ರೇಪ್‌ ಕೇಸ್‌ಗಳ ತನಿಖೆಗೆ ಲೇಡಿಸ್‌ ಟೀಂ ಬೇಕು: ನಟಿ ಮಾಳವಿಕಾ ಅವಿನಾಶ್

By Kannadaprabha News  |  First Published Sep 4, 2024, 12:35 PM IST

ಕೋಲ್ಕತ್ತಾದಿಂದ ಕೇರಳದವರೆಗೆ ಮಹಿಳೆಯರ ಮೇಲಿನ ದೌರ್ಜನ್ಯದ ಚರ್ಚೆ ಆವರಿಸಿದೆ. ಅಭಯಾ ಪ್ರಕರಣ ದೇಶದ ಸಾಮೂಹಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿದರೆ, ಹೇಮಾ ಸಮಿತಿ ವರದಿ ಭಾರತೀಯ ಚಿತ್ರರಂಗದಲ್ಲಿ ಕಂಪನ ಸೃಷ್ಟಿಸಿದೆ: ಮಾಳವಿಕಾ ಅವಿನಾಶ್ ಚಿತ್ರನಟಿ, ಬಿಜೆಪಿ ವಕ್ತಾರೆ 


ಬೆಂಗಳೂರು(ಸೆ.04):  ಮನೆ, ಸಾರ್ವಜನಿಕ ಸಳಗಳು, ಸಾರ್ವಜನಿಕ ಸಾರಿಗೆಗಳಲ್ಲಿನ ಮಹಿಳಾ ಸುರಕ್ಷತೆ ಮಾತು ಒಂದೆಡೆಯಾದರೆ, ಉದ್ಯೋ ಗದ ಸ್ಥಳದಲ್ಲಿ ವೈದ್ಯೆ, ನಟಿಯರಿಗೆ ರಕ್ಷಣೆ ಇಲ್ಲದಿರುವುದು ಆಘಾತ ಕಾರಿ. ದೇಶದಲ್ಲಿ 50% ಮಹಿಳೆಯರಿದ್ದು, ಅದೇ 50%ರಷ್ಟಿರುವ ಪುರುಷರಿಂದ ಮಹಿಳೆಯರಿಗೆ ರಕ್ಷಣೆ ಇಲ್ಲವೆಂದರೆ ನಮ್ಮ ಭವಿಷ್ಯವೇನು? ಅಂದೇ ದೂರು ಕೊಡಲಿಲ್ಲವೇಕೆ? ಇಷ್ಟು ವರ್ಷದ ಬಳಿಕ ಹೇಳಿದರೆ? ದೌರ್ಜನ್ಯವೆಸಗಿದವರ ಜೊತೆ ಕೆಲಸ ಮಾಡಿದ್ದೀರಾ? ಕಾಫಿ ಕುಡಿದಿದ್ದೀರಾ? ಇದು ಸಮಾಜದ ಬುದ್ದಿವಂತರ ಪ್ರಶ್ನೆಗಳು. 

ದೂರು ಯಾರಲ್ಲಿ ಕೊಡಬೇಕು? 

