Breaking: ರೇಣುಕಾಸ್ವಾಮಿ ಕೊಲೆ ಕೇಸ್‌, ಡಿ ಗ್ಯಾಂಗ್‌ ಮೇಲೆ 3991 ಪುಟಗಳ ಭಾರೀ ಚಾರ್ಜ್‌ಶೀಟ್‌!

By Santosh NaikFirst Published Sep 4, 2024, 10:59 AM IST
Highlights

Darshan Thoogudeepa ನಟ ದರ್ಶನ್‌ ಹಾಗೂ ಆತನ ಸಹಚರರ ಮೇಲೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 86 ದಿನಗಳ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. 3991 ಪುಟಗಳ ಈ ಚಾರ್ಜ್‌ಶೀಟ್‌ನಲ್ಲಿ ಒಟ್ಟು 231 ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ.


ಬೆಂಗಳೂರು (ಸೆ.4): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಹಾಗೂ ಆತನ ಸಹಚರರ ಮೇಲೆ 86 ದಿನಗಳ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ದರ್ಶನ್‌ ಜೈಲು ಸೇರಿದ 75 ದಿನಗಳ ಬಳಿಕ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಹೈಪ್ರೊಫೈಲ್‌ ಕೇಸ್‌ನಲ್ಲಿ ಒಟ್ಟು 3991 ಪುಟಗಳ ಭಾರೀ ಚಾರ್ಜ್‌ಶೀಟ್‌ ಇದಾಗಿದೆ. ಎಸ್‌ಪಿಪಿ ಮೂಲಕ ತನಿಖಾಧಿಕಾರಿಗಳು ಚಾರ್ಜ್ಶೀಟ್‌ ಅಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಒಟ್ಟು 231 ಸಾಕ್ಷ್ಯಗಳಿವೆ ಎಂದು ಹೇಳಲಾಗಿದೆ. 24ನೇ ಎಸಿಎಂಎಂ ಕೋರ್ಟ್‌ನ ಜಡ್ಜ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದ್ದು, ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್‌ ಎ2 ಆರೋಪಿಯಾಗಿದ್ದಾರೆ.  ಅದರೊಂದಿಗೆ ಎಫ್‌ಐಆರ್‌ನಲ್ಲಿ ಇರುವಂತೆಯೇ ಚಾರ್ಜ್‌ಶೀಟ್‌ನಲ್ಲಿ ದಾಖಲು ಮಾಡಲಾಗಿದ್ದು, ಆರೋಪಿಗಳ ಸಂಖ್ಯೆಯನ್ನು ಬದಲಾವಣೆ ಮಾಡಲಾಗಿಲ್ಲ. ಇದಕ್ಕೂ ಮುನ್ನ ಪ್ರಕರಣದಲ್ಲಿ ದರ್ಶನ್‌ ಎ1 ಆರೋಪಿಯಾಗಬಹುದು ಎಂದು ಹೇಳಲಾಗಿತ್ತು. ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದಾರೆ. ಒಟ್ಟು ಮೂರೂ ಮಂದಿ ಪ್ರತ್ಯಕ್ಷ ಸಾಕ್ಷಿದಾರರು ಪ್ರಕರಣದಲ್ಲಿದ್ದಾರೆ. 8 ಎಫ್‌ಎಸ್‌ಎಸಲ್‌-ಸಿಎಸ್‌ಎಫ್‌ಎಲ್‌ ವರದಿಗಳು ಚಾರ್ಜ್‌ಶೀಟ್‌ನಲ್ಲಿದೆ.

