ದಸರಾ ಪ್ರಯಾಣಿಕರಿಗೆ KSRTC ಬೃಹತ್ ಯೋಜನೆ; 3 ಸಾವಿರ ವಿಶೇಷ ಬಸ್‌ ಸೇವೆ, ಪ್ಯಾಕೇಜ್‌

Published : Oct 10, 2026, 07:46 AM IST
KSRTC

ಸಾರಾಂಶ

ದಸರಾ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಅಕ್ಟೋಬರ್ 16ರಿಂದ 20ರವರೆಗೆ 3 ಸಾವಿರ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಇದರ ಜೊತೆಗೆ ಮೈಸೂರು ಮತ್ತು ಮಂಗಳೂರು ದಸರಾ ವೀಕ್ಷಣೆಗಾಗಿ ವಿಶೇಷ ಪ್ರವಾಸಿ ಪ್ಯಾಕೇಜ್‌ಗಳನ್ನು ಸಹ ಒದಗಿಸುತ್ತಿದೆ.

ಬೆಂಗಳೂರು: ದಸರಾ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅ. 16ರಿಂದ 20ರವರೆಗೆ ರಾಜ್ಯ ಮತ್ತು ಹೊರರಾಜ್ಯದ ವಿವಿಧ ನಗರಗಳಿಗೆ ಕೆಎಸ್ಸಾರ್ಟಿಸಿ ಮೂರು ಸಾವಿರ ಹೆಚ್ಚುವರಿ ಬಸ್‌ ಸೇವೆ ನೀಡಲಿದೆ.

ಅ.16ರ ಶುಕ್ರವಾರ ರಾತ್ರಿಯಿಂದ ಅ.20ರವರೆಗೆ ಮೆಜೆಸ್ಟಿಕ್‌, ಮೈಸೂರು ರಸ್ತೆ, ಶಾಂತಿನಗರ ಬಸ್‌ ನಿಲ್ದಾಣಗಳಿಂದ ಹೆಚ್ಚುವರಿಯಾಗಿ ಮೂರು ಸಾವಿರ ಬಸ್‌ಗಳು ಸಂಚರಿಸಲಿವೆ. ಈ ಹೆಚ್ಚುವರಿ ಬಸ್‌ಗಳು ಅ. 20 ಮತ್ತು 21ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಾಪಾಸಾಗಲಿವೆ.

ದಸರಾ ಹಬ್ಬ ವೀಕ್ಷಣೆಗೆ ಮೈಸೂರಿಗೆ ತೆರಳುವವರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೆಚ್ಚುವರಿಯಾಗಿ 700 ಬಸ್‌ಗಳು ಸೇವೆ ನೀಡಲಿವೆ. ಅದರಲ್ಲಿ ಬೆಂಗಳೂರಿನ ಮೈಸೂರು ರಸ್ತೆಯಿಂದ ಮೈಸೂರು ನಗರಕ್ಕೆ 300 ಬಸ್‌ಗಳು ಹಾಗೂ ಮೈಸೂರು ಸುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಸ್ಥಳಗಳಿಗೆ 400 ಬಸ್‌ಗಳು ಸೇವೆ ನೀಡಲಿವೆ.