Tap to resize

Latest Videos

ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ದೂರು ಯಾರಲ್ಲಿ ಕೊಡಬೇಕು? ಕಲಾವಿದೆಯರು ಪಲ್ಲಂಗಕ್ಕೆ ಕರೆದ ನಟ, ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕರ ವಿರುದ್ಧ ಯಾರಲ್ಲಿ ದೂರು ಸಲ್ಲಿಸಬೇಕು? ನಿರ್ದೇಶಕರಿಗೋ? ನಿರ್ಮಾಪಕರಿಗೋ? ಅಭಯಾ (ಕೋಲ್ಕತಾ ಅತ್ಯಾಚಾರ ಸಂತ್ರಸ್ತೆ)ಳಂತ ವೈದ್ಯೆ ಡಾಕ್ಟರ್, ಡೀನ್, ಪ್ರಿನಿಪಾಲರ ವಿರುದ್ಧ ಯಾರಿಗೆ ದೂರು ಕೊಡಬೇಕು?ಠಾಣೆಗೆ ಹೋಗಿ ಯಾಕೆ ದೂರು ಕೊಟ್ಟಿಲ್ಲಾ ಅನ್ನೋದು ಅಲ್ಲಾ ಪ್ರಶ್ನೆ. ತನ್ನ ಮೇಲೆ ಅತ್ಯಾಚಾರ, ಹಲ್ಲೆ ನಡೆದ ಬಳಿಕ ನಿರ್ಭಯಾ ಮತ್ತವಳ ಸ್ನೇಹಿತ ಪೊಲೀಸರ ನೆರವು ಸಿಗುವವರೆಗೆ ನಿಸ್ಸಹಾಯಕರಾಗಿ ರಸ್ತೆಯಲ್ಲಿದ್ದರು. ತಾರೀರಿಕ, ಮಾನಸಿಕ ನೋವು ನುಂಗಿಕೊಂಡು ಮಹಿಳೆ ಸ್ಟೇಷನ್ನಿಗೆ ಹೋದರೂ ಅವರನ್ನು ಸ್ವಾಗತಿಸಿ, ಸಾಂತ್ವನ ಹೇಳುವ ಆ ಮನಸ್ಥಿತಿ ಎಷ್ಟು ಸ್ಟೇಷನ್ನುಗಳಲ್ಲಿದೆ? ದೂರು ಬರೆದುಕೊಳ್ಳುವವರು, ಎಸ್‌ಐ, ತನಿಖಾಧಿಕಾರಿ, ವಬ್ಲಿಕ್ ಪ್ರಾಸಿಕ್ಯೂಟರ್, ಪರೀಕ್ಷೆ ಮಾಡುವ ಡಾಕ್ಟರ್, ಪೋರೆನ್ಸಿಕ್ ತಜ್ಞರು, ಡಿಫೆನ್ಸ್ ಲಾಯರ್, ಪೇದೆಗಳಿಂದ ಜಡ್ಜ್‌ವರೆಗೆ ಎಲ್ಲರೂ ಪುರುಷರೇ ಅಲ್ಲಿದ್ದಾರೆ. 

ಹಿರಿಯ ನಟ ಅನಂತ್‌ ನಾಗ್ ಬಗ್ಗೆ 'ಮೀಟೂ' ಖ್ಯಾತಿ ನಟಿ ಶ್ರುತಿ ಹರಿಹರನ್ ಹೇಳಿದ್ದೇನು?

ಸಂತ್ರಸ್ತೆಗೆ ನೂರಾರು ಪ್ರಶ್ನೆ ಕೇಳ್ತಾರೆ

ದೌರ್ಜನ್ಯಕ್ಕೆ ಒಳಗಾದಾಕೆ ರೈಟರಿಂದ ಹಿಡಿದು, ಮಾಜಿಸ್ಟ್ರೇಟ್‌ವರೆಗೆ ಅದೆಷ್ಟು ಬಾರಿ ಘಟನೆ ವಿವರಿಸಬೇಕು. ಘಟನೆ ವಿವರಿಸುವ ವೇಳೆ ಆಕೆ ಮಾನಸಿಕ, ಜ್ಞಾಪಕ ಶಕ್ತಿ ಎರಡನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಮನೋತಜ್ಞರು ದೃಢಪಡಿಸುತ್ತಾರೆ. ಘಟನೆ ಮರು ಸೃಷ್ಟಿ ನೆಪದಲ್ಲಿ, 'ಎಲ್ಲಿ ಮುಟ್ಟಿದ, ಎಲ್ಲಿ ದೂಡಿದ? ಕಚ್ಚಿದನೇ, ಪರಚಿದನೆ, ಯಾವ ಅಂಗದ ಮೇಲೆ? ಯಾವ ಜಾಗದಲ್ಲಿ ನೀನ್ಯಾ ಕಲ್ಲಿಗೆ ಹೋ ದೇ? ತಡ ರಾತ್ರಿಯಾಗಿತ್ತಾ?' ಹೀಗೆ ನೂರಾರು ಪ್ರಶ್ನೆಗಳು.. ಹಲ್ಲೆಯ ತೀವ್ರತೆ ಕಡಿಮೆ, ಜಾಸ್ತಿ ಆಗಿರಲಿ ಘಾಸಿಯಾಗುವುದು ಶರೀರಕ್ಕೆ ಮಾತ್ರವಲ್ಲ, ಮನಸಿಗೂ ಹೌದು. ಒಬ್ಬೊಬ್ಬರದು ಒಂದೊಂದು ಮನಸ್ಥಿತಿ. ಕೆಲವರಿಗೆ ಸಣ್ಣ ದೌರ್ಜನ್ಯವೂ ಮಾಸದ ಗಾಯವಾಗಿ ಉಳಿಯಬಹುದು. ಕೆಲವರು ನೋವು ತಿಂದು ಸುಮ್ಮನಾಗಬಹುದು. ಇನ್ನು ಕೆಲವರು ಸ್ಫೋಟಿಸಬಹುದು.

