Valentine s Day Special : ಪ್ರೇಮಿಗಳ ದಿನಕ್ಕೆ ಬೆಂಗ್ಳೂರಿಂದ 6 ಕೋಟಿ ಗುಲಾಬಿ ರಫ್ತು!

Kannadaprabha News, Ravi Janekal |   | Kannada Prabha
Published : Feb 18, 2026, 09:21 AM IST
Valentine s Day Special Bengaluru Exports a Record 6 Crore Roses Worldwide

ಸಾರಾಂಶ

ಪ್ರೇಮಿಗಳ ದಿನದ ಪ್ರಯುಕ್ತ ಬೆಂಗಳೂರಿನಿಂದ 6 ಕೋಟಿ ಗುಲಾಬಿ ಹೂವುಗಳನ್ನು ದೇಶ-ವಿದೇಶಗಳಿಗೆ ರಫ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಡೆದ ಈ ಬೃಹತ್ ರಫ್ತು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.38ರಷ್ಟು ಹೆಚ್ಚಳ. ಸಿಂಗಾಪುರ, ಲಂಡನ್, ದೆಹಲಿ, ಕೋಲ್ಕತಾದಂತಹ ನಗರಗಳಿಗೆ ಹೂವುಗಳು ಪೂರೈಕೆ

ಬೆಂಗಳೂರು (ಫೆ.18): ಫೆ.14ರ ವ್ಯಾಲೆಂಟೈನ್ಸ್‌ ಡೇ (ಪ್ರೇಮಿಗಳ ದಿನ)ಗೆ ಭಾರತದ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಸುಂದರ ಗುಲಾಬಿ ಹೂವುಗಳಿಗೆ ಭರ್ಜರಿ ಬೇಡಿಕೆ ವ್ಯಕ್ತವಾಗಿದ್ದು, ಬೆಂಗಳೂರಿನಿಂದ 6 ಕೋಟಿಯಷ್ಟು ಭಾರೀ ಪ್ರಮಾಣದ ಹೂವುಗಳನ್ನು ಪೂರೈಸಲಾಗಿದೆ. ಇಷ್ಟು ಹೂವುಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರವಾನಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿವಿಧ ರಾಜ್ಯಗಳ 47 ನಗರಗಳಿಗೆ ಮತ್ತು 26 ವಿದೇಶಗಳಿಗೆ ಭರ್ಜರಿ 6 ಕೋಟಿ ಗುಲಾಬಿ ಹೂವುಗಳನ್ನು ಪೂರೈಸಲಾಗಿದೆ. ಇವುಗಳ ತೂಕ ಒಟ್ಟು 2700 ಟನ್‌ಗಳಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಹೂವು ರಫ್ತಿನ ಪ್ರಮಾಣ ಶೇ.38ರಷ್ಟು ಮತ್ತು ತೂಕದಲ್ಲಿ ಶೇ.64ರಷ್ಟು ಹೆಚ್ಚಳ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ವಿದೇಶಗಳ ಪೈಕಿ ಸಿಂಗಾಪುರ, ಲಾಸ್‌ ಏಂಜಲೀಸ್‌, ಕುವೈತ್‌, ಲಂಡನ್‌, ಡಲ್ಲಾಸ್‌, ಟೊರಾಂಟೋ, ಓರ್ಲಾಂಡೋ, ಕೌಲಾಲಂಪುರ, ಅಬುಧಾಬಿ ಹೆಚ್ಚಿನ ಹೂವು ರಫ್ತಾದ ದೇಶಗಳು ಎನಿಸಿವೆ.

ದೇಶದೊಳಗೂ ಭಾರೀ ಬೇಡಿಕೆ:

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತದ ಹಲವು ನಗರಗಳಿಗೆ ಅಂದಾಜು 2402 ಟನ್‌ನಷ್ಟು ಗುಲಾಬಿ ಹೂವುಗಳನ್ನು ಕಳುಹಿಸಲಾಗಿದೆ. ಕಳೆದ ಬಾರಿಗಿಂತ ಶೇ.79ರಷ್ಟು ಹೆಚ್ಚು ಹೂವುಗಳನ್ನು ಕಳಿಸಲಾಗಿದೆ. ದೆಹಲಿ ಹಾಗೂ ಕೋಲ್ಕತಾದಿಂದ ಈ ಬಾರಿ ಹೆಚ್ಚಿನ ಬೇಡಿಕೆ ಇತ್ತು. ಇನ್ನು, ಮುಂಬೈ, ಗುವಾಹಟಿ, ಜೈಪುರದಿಂದಲೂ ಉತ್ತಮ ಬೇಡಿಕೆ ಕಂಡುಬಂತು ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಣೆ ಮೂಲಸೌಕರ್ಯದಲ್ಲಿ ಆಗಿರುವ ವಿಸ್ತರಣೆಯಿಂದಾಗಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ. ಆಧುನಿಕ ವ್ಯವಸ್ಥೆಯಿಂದಾಗಿ ಹೂವುಗಳು ತಾಜಾತನ ಉಳಿಸಿಕೊಳ್ಳುವಂತೆ ಎಚ್ಚರ ವಹಿಸಲು ಅನುಕೂಲವಾಯಿತು. ಹವಾನಿಯಂತ್ರಿತ ದಾಸ್ತಾನು, ರಿಯಲ್‌ ಟೈಮ್‌ ಟ್ರ್ಯಾಕಿಂಗ್‌, ಆಧುನಿಕ ತಂತ್ರಜ್ಞಾನ ಬಳಕೆಯಿಂದ ಪ್ರತಿ ಸಾಗಣೆಯು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಾಯಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಳೂರು ಪೊಲೀಸರಿಗೆ ವರ್ಷದೊಳಗೆ 100 ವಸತಿಗೃಹ: ಗೃಹಸಚಿವ ಪರಮೇಶ್ವರ್ ಭರವಸೆ
ಆಡಳಿತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಾಂತಿ: ಇನ್ನು ಸರ್ಕಾರಕ್ಕೆ ದೂರು ನೀಡಿದರೆ ಕ್ಷಣಾರ್ಧದಲ್ಲಿ ಪ್ರತಿಕ್ರಿಯೆ!