Kichcha Sudeep: ಕಟೀಲು ದೇವಸ್ಥಾನಕ್ಕೆ ಕಿಚ್ಚ ಸುದೀಪ್‌ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

By Govindaraj SFirst Published Dec 5, 2022, 2:40 AM IST
Highlights

ಬೆಳೆಯುವುದಕ್ಕೆ ಆತುರ ಬೇಡ, ಆರಾಮವಾಗಿ ಬೆಳೆಯಿರಿ, ಎಂಜಾಯ್‌ ಮಾಡಿ. ಸ್ಕೂಲ್‌ ಚೆನ್ನಾಗಿ ಬೆಳೆಯಬೇಕೆಂದರೆ ಅದು ವಿದ್ಯಾರ್ಥಿಗಳಿಂದಲೇ. ಈ ಜೀವನವನ್ನು ಚೆನ್ನಾಗಿ ಎಂಜಾಯ್‌ ಮಾಡಿ, ಮತ್ತೆ ಈ ಜೀವನ ಬರಲ್ಲ. ಸಮಯ ಅನ್ನೋದು ಮತ್ತೆ ಸಿಗಲ್ಲ. ಇದ್ದಾಗ ಜಸ್ಟ್‌ ಎಂಜಾಯ್‌... ಹೀಗೆ ಹೇಳಿದವರು ಖ್ಯಾತ ಚಿತ್ರನಟ, ನಿರ್ದೇಶಕ ಕಿಚ್ಚ ಸುದೀಪ್‌.

ಮೂಲ್ಕಿ (ಡಿ.05): ಬೆಳೆಯುವುದಕ್ಕೆ ಆತುರ ಬೇಡ, ಆರಾಮವಾಗಿ ಬೆಳೆಯಿರಿ, ಎಂಜಾಯ್‌ ಮಾಡಿ. ಸ್ಕೂಲ್‌ ಚೆನ್ನಾಗಿ ಬೆಳೆಯಬೇಕೆಂದರೆ ಅದು ವಿದ್ಯಾರ್ಥಿಗಳಿಂದಲೇ. ಈ ಜೀವನವನ್ನು ಚೆನ್ನಾಗಿ ಎಂಜಾಯ್‌ ಮಾಡಿ, ಮತ್ತೆ ಈ ಜೀವನ ಬರಲ್ಲ. ಸಮಯ ಅನ್ನೋದು ಮತ್ತೆ ಸಿಗಲ್ಲ. ಇದ್ದಾಗ ಜಸ್ಟ್‌ ಎಂಜಾಯ್‌... ಹೀಗೆ ಹೇಳಿದವರು ಖ್ಯಾತ ಚಿತ್ರನಟ, ನಿರ್ದೇಶಕ ಕಿಚ್ಚ ಸುದೀಪ್‌. ಕಟೀಲು ದೇಗುಲದ ಶಿಕ್ಷಣ ಸಂಯೋಜನೆಯಲ್ಲಿ ನಡೆಯುತ್ತಿರುವ ನುಡಿಹಬ್ಬದಲ್ಲಿ ಭಾನುವಾರ ಕಟೀಲು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸುದೀಪ್‌ ಸಂವಾದ ನಡೆಸಿದರು.

ಸುದೀಪ್‌ ಮಾತನಾಡಲು ಮುಂದಾಗತ್ತಿದ್ದಂತೆಯೇ, ವೇದಿಕೆ ಎದುರು ಕುಳಿತಿದ್ದವರು ಕಿಚ್ಚ... ಕಿಚ್ಚ.. ಕಿಚ್ಚ.... ಎಂದು ಕೂಗುತ್ತಿದ್ದರು. ಈ ವೇಳೆ ನಾನು ಕಿಚ್ಚ ಸುದೀಪ್‌... ಹುಚ್ಚ ಸುದೀಪ್‌ ಅಲ್ಲ ತಾನೆ ಎಂದು ತಮಾಷೆಯಗಿ ಹೇಳಿದ ಸುದೀಪ್‌, ನನ್ನ ಅಕ್ಕನಿಂದಾಗಿ ಕಟೀಲು ದೇವಸ್ಥಾನಕ್ಕೆ ಮೊದಲ ಸಲ ಬರುತ್ತಿದ್ದೇನೆ. ಇಲ್ಲಿ ಕಾಲಿಡುತ್ತಿದ್ದಾಗಲೇ ಪಾಸಿಟಿವ್‌ ಫೀಲಿಂಗ್‌ ಕಂಡೆ. ತುಂಬ ಸರಳವಾದ ದೇವಸ್ಥಾನ. ಆದರೆ ತುಂಬಾ ಚೆನ್ನಾಗಿರುವ, ಮತ್ತೆ ಮತ್ತೆ ಬರಬೇಕು ಎನಿಸುವಂತಿರುವ ದೇವಸ್ಥಾನ ಎಂದರು. ಕೆಲಸ ಯಾವಾಗಲೂ ಸಿಕ್ಕಾಪಟ್ಟೆಇರುತ್ತದೆ, ಕೆಲಸ ಮಾಡೋದು ಯಾವಾಗಲೂ ಇರುತ್ತದೆ. ಆದರೆ ನಿಮ್ಮಂತಹವರ ಮುಖ ನೋಡಿ ಅಭಿಮಾನ ಕಂಡು ಮತ್ತೆ ಕೆಲಸ ಮಾಡುವಂತಹ ಮನಸ್ಸಾಗುತ್ತದೆ. 