ಭಾವನಾ ಮೆನನ್ ಕೇಸ್ ನೆನಪಿರಬಹುದು! 

ಭಾವನಾ ಮೆನನ್ ಮಲಯಾಳಂನ ಪ್ರಸಿದ್ದ ನಾಯಕಿ. ಕನ್ನಡದಲ್ಲಿಯೂ ನಟಿಸಿದ್ದಾರೆ. ಕನ್ನಡಿಗನನ್ನೇ ವರಿಸಿದರು. 2017ರಲ್ಲಿ ಚಿತ್ರೀ ಕರಣಕ್ಕೆ ಹೋದಾಕೆಯ ಕಾರ್ ಫ್ರಾಕ್ ಮಾಡುವ ಪುಂಡರು, ಲೈಂಗಿಕ ದೌರ್ಜನ್ಯ ನಡೆಸಿ ಆ ದೃಶ್ಯಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿದರು. ಮರು ದಿನವೇ ನಟ ಪೊಲೀಸ್ ಠಾಣೆಗೆ ಹೋದರು. ತಾನೊಬ್ಬ ಜನಪ್ರಿಯ ನಟಿ. ಈ ವಿಷಯ ಸುದ್ದಿಯಾಗುತ್ತದೆ. ಸುಮ್ಮನಿರುವಬಾಯಿಗಳಿಗೆ ಅಗೆಯಲು ಅವಲಕ್ಕಿಸಿಕ್ಕಂತಾಗಬಹುದು ಎಂದುಕೊಳ್ಳದೇ ಧೈರ್ಯವಾಗಿ ಕಾನೂನು ಮೊರೆ ಹೋಗುತ್ತಾರೆ. ಈ ಕೃತ್ಯದ ಹಿಂದಿದ್ದು, ಮಲಯಾಳಂ ಸೂಪ‌ರ್ ಸ್ಟಾರ್ ದಿಲೀಪ್. ತಾನು ನಟಿ ಕಾವ್ಯ ಮಾಧವನ್‌ರೊಂದಿಗೆ ಸಂಬಂಧ ಬೆಳೆಸಿದ್ದನ್ನು, ಭಾವನಾ ತನ್ನ ಪತ್ನಿ ಮಂಜು ವಾರಿಯರ್‌ಗೆ ತಿಳಿಸಿದ್ದಕ್ಕೆ ಆತ ಆಕೆ ಮೇಲೆ ತೋರಿಸಿದ ಪ್ರತೀಕಾರವಂತೆ. ಆ ವೇಳೆಗಾಗಲೇ, ಮಂಜುವಿಗೆ ವಿಚ್ಛೇದನ ಕೊಟ್ಟು ದಿಲೀಪ್ ಕಾವ್ಯರನ್ನು ವಿವಾಹವಾಗಿದ್ದ. ಆದರೂ ವಿಕೃತ ಪ್ರತೀಕಾರ. ಆ ಸಮಯದಲ್ಲಿ ಒಂದಷ್ಟು ನಟಿಯರು ಮಲಯಾಳಂ ಕಲಾವಿದರ ಸಂಘ 'ಅಮ್ಮಾ'ದ ಬಳಿ, ದಿಲೀಪ್ ಉಚ್ಚಾಟನೆಗೆ ಕೋರುತ್ತಾರೆ. ಕೋರಿಕೆ ನಿರಾಕರಿಸಿದ್ದಕ್ಕೆ ಸಂಘದಿಂದ ಹೊರನಡೆದು, Women's Collective in Cinema (ಡಬ್ಲ್ಯೂ ಸಿಸಿ )ವನ್ನು ಪ್ರಾರಂಭಿಸುತ್ತಾರೆ.