54 ಪಂಚರ ಸಕ್ಷಮ ಪೊಲೀಸರು ಮಹಜರು ಮಾಡಿದ್ದಾರೆ. ಒಟ್ಟು 231 ಸಾಕ್ಷಿಗಳು ಪ್ರಕರಣದಲ್ಲಿದ್ದು, 27 ಸಾಕ್ಷಿಗಳು ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ದಾಖಲು ಮಾಡಿದ್ದಾರೆ. ಒಟ್ಟು ಏಳು ಸಂಪುಟಗಳು ಒಟ್ಟು 10 ಕಡತಗಳಿರುವ ಚಾರ್ಜ್‌ಶೀಟ್‌ ಇದಾಗಿದೆ. ಕೃತ್ಯಕ್ಕೆ ಬಳಸಿದ್ದ ಬಹುತೇಕ ವಸ್ತಗಳನ್ನು ಪೊಲೀಸರು ಸೀಜ್‌ ಮಾಡಿದ್ದಾರೆ. 28 ಸ್ಥಳದಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ. 17 ನಿವಾಸಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಲಾಠಿ, ಮರದ ಪೀಸ್‌, ಸಿಸಿಟಿವಿ ದೃಶ್ಯವನ್ನು ಪೊಲೀಸರು ಸೀಜ್‌ ಮಾಡಿದ್ದಾರೆ. 

Latest Videos

ನಿನ್ನ ಪರಿಸ್ಥಿತಿ ಹೇಗೇ ಇದ್ರೂ ನಂಗೆ ಸಹಾಯ ಮಾಡ್ತಿದ್ಯಾ ಅಮ್ಮ, ನಾನು ಪುಣ್ಯ ಮಾಡಿದ್ದೆ; ಪವಿತ್ರಾ ಗೌಡ ಪುತ್ರಿ ಪೋಸ್ಟ್ ವೈರಲ್!

ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ನಾಗೇಶ್‌ ಅವರಿಂದ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗುದೆ. ಸ್ಥಳದ ಪಂಚನಾಮೆಗೆ 59 ಜನರನ್ನು ಬಳಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಒಟ್ಟು 14 ಆರೋಪಿಗಳ ಮೇಲೆ ಆರೋಪ ಹೊರಿಸಲಾಗಿದೆ.  ಘಟನೆ ನಡೆಯುವ ವೇಳೆ ದರ್ಶನ್‌ ನೀಲಿ ಜೀನ್ಸ್‌ ಪ್ಯಾಂಟ್‌, ಬಿಳಿ ಬಣ್ಣದ ಬನಿಯನ್‌ ಹಾಗೂ ಕಪ್ಪು ಟಿ ಶರ್ಟ್‌ ಧರಿಸಿದ್ದರು ಎಂದು ತಿಳಿಸಲಾಗಿದೆ.

164 ಅಡಿಯಲ್ಲಿ 27 ಮಂದಿ ಸಾಕ್ಷಿದಾರರ ಹೇಳಿಕೆ ದಾಖಲಾಗಿದ್ದರೆ, 161 ಅಡಿಯಲ್ಲಿ 70 ಸಾಕ್ಷಿಗಳ ಹೇಳಿಕೆ ದಾಖಲು ಮಾಡಲಾಗಿದೆ. 8 ಇತರೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖಿಲಸಾಗಿದೆ. 56 ಜನ ಪೊಲೀಸರು ಸೇರಿ 231 ಸಾಕ್ಷಿಯನ್ನು ಕಲೆಹಾಕಲಾಗಿದೆ. 24 ನೇ ಎಸಿಎಂಎಂ ನ್ಯಾಯಾಧೀಶರಾದ ಮಾರುತೇಶ್ ಪರಶುರಾಮ್  ಮೋಹಿತೆ ಮುಂದೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ಶಿರಸ್ತೇದಾರ್ ರಜೆ ಕಾರಣ ಇಂದು ಪರಿಶೀಲನೆ ನಡೆಯೋದಿಲ್ಲ. ಶಿರಸ್ತೆದಾರ್ ಪರಿಶೀಲನೆ‌ ನಡೆಸಿದ ಬಳಿಕ ಪೊಲೀಸರು ಸಿಸಿ ಮಾಡಲಿದ್ದಾರೆ. ಎಲ್ಲ ಪ್ರತಿಗಳು ಸಿಸಿಯಾದ ಬಳಿಕ ಆರೋಪಿಗಳಿಗೆ ಚಾರ್ಜ್ ಶೀಟ್ ಪ್ರತಿ ನೀಡಲಾಗುತ್ತದೆ. ಚಾರ್ಜ್ ಶೀಟ್ ಪ್ರತಿ ಆರೋಪಿಗಳಿಗೆ ಸಿಕ್ಕ ಬಳಿಕ ಕಮೀಟಲ್ ಮಾಡಲಿರುವ ನ್ಯಾಯಾಲಯ. ಕಮೀಟಲ್‌ ಮಾಡಿ‌ ಸೆಷನ್ಸ್‌ ಕೋರ್ಟ್‌ಗೆ ವರ್ಗಾವಣೆ ಆಗಲಿದೆ.