ಮೈಸೂರು-ಮಂಗಳೂರಿಗೆ ವಿಶೇಷ ಪ್ಯಾಕೇಜ್‌ ಸೇವೆ

ಮೈಸೂರಿಗೆ ದಸರಾ ವೀಕ್ಷಣೆಗೆ ಬರುವವರಿಗಾಗಿ ಕೆಎಸ್ಸಾರ್ಟಿಸಿ ಅ.15ರಿಂದ 26ರವರೆಗೆ ಒಂದು ದಿನದ ಮೂರು ಪ್ರವಾಸಿ ಪ್ಯಾಕೇಜ್‌ ಸೇವೆ ಒದಗಿಸುತ್ತಿದೆ. ‘ಗಿರಿದರ್ಶಿನಿ‘ ಪ್ಯಾಕೇಜ್‌ ಅಡಿ ಬಂಡಿಪುರ, ಗೋಪಾಲಸ್ವಾಮಿ ಬೆಟ್ಟ ಸೇರಿ ಇನ್ನಿತರ ಸ್ಥಳಗಳ ಪ್ರವಾಸ. ‘ಜಲದರ್ಶಿನಿ’ ಅಡಿ ಗೋಲ್ಡನ್‌ ಟೆಂಪಲ್‌, ದುಬಾರೆ ಅರಣ್ಯ ನಿಸರ್ಗಧಾಮ, ಹಾರಂಗಿ ಜಲಾಶಯ ಸೇರಿ ಇನ್ನಿತರ ಸ್ಥಳಗಳ ವೀಕ್ಷಣೆ ಹಾಗೂ ‘ದೇವದರ್ಶಿನಿ’ ಅಡಿ ನಂಜನಗೂಡು, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣಗಳಿಗೆ ಪ್ರವಾಸಿ ಪ್ಯಾಕೇಜ್‌ ಸೇವೆ ನೀಡಲಾಗುತ್ತಿದೆ.

ಇದನ್ನೂ ಓದಿ: Bengaluru: ಮನೆ ಮುಂದೆ ವಾಹನ ನಿಲ್ಲಿಸುವ ಮುನ್ನ ಈ ಹೊಸ ನಿಯಮ ತಿಳಿಯಿರಿ! ಸಂಚಾರ ದಟ್ಟಣೆ ನಿಯಂತ್ರಣ

ಮಂಗಳೂರು ದಸರಾ ವೀಕ್ಷಣೆಗೆ ಬರುವವರಿಗಾಗಿ ಅ. 11ರಿಂದ 20ರವರೆಗೆ 5 ಪ್ರವಾಸಿ ಪ್ಯಾಕೇಜ್‌ ಸೇವೆ ಒದಗಿಸಲಾಗುತ್ತಿದೆ. ಮಂಗಳೂರು-ತಲಕಾವೇರಿ-ಭಾಗಮಂಡಲ ಪ್ಯಾಕೇಜ್‌, ಮಂಗಳೂರು ದಸರಾ ಪ್ಯಾಕೇಜ್‌, ಮಂಗಳೂರು-ಕೊಲ್ಲೂರು ಪ್ಯಾಕೇಜ್‌, ಮಂಗಳೂರು-ಸಿಗಂದೂರು ಪ್ಯಾಕೇಜ್‌ ಮತ್ತು ಮಂಗಳೂರು-ಶೃಂಗೇರಿ ಪ್ಯಾಕೇಜ್‌ ಸೇವೆ ಒದಗಿಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಕೆಳಸೇತುವೆ ಕಾಮಗಾರಿ; 26 ಆಸ್ತಿಗಳ ಭೂ ಸ್ವಾಧೀನ ಪ್ರಕ್ರಿಯೆ ಆರಂಭಕ್ಕೆ ಸೂಚನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: Bengaluru - ಮನೆ ಮುಂದೆ ವಾಹನ ನಿಲ್ಲಿಸುವ ಮುನ್ನ ಈ ಹೊಸ ನಿಯಮ ತಿಳಿಯಿರಿ! ಸಂಚಾರ ದಟ್ಟಣೆ ನಿಯಂತ್ರಣ
KPSC ಪರೀಕ್ಷಾ ಅಕ್ರಮದಲ್ಲಿ ಮಾಜಿ ಸದಸ್ಯ ಎಸಿಪಿ ದುಗ್ಗಪ್ಪ ಹೆಸರು: ವಾಟ್ಸ್‌ಆ್ಯಪ್ ಚಾಟ್‌ ಜಾಲ ಬಯಲಿಗೆಳೆದ ED!