ಕೇರಳದಲ್ಲಿ ಹೇಮಾ ವರದಿ ನಡುಕ 

ಮಹಿಳಾ ಕಲಾವಿದರಿಗೆ ರಕ್ಷಣೆ, ಮೂಲಭೂತ ಸೌಕರ್ಯ ವ್ಯವಸ್ಥೆ, ಕೆಲಸಕ್ಕೆ ತಕ್ಕ ವೇತನ, ಜೂನಿಯರ್‌ಆರ್ಟಿಸ್ಟ್, ಪೋಷಕ ಕಲಾವಿ ದರು. ಕೇಶಾಲಂಕಾರ, ಸಹಾಯಕ ನಿರ್ದೇಶನ, ವಸ್ತ್ರ ವಿನ್ಯಾಸ ಹೀಗೆ ಎಲ್ಲಾ ವರ್ಗದವರಿಗೂ ಡಬ್ಲ್ಯೂಸಿಸಿ ದನಿಯಾಗುತ್ತದೆ. ಒತ್ತಾಯದ ಮೇರೆಗೆ ಸಕಾರಾತ್ಮಕ ಸಲಹೆಗಳನ್ನು ಚಿತ್ರೋದ್ಯಮಕ್ಕೆ ನೀಡಲು ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶೆ ಹೇಮಾರ ಅಧ್ಯಕ್ಷತೆಯಲ್ಲಿ ಕೇರಳ ಆಂತರಿಕ ದೂರು ಸಮಿತಿ ನಿಯೋಜಿಸು ತ್ತದೆ. ಸಮಿತಿ ಸುಮಾರು 300 ಪುಟದ ವರದಿ 2019ರಲ್ಲೇ ಸಿದ್ಧಪಡಿಸಿದ್ದರೂ ಆಗಸ್ಟ್ 19, 2024ವರೆಗೆ ಕೇರಳದ ಪಿಣರಾಯಿ ಸರ್ಕಾರ ದ ಬಳಿ ಇರುತ್ತದೆ. ಡಬ್ಲ್ಯೂಸಿಸಿ ವರದಿ ಬಹಿರಂಗಪಡಿಸುವಂತೆ ಕೋರ್ಟ್‌ಗೆ ಹೋಗುತ್ತದೆ. ಅದರ ಪರಿಣಾಮವೇ, ಸದೃಢ ಕಲಾವಿದ ರಾದ ಜಯಸೂರ್ಯ, ಸಿದ್ದೀಕ್, ಸಿಪಿಎಂ ಶಾಸಕ ಮುಕೇಶ್, ನಿರ್ದೇಶಕರಾಗಿರುವ ರಂಜಿತ್, ವಿಕೆ ಪ್ರಕಾಶ್ ಪ್ರಕರಣಗಳಲ್ಲಿ ಸಿಲುಕಿದ್ದು, ಸುಮಾರು 20 ಎಫ್‌ಐಆರ್‌ಗಳು ದಾಖಲಾಗಿವೆ. 

