
ಬೆಂಗಳೂರು (ಮಾ.06): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾಲೇನಹಳ್ಳಿಯಲ್ಲಿ ಹಿಂದೂ ಧರ್ಮದ ಹಿನ್ನೆಲೆಯುಳ್ಳ 'ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ' ನಾಟಕವನ್ನು ಮುಸಲ್ಮಾನರು ಎಲ್ಲ ಪಾತ್ರಗಳನ್ನು ನಿರ್ವಹಿಸಿಕೊಂಡು ಪ್ರದರ್ಶನ ಮಾಡುತ್ತಿದ್ದಾರೆ. ಮಾ.19ರಂದು ಮಾಡಲಾಗುತ್ತಿದ್ದು, ಎಲ್ಲ ಪಾತ್ರಧಾರಿಗಳು ಮುಸ್ಲಿಮರೆನ್ನುವ ಹಿನ್ನೆಲೆಯಲ್ಲಿ ವಿಶೇಷ ಎನಿಸಿಕೊಂಡಿದೆ.
ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆ ಎಲ್ಲವೂ ಹಿಂದೂ ಧರ್ಮಕ್ಕೆ ಸೀಮಿತ ಎಂಬುದು ನಮಗೆ ತಿಳಿದಿರುವ ಸತ್ಯವಾಗಿದೆ. ಆದರೆ, ಇಲ್ಲಿ ವೀರಾಂಜನೇಯ ಸ್ವಾಮಿ ಕಲಾ ವೃಂದದಿಂದ ಮಾ.19ರಂದು ಪ್ರದರ್ಶನ ಮಾಡಲಾಗುತ್ತಿರುವ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ನಾಟಕದ ಎಲ್ಲ ಆಪತ್ರಧಾರಿಗಳು ಮುಸಲ್ಮಾನರೇ ಎನ್ನುವುದು ಈ ನಾಟಕದ ವಿಶೇಷವಾಗಿದೆ. ನಮ್ಮ ರಾಜ್ಯದಲ್ಲಿ ಸಾಮಾಜಿಕ ನೆಲೆಗಟ್ಟಿನ ಮತ್ತು ಪೌರಾಣಿಕ ಅಥವಾ ಧಾರ್ಮಿಕ ನೆಲೆಗಟ್ಟಿನ ನಾಟಕ ಪ್ರದರ್ಶನ ಮಾಡಲಾಗುತ್ತದೆ.
ಕೋಲಾರ: ಟಿಪ್ಪುವಿನ ನಿಜ ರೂಪ ಬಯಲು ಮಾಡುವುದು ನನ್ನ ಉದ್ದೇಶ, ಅಡ್ಡಂಡ ಕಾರ್ಯಪ್ಪ
ಆದರೆ, ನಾಟಕದ ಪಾತ್ರಧಾರಿಗಳು ಬಹುತೇಕರು ಹಿಂದೂಗಳು ಆಗಿದ್ದು, ವಿಶೇಷವಾಗಿ ಜಾತ್ರೆಗಳು, ಹಬ್ಬಗಳ ಸಂದರ್ಭದಲ್ಲಿ ನಾಟಕ ಪ್ರದರ್ಶನವನ್ನು ಮಾಡುತ್ತಾರೆ. ಈ ವೇಳೆ ಎಲ್ಲ ಧಾರ್ಮಿಕ ನಾಟಕಗಳಲ್ಲಿಯೂ ಹಿಂದೂ ಸಮುದಾಯದವರೇ ನಾಟಕದ ಪಾತ್ರಧಾರಿಗಳು ಆಗಿರುತ್ತಾರೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಹಾಲೇನಹಳ್ಳಿ ಗ್ರಾಮದಲ್ಲಿ ಧಾರ್ಮಿಕ ಭಾವೈಕ್ಯತೆಯ ಹಿನ್ನೆಲೆಯಲ್ಲಿ ನಾಟಕ ಪ್ರದರ್ಶನ ಮಾಡಲಾಗುತ್ತಿದೆ.
ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರ:
ಶ್ರೀ ವೀರಾಂಜನೇಯ ಸ್ವಾಮಿ ಕಲಾವೃಂದದ ವತಿಯಿಂದ ಪ್ರದರ್ಶನ ಮಾಡುವ ಈ ಕುರುಕ್ಷೇತ್ರ ನಾಟಕದ ಪೋಸ್ಟರ್‌ನಲ್ಲಿ ಎಲ್ಲಿಯೂ ಮುಸ್ಲಿಂ ಸಂಬಂಧಿತ ಧಾರ್ಮಿಕ ಚಿಹ್ನೆಗಳನ್ನು ಬಳಕೆ ಮಾಡಿಲ್ಲ. ಬುದ್ಧ, ಬಸವ, ಅಂಬೇಡ್ಕರ್, ಶ್ರೀ ಶಿವಕುಮಾರ ಸ್ವಾಮೀಜಿ ಸೇರಿ ಹಲವು ಮಠಾಧೀಶರಮ ಭಾವಚಿತ್ರ ಬಳಕೆ ಮಾಡಲಾಗಿದೆ. ಇನ್ನು ಬೆಟ್ಟಸ್ವಾಮಿಗೌಡ, ವೆಂಕಟಾಚಲಯ್ಯ, ನಾರಾಯಣಗೌಡ, ಮುನಿರಾಜು ಹಾಗೂ ಚಲುವರಾಜು ಅವರು ಇಲ್ಲಿ ಹಾರ್ಮೋನಿಯಂ, ತಬಲಾ, ನಾಟಕದ ಮೇಸ್ಟ್ರು ಮಾತ್ರ ಹಿಂದೂ ಧರ್ಮದವರಾಗಿದ್ದಾರೆ. ಉಳಿದಂತೆ ಎಲ್ಲ ಪಾತ್ರಧಾರಿಗಳು ಮುಸ್ಲಿಂ ಸಮುದಾಯದವರಾಗಿದ್ದಾರೆ.
ಮಹಿಳಾ ಪಾತ್ರಧಾರಿಗಳ ಹಂಚಿಕೆ:
ಉತ್ತರೆ, ರುಕ್ಮಿಣಿ, ಕುಂತಿ, ದ್ರೌಪದಿ ಸೇರಿ ಹಲವು ಮಹಿಳಾ ಪಾತ್ರಗಳನ್ನು ನಿರ್ವಹಣೆ ಮಾಡಲು ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಮಹಿಳಾ ಪಾತ್ರಧಾರಿಗಳನ್ನು ಕರೆಸಲಾಗುತ್ತಿದೆ. ತಬಲಾ, ಕ್ಯಾಷಿಯೋ, ಯೋಗೇಶ್ ಮತ್ತು ನಿರಂಜನ ಅವರು ವಾದ್ಯಗೋಷ್ಠಿಯನ್ನು ನಡೆಸಿಕೊಡಲಾಗುತ್ತದೆ. ಮಾ.19ರ ಭಾನುವಾರ ರಾತ್ರೊ 8.15ಕ್ಕೆ ಹಾಲೇನಹಳ್ಳಿ ಗ್ರಾಮದಲ್ಲಿ ನಾಟಕ ಪ್ರದರ್ಶನ ಆಗಲಿದೆ. ತುಮಕೂರಿನ ಲತಾ ಡ್ರಾಮಾ ಸೀನರಿ ಅವರಿಂದ ವೇದಿಕೆ ಸಿದ್ಧಪಡಿಸಲಾಗುತ್ತಿದೆ.
Udupi: ಸುಮನಸಾದ ರಂಗಹಬ್ಬ ಉದ್ಘಾಟಿಸಿದ ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ
ಯಾವ ಪಾತ್ರದಲ್ಲಿ ಯಾರಿದ್ದಾರೆ.?
ಶ್ರೀ ಕೃಷ್ಣ- ಜಾವಿದ್ ಪಾಷ
ಧರ್ಮರಾಯ- ಅಬ್ದುಲ್ ರಜಾಕ್ ಸಾಬ್
1ನೇ ಭೀಮ - ಎಜಾಜ್
2ನೇ ಭೀಮ- ಮುಜೀಬ್
1ನೇ ಅರ್ಜುನ - ರಖೀಬ್ ಸಾಬ್
2ನೇ ಅರ್ಜುನ- ಶಹಬಾಜ್ ಖಾನ್
ಅಭಿಮನ್ಯು- ಸುಬಾನ್
ಸಾತ್ಯಕಿ- ರಿಜ್ವಾನ್
ಬಲರಾಮ- ಸೈಯದ್ ಚಾಂದ್‌ಸಾಬ
ಧುರ್ಯೋದನ - ನಯಾಜ್ ಖಾನ್
ಕರ್ಣ- ಹಯಾತ್ ಪಾಷ
ದುಶ್ಯಾಸನ- ಸಾಧಿಕ್ ಪಾಷ
ಸೈಂಧವ- ಸೈಯದ್ ಖಲೀಲ್
ಶಕುನಿ- ಎಸ್. ಚಾಂದ್ ಪಾಷ
ಭೀಷ್ಮ - ನಜೀರ್ ಸಾಬ್
ದ್ರೋಣ- ಜಮೀರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