ್ತಮುತ್ತ ತಂಡಗಳು ಕಾರ್ಯಾಚರಣೆ ನಡೆಸಿದವು.
ಗಾಣಕಲ್ ಗ್ರಾಮದ ತೋಟ, ಇಂಟಿಗ್ರೇಟೆಡ್ ಕಮ್ಯುನಿಟಿ ಟೌನ್‌ಶಿಪ್ ಬಳಿ ತಲಾ ಒಂದು ಪಂಜರ ಇಟ್ಟಿದ್ದು, ಚಿರತೆ ಸೆರೆ ಸಿಕ್ಕಿಲ್ಲ. ಹಗಲಿನಲ್ಲಿ ಸಂಚಾರ ಸಾಕಷ್ಟುವಿರಳವಾಗಿದ್ದು, ರಾತ್ರಿ ಅವಧಿಯಲ್ಲಿ ಗಸ್ತು ಹೆಚ್ಚಿಸಲಾಗಿದೆ ಎಂದು ಕಗ್ಗಲಿಪುರ ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಗೋವಿಂದರಾಜು ಹೇಳಿದರು.
ಮಾರ್ಗ ಬದಲಿಸಿದ ವಿದ್ಯಾರ್ಥಿಗಳು
ಚಿರತೆ ಭಯದಿಂದ ಜಟ್ಟಗರಹಳ್ಳಿ ಸರ್ಕಾರಿ ಶಾಲೆ ಮಕ್ಕಳು ಓಡಾಡುತ್ತಿದ್ದ ಶ್ರೀಧರ ಗುಡ್ಡದ ರಸ್ತೆಯನ್ನು ಬದಲಿಸಲಾಗಿದೆ. ಸಮೀಪದ 100 ಅಡಿ ರಸ್ತೆಯನ್ನು ಅವಲಂಬಿಸಿದ್ದಾರೆ. ಜತೆಗೆ ಚಿನ್ಮಯ, ರಾಷ್ಟೊ್ರೕತ್ಥಾನ ಶಾಲೆಗೆ ಹೋಗುವ ಮಕ್ಕಳು ಕಾಡುರಸ್ತೆ ಬಿಟ್ಟು ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ವಾಯುವಿಹಾರಿಗಳ ಸಾಕಷ್ಟುತಗ್ಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.
Bengaluru: ಸಿಲಿಕಾನ್ ಸಿಟಿಯಲ್ಲಿ ಚಿರತೆಗಳು ಪ್ರತ್ಯಕ್ಷ, ಆತಂಕ
ಮುನ್ನೆಚ್ಚರಿಕೆಗೆ ಸೂಚನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