ಇತರೆ ಭಾಷೆಯ ಚಿತ್ರರಂಗ ತಲ್ಲಣ 

ಆ ವರದಿಯಲ್ಲಿನ ಕೆಲವು ಪುಟಗಳನ್ನು ತಮ್ಮ ಬಳಿಯೇ ಉಳಿಸಿಕೊಂಡು, ಎಲ್‌ಡಿಎಫ್ ಸರ್ಕಾರ ಪ್ರಕಟಿಸಿದೆ. ಬೆನ್ನಲ್ಲೇ ಅಧ್ಯಕ್ಷ ಮೋಹನ್‌ ಲಾಲ್ ಸಮೇತರಾಗಿ 'ಅಮ್ಮಾ'ದ ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಈ ಘಟನೆಯಿಂದಾಗಿ ಇತರ ಭಾಷೆಯ ಚಿತ್ರರಂಗಗಳು ತಲ್ಲಣಗೊಂಡಿವೆ. ಮಲಯಾಳಂನ ಕರಾಳ ಕತೆಗಳನ್ನು ಕಲಾವಿದೆಯರು ಹೇಳತೊಡಗಿದ್ದು, ಬೇರೆಡೆ ಹಬ್ಬಲು ಹೆಚ್ಚು ಸಮಯ ಬೇಕಿಲ್ಲ, ಉದ್ಯೋಗ ಸ್ಥಳದಲ್ಲಿ ಲೈಂಗಿಕ ಶೋಷಣೆ ಮಲಯಾಳಂ ಚಿತ್ರೋದ್ಯಮಕ್ಕೆ ಸೀಮಿತವಲ್ಲ. ಎಲ್ಲೆಡೆ ನಡೆಯುತ್ತದೆ. ತನಗೆ ಯಾವುದೇ ಅಂತಹ ಅನುಭವದೇ ನಡೆದಿಲ್ಲ ಎನ್ನುವವರ ಸಂಖ್ಯೆ ತೀರಾ ಕಡಿಮೆ. 
ನಾನು ನಟಿಯಾಗಿ ವೃತ್ತಿ ಆರಂಭಿಸಿದ್ದು ಮಲಯಾಳಂನಲ್ಲಿ ವಿಪರ್ಯಾಸವೆಂದರೆ ಇಂದು ದೂರು ಎದುರಿಸುತ್ತಿರುವ ಅನೇಕರೊಂದಿಗೆ ಕೆಲಸಮಾಡಿದ್ದೇನೆ. ಚಿತ್ರೋದ್ಯಮದಲ್ಲಿ ಹೀರೋಗಳ ಸಂಬಳಕ್ಕೆ ಹೋಲಿಸಿದರೆ ನಟಿಯರ ಸಂಬಳ ಕಡಿಮೆ. ಚಿತ್ರಗಳಲ್ಲಿ ಕಥೆಯಿಂದ ಹಿಡಿದು, ಪಾತ್ರಗಳು ಎಲ್ಲವೂ ಪುರುಷರ ಸುತ್ತವೇ. ಕಿರುತೆರೆಯಲ್ಲಿ ಕಥೆ ಮಾತ್ರ ಸ್ತ್ರೀ ಪ್ರಧಾನವಲ್ಲ ಸಂಬಳವೂ ಪುರುಷರಿಗೆ ಹೋಲಿಸಿದರೆ 4-5 ಪ್ರಮಾಣ ಹೆಚ್ಚಿರುತ್ತದೆ. ಅದಕ್ಕೆ 1998 ರಲ್ಲಿ ಕಿರುತೆರೆ ಆಯ್ಕೆ ಮಾಡಿಕೊಂಡೆ. 

'ಮೀಟೂ'ವಿನಂತೆ ಆಗದಿರಲಿ ಹೇಮಾ ಸಮಿತಿ ವರದಿ 

2021-22ರಲ್ಲಿ "ಮೀಟೂ' ನಡೆದಾಗ ಧ್ವನಿ ಎತ್ತಿದ ಕಲಾವಿದೆಯರನ್ನು ಅವಮಾನಿಸಲಾಯಿತು, ರೇವತಿ, ಪದ್ಮಪ್ರಿಯ, ರೀಮಾ, ಪಾರ್ವತಿಯಂತಹ ಅನೇಕ ಪ್ರತಿಭಾವಂತರಿಗೆ ಮಲಯಾಳಂನಲ್ಲಿ ಅವಕಾಶ ವಂಚನೆಯಾಗಿದೆ. ಪ್ರಶಸ್ತಿಗಳ ವಂಚನೆ, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಕ್ತಿತ್ವದ ಟೀಕೆ ಎಲ್ಲವೂ ನಡೆದಿದೆ. ನಡೆದಿದ್ದಕ್ಕೆ ಸಾಕ್ಷಿ ಕೊಡಿ ಅಂತ ಸಂತ್ರಸ್ತೆಯನ್ನು ಕೇಳದೇ, ತನಿಖಾ ತಂಡ ಹುಡುಕಿ ತೆಗೆಯಬೇಕು. ಸುಳ್ಳು ದೂರಾಗಿದ್ದರೂ ಸಾಬೀತಾಗಲಿ. ಭಾವನಾಳಿಗೆ ಇಂದಿನವರೆಗೆ ನ್ಯಾಯ ಸಿಕ್ಕಿಲ್ಲ, ನಿರ್ಭಯಾ ಪ್ರಕರಣದಲ್ಲೇ ಶಿಕ್ಷೆ ಕೊಡಿಸಲು ಆಕೆಯ ತಾಯಿ ಎಂಟೂವರೆ ವರ್ಷ ಗಳು ಹೋರಾಡಬೇಕಾಯಿತು. ರಾಜಕೀಯ, ಹಣ ಬಲದ ಆಪಾದಿತರ ವಿರುದ್ಧ ಹೋರಾಡುವ ಶಕ್ತಿ, ಆಸಹಾಯಕ ಹೆಣ್ಣು ಮಕ್ಕಳಿಗೆ ಇರುವುದಿಲ್ಲ. ಹೀಗಾಗಿ ಕೇಸು ಬಿದ್ದು ಹೋಗುತ್ತವೆ. ಹೇಮಾ ಸಮಿತಿಯ ವರದಿ ಆ ರೀತಿ ಆಗದೇ ಮಹಿಳೆಯರ ಸಮ ಸೈಗಳ ಕುರಿತ ಚರ್ಚೆಯ ವಾತಾವರಣ ಸೃಷ್ಟಿಸಿದೆ. ಕೇರಳದ ನಾಗ ರಿಕರು ಸ್ತ್ರೀಯರ ಪರ ನಿಂತಿದ್ದಾರೆ. ಚಿತ್ರೋದ್ಯ ಮಲ್ಲಿ ದನಿ ಯೊಂದು ಸಿಕ್ಕಿದ್ದು, ಚಳವಳಿಯಾಗುವ ಸಾಧ್ಯತೆಗಳು ದಟ್ಟವಾಗಿವೆ. 

