ಡಾಲಿ ನಿರ್ಮಾಣದ ಚಿತ್ರದ ನಟನಿಗೆ ಶಾಕ್, ಅಭಿಮಾನಿ ಕೊಟ್ಟ ಮಚ್ಚು ಹಿಡಿದು ಎಡವಟ್ಟು, ಪೂಲೀಸರಿಂದ ನೋಟೀಸ್?

Published : Feb 18, 2026, 10:55 AM IST
Legal Trouble Actor prakyath  in Daali Dhananjaya s Film Gets Police Notice Over Machete Stunt

ಸಾರಾಂಶ

ಡಾಲಿ ಧನಂಜಯ್ ನಿರ್ಮಾಣದ 'JC: The University' ಚಿತ್ರದ ನಾಯಕ ನಟ ಪ್ರಖ್ಯಾತ್, ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ ನೀಡಿದ ಮಚ್ಚನ್ನು ಹಿಡಿದು ಪೋಸ್ ನೀಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಪೊಲೀಸರು ನಟನಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರು (ಫೆ.18): ಡಾಲಿ ಧನಂಜಯ್ ನಿರ್ಮಾಣದ 'JC: The University' ಚಿತ್ರದ ನಾಯಕ ನಟ ಪ್ರಖ್ಯಾತ್ ಯಾವುದೋ ಗಳಿಗೆಯಲ್ಲಿ ಏನೋ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ವಿರೇಶ್ ಚಿತ್ರಮಂದಿರಕ್ಕೆ ಸಿನಿಮಾ ವೀಕ್ಷಣೆಗೆಂದ ಹೋಗಿದ್ರು. ಆದರೆ ಈ ಸಂದರ್ಭದಲ್ಲಿ ನಡೆದ ಘಟನೆಯೊಂದು ಸದ್ಯ ಕಾನೂನು ಸಂಕಷ್ಟಕ್ಕೆ ಸಿಲುಕಿಸಿದೆ. ಅಭಿಮಾನಿಗಳು ನೀಡಿದ ವಸ್ತುವನ್ನು ಹಿಡಿದಿದ್ದೇ ನಟನಿಗೆ ಮುಳುವಾಗಿದೆ ನೋಡಿ.

ಅನಾಮಿಕ ವ್ಯಕ್ತಿ ನೀಡಿದ ಮಚ್ಚು

ಥಿಯೇಟರ್‌ಗಳಿಗೆ ನಟರು ಆಗಮನಿಸಿದಾಗ ಅಭಿಮಾನಿಗಳು ಮುತ್ತಿಕ್ಕುವುದು, ಉಡುಗೊರೆ, ವಸ್ತುಗಳನ್ನ ಕೊಟ್ಟು ಪೋಸ್ ಕೊಡಿಸುವುದು ಸಾಮನ್ಯ. ಅದೇ ರೀತಿ ನಟ ಪ್ರಖ್ಯಾತ್ ವಿರೇಶ್ ಥಿಯೇಟರ್‌ಗೆ ಆಗಮಸಿದಾಗ ಅನಾಮಿಕ ವ್ಯಕ್ತಿಯೊಬ್ಬರು ಏಕಾಏಕಿ ನಟನ ಬಳಿ ಬಂದು ಪ್ರಖ್ಯಾತ್ ಕೈಗೆ ಮಚ್ಚನ್ನು ನೀಡಿದ್ದಾನೆ. ಮುಂದಾಗಬಹುದಾದ ತೊಂದರೆ ಊಹಿಸದ ನಟ ಸಿನಿಮಾ ಸ್ಟೈಲ್‌ನಲ್ಲಿ ಅದನ್ನು ಹಿಡಿದು ಅಭಿಮಾನಿಗಳತ್ತ ತೋರಿಸಿದ್ದರು. ಈ ದೃಶ್ಯ ಅಲ್ಲೇ ನೆರೆದಿದ್ದ ಅಭಿಮಾನಿಗಳು ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಬಿಟ್ಟಿದ್ದಾರೆ. ಈ ಘಟನೆಯ ದೃಶ್ಯವೇ ಪೊಲೀಸರ ಗಮನಕ್ಕೆ ಬಂದು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಸಿದೆ.

ಪೊಲೀಸ್ ನೋಟೀಸ್ ನೀಡಲು ಸಿದ್ಧತೆ

ಸಾರ್ವಜನಿಕ ಪ್ರದೇಶದಲ್ಲಿ ಆಯುಧ ಹಿಡಿದು ಪೋಸ್ ನೀಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಗೋವಿಂದರಾಜನಗರ ಪೊಲೀಸರು ನಟ ಪ್ರಖ್ಯಾತ್‌ಗೆ ನೋಟೀಸ್ ನೀಡಲು ಮುಂದಾಗಿದ್ದಾರೆ. ಸಾರ್ವಜನಿಕರಲ್ಲಿ ಭಯ ಭೀತಿ ಹುಟ್ಟಿಸುವ ಅಥವಾ ತಪ್ಪು ಸಂದೇಶ ನೀಡುವ ಇಂತಹ ಕೃತ್ಯಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಪೊಲೀಸರು ಸೂಚಿಸುವ ಸಾಧ್ಯತೆ ಇದೆ.

ಮರದ ಮಚ್ಚು ಎಂದು ತಿಳಿದರೂ ಕ್ರಮ

ಪ್ರಾಥಮಿಕ ತನಿಖೆಯಲ್ಲಿ ಅಭಿಮಾನಿ ನೀಡಿದ ಆ ವಸ್ತುವು ಕಬ್ಬಿಣದ ಮಚ್ಚು ಅಲ್ಲ, ಬದಲಾಗಿ ಮರದಿಂದ ಮಾಡಿದ್ದ ಮಚ್ಚು ಎಂದು ತಿಳಿದುಬಂದಿದೆ. ಆದರೂ ಸಹ, ಮೇಲ್ನೋಟಕ್ಕೆ ಅದು ಮಾರಕಾಸ್ತ್ರದಂತೆ ಕಂಡಿದ್ದರಿಂದ ಮತ್ತು ಸಾರ್ವಜನಿಕರ ಮೇಲೆ ಬೀರುವ ಪ್ರಭಾವವನ್ನು ಗಮನಿಸಿ ಪೊಲೀಸರು ಕಾನೂನು ಪ್ರಕ್ರಿಯೆಯ ಭಾಗವಾಗಿ ಈ ನೋಟೀಸ್ ನೀಡಲು ತಯಾರಿ ನಡೆಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾಧ್ಯಮಗಳನ್ನು ಹತ್ತಿಕ್ಕಲು ಮುಂದಾಯ್ತಾ ಸರ್ಕಾರ? ವಿಧಾನಸೌಧದಲ್ಲಿ 'ಫ್ರೀಡಂ ಆಫ್ ಪ್ರೆಸ್'ಗೆ ಬ್ರೇಕ್!
ಮಂಗಳೂರು ಪೊಲೀಸರಿಗೆ ವರ್ಷದೊಳಗೆ 100 ವಸತಿಗೃಹ: ಗೃಹಸಚಿವ ಪರಮೇಶ್ವರ್ ಭರವಸೆ