ಜಾರ್ಜ್‌ಶೀಟ್ ಟೆನ್ಷನ್‌: ಊಟ, ನಿದ್ರೆಯನ್ನೇ ಬಿಟ್ಟ ದರ್ಶನ್, ಜೈಲಿನಲ್ಲಿ ಒಂದೊಂದು ಕ್ಷಣವೂ ನರಕ ದರ್ಶನ..!

ಏನೆಲ್ಲಾ ಸಿಕ್ಕಿದೆ:  ಹಲ್ಲೆ ವೇಳೆ ರೇಣುಕಾಸ್ವಾಮಿ ಬೇಡಿಕೊಳ್ಳುವ ಪೋಟೋ ರಿಟ್ರೀವ್‌ ಆಗಿದೆ. ವಿನಯ್ ಮೊಬೈಲ್ ಈ ಫೋಟೋ ರಿಟ್ರೀವ್‌ ಆಗಿದೆ. ಅನುಕುಮಾರ್ ಮೊಬೈಲ್ ನಿಂದ ಒಂದು ಮಹತ್ವದ ಆಡಿಯೋವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ರೇಣುಕಾಸ್ವಾಮಿ ಹಲ್ಲೆ ಮಾಡುವಾಗ ಕ್ಲಿಕ್ಕಿಸಿದ್ದ ಹಲವು ಪೋಟೋಗಳು ಸಿಕ್ಕಿವೆ. ಅದನ್ನು ಚಾರ್ಜ್‌ಶೀಟ್‌ನಲ್ಲಿ ಸಲ್ಲಿಕೆ ಮಾಡಲಾಗಿದೆ. ಪೊಲೀಸ್ ಲಾಠಿ ಮುಂಬದಿ ಪುಡಿ ಪುಡಿಯಾಗಿರೋ ಫೋಟೋ ಕೂಡ ಸಿಕ್ಕಿದೆ. ನೈಲನ್ ಹಗ್ಗದ ಫೋಟೊವನ್ನೂ ಕೂಡ ಸಂಗ್ರಹಿಸಲಾಗಿದೆ. ಪವಿತ್ರಗೌಡ ಮನೆಯಲ್ಲಿ ಸೀಝ್ ಮಾಡಿದ್ದ ಚಪ್ಪಲಿಯ ಫೋಟೊ ಕೂಡ ಆರೋಪ ಪಟ್ಟಿಯಲ್ಲಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ನಂದೀಶ್ ನಾಗರಾಜ್. ದರ್ಶನ್ ಸ್ಟೋನಿ ಬ್ರೂಕ್ ಹೊಟೆಲ್ ನಿಂದ ಹೊರ ಬರುವ ಪೋಟೋಗಳು.. ಶೆಡ್ ಗೆ ದರ್ಶನ್ ಎಂಟ್ರಿ ಆಗಿರುವ ಸಿಸಿ ಕ್ಯಾಮರಾ ಸ್ನಾಪ್‌ಶಾಟ್ ಗಳು ಚಾರ್ಜ್ ಶೀಟ್ ನಲ್ಲಿ ಸೇರ್ಪಡೆ. ವೈದ್ಯರು ನೀಡಿರುವ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ 39ಗಾಯಗಳಿಗೂ ವೈದ್ಯರು ನೀಡಿರುವ ವಿವರವಾದ ವಿವರಣೆಯನ್ನು ದಾಖಲಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನ ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

click me!