ರಂಗನಾಯಕ'ನ ಕಾಂಟ್ರೋವರ್ಸಿ ಶುರು; ಗಾಳಿ ತಂಗಾಳಿ ಅಂತ 'ಬಿರುಗಾಳಿ' ಎಬ್ಬಿಸಲು ಹೊರಟ್ರಾ ಗುರೂ..!?

ಮಹಿಳೆಯರ ನೇಮಕವಾಗಲಿ 

ಅಭಯಾ ನಂತರವಾದರೂ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳನ್ನು ನೋಡುವ ರೀತಿ ಬದಲಾಗಬೇಕಾಗಿದೆ. ರಾಜ್ಯ ಸರ್ಕಾರಗಳು ದೂರು ದಾಖಲಿಸುವ ರೈಟರಿಂದ ಹಿಡಿದು, ತನಿಖಾಧಿಕಾರಿ, ವಕೀಲರು, ಮ್ಯಾಜಿಸ್ಟ್ರೇಟ್‌ವರೆಗೆ ಸ್ತ್ರೀಯರನ್ನೇ ನೇಮಿಸಿದರೆ? ಸಂತ್ರಸ್ತೆಯನ್ನು ತೇಜೋವಧೆ ಮಾಡುವುದು, ಎಲ್ಲಾಯಿತು. ಹೇಗಾಯಿತು ಎಂದು ಪ್ರಶ್ನಿಸಿ, ಧೃತಿಗೆಡಿಸುವ ಪುರುಷರಿರುವುದಿಲ್ಲ.

ಸಂವಿಧಾನದ ಪ್ರಕಾರ, ಕಾನೂನು ಸುವ್ಯಸ್ಥೆಯ ಹೊಣೆಗಾರಿಕೆ ರಾಜ್ಯಗಳದ್ದಾಗಿರುವುದರಿಂದ ಈ ಸಲಹೆಯನ್ನು ಮುಕ್ತವಾಗಿ ನಾನು ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ನೀಡುತ್ತಿದ್ದೇನೆ. ಜಾರಿಯಾಗಿರುವ ಹೊಸ ಅಪರಾಧ ಕಾನೂನುಗಳಲ್ಲಿ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ತರಲಾಗುವ ಮೊದಲ ತಿದ್ದುಪಡಿ ಹೀಗೊಂದು ವಿಶೇಷ ಸಂಪೂರ್ಣ ಮಹಿಳಾ ತಂಡದ ರಚನೆಗಾದರೆ, ಮಹಿಳಾ ಸುರಕ್ಷತೆಯ ಹೊಸದೊಂದು ಅಧ್ಯಾಯಕ್ಕೆ ರಾಷ್ಟ್ರ ನಾಂದಿ ಹಾಡಿದಂತಾಗುತ್ತದೆ.

click me!