ಸಂಭಾವನೆ ಪಡೆಯದೇ ಪುಣ್ಯಕೋಟಿ ರಾಯಭಾರಿ ಆದ Kichcha Sudeep: ಪ್ರಭು ಚವ್ಹಾಣ್

ಇಷ್ಟು ಪ್ರೀತಿ ಕೊಟ್ಟು ಹಾರೈಸಿದ್ದಕ್ಕೆ ಥ್ಯಾಂಕ್ಸ್‌ ಎಂದರು. ವಿದ್ಯಾರ್ಥಿಗಳು ಏನಾಗಲಿ, ಮುಂದೆ ಸಾಗೂ ನೀ... ಬಯಸ್ಸಿದ್ದೆಲ್ಲ ಸಿಗದು ಬಾಳಲಿ ಬಯಸ್ಸಿದ್ದೆಲ್ಲ ಸಿಗದು ಬಾಳಲಿ.... ಹಾಡನ್ನು ಹಾಡಿದರು. ವಿದ್ಯಾರ್ಥಿನಿ ಗಾಯತ್ರಿ ಕೇಳಿದ ‘ತಾಯಿನಾಡು ತುಳುನಾಡು, ಈ ತುಳುನಾಡಿನ ಬಗ್ಗೆ ಏನು ಅಭಿಪ್ರಾಯ?’ ಎಂಬ ಪ್ರಶ್ನೆ ಕೇಳಿದಾಗ, ನೀವೇ ಹೇಳಿದ್ರಲ್ಲ ತುಳುನಾಡು ನನ್ನ ತಾಯಿ ಅಂತ. ತಾಯಿ ಬಗ್ಗೆ ಅಭಿಪ್ರಾಯ ಹೇಳಬಾರದು. ಪ್ರೀತಿ ಇರಬೇಕು ಎಂದರು. ನಿಮ್ಮ ವಿದ್ಯಾರ್ಥಿ ಜೀವನದ ಸವಿ ನೆನಪು ಏನು ಎಂದು ವಿದ್ಯಾರ್ಥಿ ಆಕಾಶ್‌ ಕೇಳಿದಾಗ, ನಾನು ಪಾಸಾಗಿದ್ದೇನೆ ಸಾರ್‌, ಫೈಲಾಗಿಲ್ಲ ಎಂದು ಕಿಚ್ಚ ನಕ್ಕರು. ವಿದ್ಯಾರ್ಥಿಗಳು ರಚಿಸಿದ ಸುದೀಪ್‌ ಅವರ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟು ಹಸ್ತಾಕ್ಷರ ಪಡೆದರು.

ತಾಯಿಯ ನೆಲವನ್ನು ಗೌರವಿಸಬೇಕು: ಕನ್ನಡ ಭಾಷೆಯು ಅಪೂರ್ವ ಸೊಗಡನ್ನು ಹೊಂದಿದ್ದು ತಾಯಿ ನೆಲವನ್ನು ಗೌರವಿಸಬೇಕು. ಜೀವನದಲ್ಲಿ ಶಾಲಾ ದಿನಗಳು ಮತ್ತೆ ಸಿಗುವುದಿಲ್ಲ. ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಿ ಶಿಕ್ಷಣದ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಚಲನಚಿತ್ರ ನಟ ಕಿಚ್ಚ ಸುದೀಪ್‌ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಭ್ರಮರ ಇಂಚರ ನುಡಿಹಬ್ಬದಲ್ಲಿ ಮೂರನೇ ದಿನದ ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ಕರ್ನಾಟಕ ವಿಷಯದ ಬಗ್ಗೆ ಅವರು ಮಾತನಾಡಿದರು.

ಬಹುಶಃ Kichchaನಿಗೆ ಈ ಬಿಗ್‌ಬಾಸ್ ಸ್ಪರ್ಧಿಯಷ್ಟು ಯಾರೂ ಕಾಡಿಲ್ಲ!

ದ.ಕ. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಮಾತನಾಡಿ ಗುರು ಹಿರಿಯರನ್ನು ಗೌರವಿಸಬೇಕು. ಎಲ್ಲರಲ್ಲೂ ಪ್ರತಿಭೆಯಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು. ಕಟೀಲು ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಮೊಕ್ತೇಸರ ಸನತ್‌ ಕುಮಾರ್‌ ಹೆಗ್ಡೆ ಕೊಡೆತ್ತೂರುಗುತ್ತು, ಬಿಪಿನ್‌ ಚಂದ್ರ ಶೆಟ್ಟಿಕೊಡೆತ್ತೂರುಗುತ್ತು, ಸದಾನಂದ ಆಸ್ರಣ್ಣ, ವಿನಿತ್‌ ರಾಜ್‌ ಶೆಟ್ಟಿ, ಸಂಚಿತ್‌ ಸಂಜೀವ್‌, ಉದ್ಯಮಿ ಮೋಹನ್‌ ಕುಮಾರ್‌ ಮಂಗಳೂರು, ಪ್ರದ್ಯುಮ್ನ ರಾವ್‌ ಶಿಬರೂರು, ದೇವಸ್ಥಾನದ ವಿಶೇಷ ಅಧಿಕಾರಿ ಮೋಹನ್‌ ರಾವ್‌ ಉಪಸ್ಥಿತರಿದ್ದರು. ಸಾಯಿನಾಥ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಟೀಲು ದೇವಸ್ಥಾನ ಭೇಟಿ ಹಾಗೂ ನುಡಿಹಬ್ಬ ಕಾರ್ಯಕ್ರಮದ ವೇದಿಕೆಯ ಬಳಿ ಸಾವಿರಾರೂ ಅಭಿಮಾನಿಗಳು ಕಿಚ್ಚ ಸುದೀಪ್‌ ಅವರೊಂದಿಗೆ ಸಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

click me!